ಪಾಟ್ನಾ: ಗಂಗಾ ನದಿಯಿಂದ ಮೃತ ದೇಹಗಳನ್ನು ತೆಗೆಯುವ ಕಾರ್ಯ ಬಿಹಾರದ ಬಕ್ಸಾರ್ನಲ್ಲಿ ನಡೆಯುತ್ತಿದೆ. ಬಿಹಾರ ಸರ್ಕಾರದ ಪ್ರಕಾರ, ಬಕ್ಸಾರ್ ಜಿಲ್ಲೆಯ ಗಂಗೆಯಿಂದ ಈವರೆಗೆ ಒಟ್ಟು 73 ಶವಗಳನ್ನು ಹೊರತೆಗೆಯಲಾಗಿದೆ. ಆತಂಕಕಾರಿ ವಿಷಯ ಎಂದರೆ ಕೊರೊನಾವೈರಸ್ನಿಂದ ಮರಣ ಹೊಂದಿದವರ ದೇಹಗಳು ಗಂಗಾ ನದಿಯಲ್ಲಿ ಎಸೆಯಲಾಗಿದೆ ಎಂದು ನಂಬಲಾಗಿದೆ. ಅಂತಿಮ ವಿಧಿ-ವಿಧಾನಗಳನ್ನು ಮಾಡದೆಯೇ ಈ ಶವಗಳನ್ನು ಗಂಗಾ ನದಿಗೆ ಎಸೆದಿರುವ ಸಾಧ್ಯತೆಯಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಚೌಸಾ ಗ್ರಾಮದ ಮಹಾದೇವ್ ಘಾಟ್ನಲ್ಲಿ ಜೆಸಿಬಿಯಿಂದ ಅಗೆದು ಶವಗಳನ್ನು ಹೂಳಲಾಗುತ್ತಿದೆ.
ಉತ್ತರ ಪ್ರದೇಶದಿಂದ ಹರಿದುಬಂದ ಮೃತ ದೇಹಗಳು:
ಬಿಹಾರ ಜಲಸಂಪನ್ಮೂಲ ಸಚಿವ ಸಂಜಯ್ ಕುಮಾರ್ ಜಾ, ಬಕ್ಸಾರ್ ಜಿಲ್ಲೆಯ ಚೌಸಾ ಗ್ರಾಮದ ಬಳಿಯ ಗಂಗಾ ನದಿಯಲ್ಲಿ (Ganga River) ಪತ್ತೆಯಾದ ಶವಗಳನ್ನು ಉಲ್ಲೇಖಿಸುತ್ತಾ, ಈ 4-5 ದಿನಗಳ ಹಳೆಯ ವಿಕೃತ ದೇಹಗಳು ನೆರೆಯ ರಾಜ್ಯವಾದ ಉತ್ತರ ಪ್ರದೇಶದಿಂದ ಕೊಚ್ಚಿಕೊಂಡು ಬಂದವು ಎಂದು ಹೇಳಿದರು.
ಇದನ್ನೂ ಓದಿ - CSIR Research: ಈ ಎರಡು Blood Group ಹೊಂದಿರುವ ಜನರಿಗೆ ಕೊರೊನಾ ಸೋಂಕಿನ ಅಪಾಯ ಹೆಚ್ಚು
ಗಂಗಾ ನದಿಗೆ ರಾಣಿಘಾಟ್ ನಲ್ಲಿ ಬಲೆ ಹಾಕಲಾಗಿದೆ:
ಇದು ಮರುಕಳಿಸದಂತೆ ನದಿಯ ಉದ್ದಕ್ಕೂ ಗಸ್ತು ಹೆಚ್ಚಿಸುವಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಜಿಲ್ಲಾಡಳಿತವನ್ನು ಕೋರಿದ್ದಾರೆ. ಜಾ ಟ್ವೀಟ್ ಮಾಡಿ, 'ಉತ್ತರ ಪ್ರದೇಶ ಮತ್ತು ಬಿಹಾರದ ಗಡಿಯಲ್ಲಿರುವ ರಾಣಿಘಾಟ್ ಬಳಿ ಗಂಗಾ ನದಿಗೆ ಬಲೆ ಹಾಕಲಾಗಿದೆ. ಉತ್ತರಪ್ರದೇಶ ಆಡಳಿತವು ಜಾಗರೂಕರಾಗಿರಿ ಎಂದು ನಾವು ಸಲಹೆ ನೀಡಿದ್ದೇವೆ. ನಮ್ಮ ಆಡಳಿತವೂ ಜಾಗರೂಕತೆಯನ್ನು ಕಾಪಾಡುತ್ತಿದೆ. ಈ ಮಧ್ಯೆ ಬಕ್ಸಾರ್ನ ಉಪವಿಭಾಗದ ಅಧಿಕಾರಿ ಕೆ.ಕೆ. ಉಪಾಧ್ಯಾಯ ಅವರು ಮಂಗಳವಾರ ಉತ್ತರ ಪ್ರದೇಶದ ಕಡೆಯಿಂದ ಗಡಿಯಲ್ಲಿ ಹಾಕಿದ ಬಲೆ ಬಳಿ ಇತರ ಎರಡು ಶವಗಳು ಪತ್ತೆಯಾಗಿದ್ದು, ಅವುಗಳ ಅಂತ್ಯಕ್ರಿಯೆಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ - Corona Treatment: ಕರೋನಾ ಚಿಕಿತ್ಸೆಗಾಗಿ ಸರ್ಕಾರ ನೀಡುತ್ತಿದೆ 5 ಲಕ್ಷ ರೂಪಾಯಿ, ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಿ
ಸತ್ತವರಲ್ಲಿ ಯಾರೂ ಬಿಹಾರ ಮೂಲದವರಲ್ಲ:
ಬಕ್ಸಾರ್ ಜಿಲ್ಲೆಯ ಚೌಸಾದ ಗಂಗಾ ನದಿಯಲ್ಲಿ ಹೆಚ್ಚಿನ ಸಂಖ್ಯೆಯ ಮೃತ ದೇಹಗಳು ಕಂಡುಬಂದವು. ಮೃತಪಟ್ಟ ಕರೋನಾ ರೋಗಿಗಳ ದೇಹವನ್ನು ನದಿಗೆ ಎಸೆಯಲಾಗಿದೆ ಎಂದು ಹೇಳಲಾಗಿದೆ. ಬಡತನ ಮತ್ತು ಸಂಪನ್ಮೂಲಗಳ ಕೊರತೆಯಿಂದಾಗಿ ಕುಟುಂಬ ಸದಸ್ಯರು ಅವರ ದೇಹಗಳನ್ನು ಕೈಬಿಟ್ಟರು ಅಥವಾ ಸರ್ಕಾರಿ ನೌಕರರು ತಾವು ಸೋಂಕಿಗೆ ಬಲಿಯಾಗಬಹುದೆಂಬ ಭಯದಿಂದ, ಶವಗಳನ್ನು ನದಿಯಲ್ಲಿ ಎಸೆಯುವ ಮೂಲಕ ತಪ್ಪಿಸಿಕೊಂಡಿರಬಹುದು ಎಂದು ಊಹಿಸಲಾಗಿದೆ. ಸತ್ತವರಲ್ಲಿ ಯಾರೊಬ್ಬರೂ ಬಕ್ಸಾರ್ ಜಿಲ್ಲೆಯ ನಿವಾಸಿಗಳಲ್ಲ ಎಂದು ಚೌಸಾದ ಬ್ಲಾಕ್ ಅಭಿವೃದ್ಧಿ ಅಧಿಕಾರಿ ಅಶೋಕ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.