ಆನ್ ಲೈನ್ ನಲ್ಲಿ ಲೀಕ್ ಆದ Radhe, ಸಲ್ಮಾನ್ ಕೊಟ್ಟ ಎಚ್ಚರಿಕೆ ಏನು ಗೊತ್ತೇ?

ಸಲ್ಮಾನ್ ಖಾನ್ ಅವರ ಚಿತ್ರ ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್ ಒಟಿಟಿ ಪ್ಲಾಟ್‌ಫಾರ್ಮ್ ಜೀ 5 ನಲ್ಲಿ ಮೇ 13 ರಂದು ಬಿಡುಗಡೆಯಾಯಿತು.ಈಗ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ರಾಧೆ ಇಂಟರ್‌ನೆಟ್‌ನಲ್ಲಿ ಸೋರಿಕೆಯಾಗಿದೆ ಎಂದು ವರದಿಯಾಗಿದೆ.

Last Updated : May 16, 2021, 07:01 PM IST
  • ಶನಿವಾರ ಸಲ್ಮಾನ್ ಈ ವಿಷಯವನ್ನು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದು. ರಾಧೆಯನ್ನು ಅಕ್ರಮವಾಗಿ ಪೈರೇಟ್ ವೆಬ್‌ಸೈಟ್‌ಗಳಲ್ಲಿ ಪ್ರಸಾರ ಮಾಡುವುದನ್ನು ಗಂಭೀರ ಅಪರಾಧ ಎಂದು ಕರೆದಿದ್ದಾರೆ.
 ಆನ್ ಲೈನ್ ನಲ್ಲಿ ಲೀಕ್ ಆದ Radhe, ಸಲ್ಮಾನ್ ಕೊಟ್ಟ ಎಚ್ಚರಿಕೆ ಏನು ಗೊತ್ತೇ? title=
file photo

ನವದೆಹಲಿ: ಸಲ್ಮಾನ್ ಖಾನ್ ಅವರ ಚಿತ್ರ ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್ ಒಟಿಟಿ ಪ್ಲಾಟ್‌ಫಾರ್ಮ್ ಜೀ 5 ನಲ್ಲಿ ಮೇ 13 ರಂದು ಬಿಡುಗಡೆಯಾಯಿತು.ಈಗ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ರಾಧೆ ಇಂಟರ್‌ನೆಟ್‌ನಲ್ಲಿ ಸೋರಿಕೆಯಾಗಿದೆ ಎಂದು ವರದಿಯಾಗಿದೆ.

ಶನಿವಾರ ಸಲ್ಮಾನ್ ಈ ವಿಷಯವನ್ನು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದು. ರಾಧೆಯನ್ನು ಅಕ್ರಮವಾಗಿ ಪೈರೇಟ್ ವೆಬ್‌ಸೈಟ್‌ಗಳಲ್ಲಿ ಪ್ರಸಾರ ಮಾಡುವುದನ್ನು ಗಂಭೀರ ಅಪರಾಧ ಎಂದು ಕರೆದಿದ್ದಾರೆ

ಇದನ್ನೂ ಓದಿ : ಯುವಕರಿಗೆ ಕೊರೊನಾ ಬರುವ ಸಾಧ್ಯತೆ ಜಾಸ್ತಿ..! ಕಾರಣವೇನು ಗೊತ್ತೇ

"ನಮ್ಮ ರಾಧೆ ಚಲನಚಿತ್ರವನ್ನು ಪ್ರತಿ ವೀಕ್ಷಣೆಗೆ 249 ರೂ.ಗಳ ದರದಲ್ಲಿ ವೀಕ್ಷಿಸಲು ನಾವು ನಿಮಗೆ ಅವಕಾಶ ನೀಡಿದ್ದೇವೆ. ಆ ಪೈರೇಟ್ ಸೈಟ್‌ಗಳು ರಾಧೆಯನ್ನು ಕಾನೂನುಬಾಹಿರವಾಗಿ ಸ್ಟ್ರೀಮ್ ಮಾಡುತ್ತಿವೆ, ಇದು ಗಂಭೀರ ಅಪರಾಧವಾಗಿದೆ.ಈ ಅಕ್ರಮ ವೆಬ್‌ಸೈಟ್‌ಗಳ ವಿರುದ್ಧ ಸೈಬರ್ ಸೆಲ್ ಕ್ರಮ ತೆಗೆದುಕೊಳ್ಳುತ್ತಿದೆ" ಎಂದು ಸಲ್ಮಾನ್ (Salman Khan) ಹೇಳಿದರು.

"ಪೈರಸಿ ಕೃತ್ಯದಲ್ಲಿ ದಯವಿಟ್ಟು ಭಾಗವಹಿಸಬೇಡಿ ಅಥವಾ ಸೈಬರ್ ಸೆಲ್ ನಿಮ್ಮ ವಿರುದ್ಧವೂ ಕ್ರಮ ತೆಗೆದುಕೊಳ್ಳುತ್ತದೆ. ಸೈಬರ್ ಸೆಲ್‌ನೊಂದಿಗೆ ನೀವು ಸಾಕಷ್ಟು ತೊಂದರೆಗೆ ಸಿಲುಕುತ್ತೀರಿ ಎಂಬುದನ್ನು ದಯವಿಟ್ಟು ಅರ್ಥಮಾಡಿಕೊಳ್ಳಿ" ಎಂದು ಹೇಳಿದ್ದಾರೆ.

ರಾಧೆ ಬಿಡುಗಡೆಯಾಗುವ ಮೊದಲು, ಸಲ್ಮಾನ್ ಅವರು ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊವನ್ನು ಹಂಚಿಕೊಂಡು, ಅದರಲ್ಲಿ ಅವರು ಚಿತ್ರವನ್ನು ಅಧಿಕೃತ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ವೀಕ್ಷಿಸಲು ಮತ್ತು ಪೈರಸಿಯಲ್ಲಿ ಪಾಲ್ಗೊಳ್ಳದಂತೆ ಎಲ್ಲರಿಗೂ ಕೇಳಿಕೊಂಡರು.

"ಚಲನಚಿತ್ರ ಮಾಡುವಾಗ ಅನೇಕ ಜನರು ಕಷ್ಟಪಟ್ಟು ಕೆಲಸ ಮಾಡುತ್ತಾರೆ ಮತ್ತು ಕೆಲವರು ಅದನ್ನು ವೀಕ್ಷಿಸಲು ಪೈರಸಿ ಆಶ್ರಯಿಸಿದಾಗ ನನಗೆ ತುಂಬಾ ಬೇಸರವಾಗುತ್ತದೆ" ಎಂದು ಹೇಳಿದ್ದರು.

ಇದನ್ನೂ ಓದಿ : Ganga River- ಇಲ್ಲಿಯವರೆಗೆ 73 ಶವಗಳು ಪತ್ತೆ, ಜೆಸಿಬಿಯಿಂದ ಮುಂದುವರೆದ ಸಮಾಧಿ ಕಾರ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News