ಕೋಲ್ಕತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಪಕ್ಷದ ಮಂತ್ರಿಗಳು, ಮಾಜಿ ಮಂತ್ರಿಗಳು ಮತ್ತು ಶಾಸಕರ ಮೇಲೆ ಸಿಬಿಐ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಟಿಎಂಸಿ ಸಚಿವ ಫಿರ್ಹಾದ್ ಹಕೀಮ್, ಸುಬ್ರತಾ ಮುಖರ್ಜಿ, ಟಿಎಂಸಿ ಶಾಸಕ ಮದನ್ ಮಿತ್ರ, ಮಾಜಿ ಸಚಿವ ಸೋವನ್ ಚಟರ್ಜಿ ಅವರನ್ನು ಸಿಬಿಐ ಇಂದು (ಸೋಮವಾರ) ಬೆಳಿಗ್ಗೆ ಬಂಧಿಸಿದೆ. ನರಾಡ ಪ್ರಕರಣದಲ್ಲಿ ಸಿಬಿಐ ಈ ನಾಲ್ವರನ್ನು ವಿಚಾರಣೆ ನಡೆಸಲಿದೆ.
ನರಾಡ ಪ್ರಕರಣದಲ್ಲಿ ಸಚಿವ ಫಿರ್ಹಾದ್ ಹಕೀಮ್ ಬಂಧನ:
ಸಿಬಿಐ (CBI) ತಂಡ ಇಂದು ಬೆಳಿಗ್ಗೆ ಪಶ್ಚಿಮ ಬಂಗಾಳ ಸರ್ಕಾರದಲ್ಲಿ ಸಚಿವರಾಗಿರುವ ಫಿರ್ಹಾದ್ ಹಕೀಮ್ ಅವರನ್ನು ಬಂಧಿಸಿದೆ. ಈ ಸಂದರ್ಭದಲ್ಲಿ ಸಿಬಿಐ ತಂಡದ ಜೊತೆಗೆ ಸಿಆರ್‌ಪಿಎಫ್ ಸಿಬ್ಬಂದಿ ಉಪಸ್ಥಿತರಿದ್ದರು.
ಮದನ್ ಮಿತ್ರ ಮತ್ತು ಸೋವನ್ ಚಟರ್ಜಿ ವಿಚಾರಣೆ:
ಇದಲ್ಲದೆ ನರಾಡ ಪ್ರಕರಣಕ್ಕೆ (Narada Case) ಸಂಬಂಧಿಸಿದಂತೆ ಟಿಎಂಸಿ ಶಾಸಕ ಮದನ್ ಮಿತ್ರ ಮತ್ತು ಮಾಜಿ ಸಚಿವ ಸೋವನ್ ಚಟರ್ಜಿಯನ್ನೂ ಸಿಬಿಐ ವಿಚಾರಣೆ ನಡೆಸುತ್ತಿದೆ. ವಿಚಾರಣೆಗಾಗಿ ಇವರಿಬ್ಬರನ್ನೂ ಸಿಬಿಐ ಕಚೇರಿಗೆ ಕರೆತರಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
West Bengal: TMC Ministers Firhad Hakim, Subrata Mukherjee, MLA Madan Mitra & Former Mayor Sovhan Chatterjee were brought to the CBI office in connection with Narada Scam
— ANI (@ANI) May 17, 2021
ಇದನ್ನೂ ಓದಿ - ಇಂದು ಬಿಡುಗಡೆಯಾಗಲಿದೆ DRDO's anti-COVID drug
ಪಶ್ಚಿಮ ಬಂಗಾಳ ಸರ್ಕಾರದ ಸಚಿವರಾಗಿರುವ ಸುಬ್ರತಾ ಮುಖರ್ಜಿ ಅವರು ಕೋಲ್ಕತ್ತಾದ ಸಿಬಿಐ ಕಚೇರಿಯನ್ನು ತಲುಪಿದ್ದಾರೆ. ನರಾಡ ಪ್ರಕರಣದಲ್ಲಿ ಸಿಬಿಐ ಇಂದು ಫಿರ್ಹಾದ್ ಹಕೀಮ್, ಮದನ್ ಮಿತ್ರ, ಸುಬ್ರತಾ ಮುಖರ್ಜಿ ಮತ್ತು ಸೋವನ್ ಚಟರ್ಜಿಯನ್ನು ವಿಚಾರಣೆ ನಡೆಸುತ್ತಿದೆ.
ಗಮನಿಸಬೇಕಾದ ಸಂಗತಿಯೆಂದರೆ, ಕಳೆದ ವಾರದ ಆರಂಭದಲ್ಲಿ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಅವರು ನಾಲ್ವರು ಮಾಜಿ ಟಿಎಂಸಿ ಮಂತ್ರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮೋದನೆ ನೀಡಿದ್ದರು.
Governor accorded sanction for prosecution of Firhad Hakim, Subrata Mukherjee, Madan Mitra & Sovan Chatterjee being appointing authority of Ministers @MamataOfficial under Article 164 & thus competent authority
Media reports that sanction was for being MLA is incorrect. pic.twitter.com/vqEg7Cv6OW
— Governor West Bengal Jagdeep Dhankhar (@jdhankhar1) May 9, 2021
ಇದನ್ನೂ ಓದಿ - Cyclone Tauktae: 'ತೌಕ್ತೆ' ಚಂಡಮಾರುತ ಹಿನ್ನಲೆ ಮುಂಬಯಿಯಲ್ಲಿ ಇಂದೂ ಸ್ಥಗಿತಗೊಂಡ ವ್ಯಾಕ್ಸಿನೇಷನ್
ಈ ಮಧ್ಯೆ ಟಿಎಂಸಿ ಸಚಿವರು ಮತ್ತು ಶಾಸಕರ ಬಂಧನದ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ರಾಹುಲ್ ಸಿನ್ಹಾ ಇದರ ಹಿಂದೆ ಬಿಜೆಪಿಯ ಕೈವಾಡವಿಲ್ಲ ಎಂದು ಸ್ಪಷ್ಪಡಿಸಿದ್ದಾರೆ. ಟಿಎಂಸಿ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಅವರು ಮಹಿಳೆಯರನ್ನು ಹಿಂಸಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ಇಂದು ಇವರನ್ನು ಬಂಧಿಸಲಾಗಿದೆ. ಅವರೆಲ್ಲರೂ ಹಗರಣದಲ್ಲಿ ಭಾಗಿಯಾಗಿದ್ದು ಸಿಬಿಐ ತನಿಖೆ ಎದುರಿಸುತ್ತಿದ್ದಾರೆ. ಬಿಜೆಪಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.