High Mileage Cars In India - ದುಬಾರಿ ತೈಲ ಬೆಲೆ ಜನರ ಜೇಬಿನ ಮೇಲಿನ ಭಾರ ಹೆಚ್ಚಿಸಿದೆ. ಹೀಗಿರುವಾಗ 10 ಲಕ್ಷ ರೂ.ಗಳಿಗೂ ಕಡಿಮೆ ಬೆಲೆಗೆ ಸಿಗುವ ಕೆಲ ಕಾರುಗಳು 25 ಕಿ.ಮೀಗೂ ಅಧಿಕ ಮೈಲೇಜ್ ನೀಡುತ್ತಿವೆ. ಹಾಗಾದರೆ ಬನ್ನಿ ಆ ಕಾರುಗಳು ಯಾವುವು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ.
ನವದೆಹಲಿ: High Mileage Cars In India - ದುಬಾರಿ ತೈಲ ಬೆಲೆ ಜನರ ಜೇಬಿನ ಮೇಲೆ ಭಾರಿ ಪರಿಣಾಮ ಬೀರುತ್ತಿದೆ ಹಾಗೂ ಇದು ಅವರ ದೈನಂದಿನ ಓಡಾಟದ ಮೇಲೂ ಕೂಡ ಪ್ರಭಾವ ಬೀರುತ್ತಿದೆ. ಕೆಲ ಜನರು ನಾಲ್ಕು ಚಕ್ರಗಳ ವಾಹನದ ಮೂಲಕ ಪ್ರಯಾಣಿಸುವುದನ್ನೇ ನಿಲ್ಲಿಸಿದ್ದಾರೆ. ಕಾರಣ ಅವರ ಈ ಓಡಾಟ ಅವರಿಗೆ ದುಬಾರಿ ಬೀಳುತ್ತಿದೆ. ಇನ್ನುಳಿದವರು ದೀರ್ಘಕಾಲ ಕಾರುಗಳನ್ನು ಓಡಿಸದೇ ಹಾಗೆಯೇ ಬಿಡುವುದರಿಂದ ಅವುಗಳಲ್ಲಿ ತಾಂತ್ರಿಕ ಸಮಸ್ಯೆಗಳು ಎದುರಾಗಬಹುದು ಎಂಬ ಒಂದೇ ಒಂದು ಕಾರಣಕ್ಕೆ ಕಾರುಗಳನ್ನು ಬಲವಂತವಾಗಿ ಓಡಾಡಿಸುತ್ತಿದ್ದಾರೆ. ಹೀಗಿರುವಾಗ ತಮ್ಮ ಜೇಬಿನ ಮೇಲೆ ಉಂಟಾಗುತ್ತಿರುವ ತೈಲಬೆಲೆಯ ಹೊರೆಯಿಂದ ಪಾರಾಗಲು ಜನರು ಆಗ್ಗದ ಬೆಲೆಗೆ ಸಿಗುವ ಮತ್ತು ಅಧಿಕ ಮೈಲೇಜ್ ನೀಡುವ ಕಾರುಗಳಿಗಾಗಿ ಗೂಗಲ್ ಮಾಡುತ್ತಿದ್ದಾರೆ. ದೇಶದ ಹಲವು ನಗರಗಳಲ್ಲಿ ಪೆಟ್ರೋಲ್ ದರ 100ರ ಗಡಿ ದಾಟಿದೆ. ಹೀಗಾಗಿ 10 ಲಕ್ಷಕ್ಕೂ ಕಡಿಮೆ ಬೆಲೆಯ Hyundai i20, Tata Altroz ಹಾಗೂ Hyundai Verna ಕಾರುಗಳು ಪ್ರತಿ ಲೀಟರ್ ಗೆ 25 ಕಿ.ಮೀ ಮೈಲೇಜ್ ನೀಡುತ್ತಿದ್ದು, ಎಣ್ಣೆಯ ಖರ್ಚು ಕೂಡ ತಗ್ಗಿಸಲಿವೆ.
ಇದನ್ನೂ ಓದಿ- Emergency Fund: ಕೊರೊನಾದಂತಹ ಸಂಕಷ್ಟ ಎದುರಿಸಲು ಇಂದಿನಿಂದಲೇ ಸಿದ್ಧಗೊಳಿಸಿ 'ತುರ್ತು ನಿಧಿ'
Maruti Ertiga CNG ಆವೃತ್ತಿ ಪ್ರತಿ ಕಿ.ಗ್ರಾಂಗೆ 26 ಕಿ.ಮೀಗಳ ವರೆಗೆ ಮೈಲೇಜ್ ನೀಡುತ್ತದೆ. ಇನ್ನೊಂದೆಡೆ Maruti Wagon R ಕುರಿತು ಹೇಳುವುದಾದರೆ ಸಿಎನ್ ಜಿ ಆವೃತ್ತಿ 32.52 ಕಿ.ಮೀ ವರೆಗೆ ಮೈಲೇಜ್ ನೀಡುತ್ತಿದೆ ಎನ್ನಲಾಗಿದೆ. ಈ ಕೆಳಗೆ ಕೆಲ ಕಾರುಗಳ ಪಟ್ಟಿಯನ್ನು ನೀಡಲಾಗಿದ್ದು ಈ ಕಾರುಗಳು 25 ಕಿ.ಮೀ ಅಥವಾ ಅದಕ್ಕಿಂತ ಹೆಚ್ಚು ಮೈಲೇಜ್ ನೀಡುತ್ತವೆ.
ಇದನ್ನೂ ಓದಿ- PMBJP:ಸರ್ಕಾರದ ಸಹಾಯದಿಂದ ಮನೆಯಿಂದಲೇ ಆರಂಭಿಸಿ ಈ ಉದ್ಯೋಗ, ಕೈತುಂಬಾ ಗಳಿಕೆಯ ಅವಕಾಶ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
10 ಲಕ್ಷ ರೂ.ಗಳಿಗೂ ಕಮ್ಮಿ ಬೆಲೆಗೆ ಅಧಿಕ ಮೈಲೇಜ್ ನೀಡುವ ಕಾರುಗಳು: 1.Hyundai i20 - ಪೆಟ್ರೋಲ್-ಡೀಸೆಲ್ ಕಾರಿನ ಬಗ್ಗೆ ಹೇಳುವುದಾದರೆ, ಹ್ಯುಂಡೈ ಐ 20 ಒಂದು ಉತ್ತಮ ಆಯ್ಕೆಯಾಗಿದೆ. ಈ ಕಾರಿನ ಎಕ್ಸ್ ಶೋರೂಂ ಬೆಲೆ (ದೆಹಲಿ) 6.85 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ ಮತ್ತು ಇದು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ಗಳಲ್ಲಿ ಲಭ್ಯವಿದೆ. ಈ ಕಾರು ಲೀಟರ್ ಗೆ 25 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ.
2. Hyundai Verna 25 - ಹ್ಯುಂಡೈ ಕಂಪನಿಯ ಮತ್ತೊಂದು ಕಾರು 25 ಕಿ.ಮೀ ಮೈಲೇಜ್ ನೀಡುತ್ತಿದೆ. ವರ್ನಾ 25 ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ ಮತ್ತು ಇದರ ಬೆಲೆ 9.19 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ. ಈ ಕಾರು ಲೀಟರ್ ಗೆ 25 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ.
3. Tata Altroz - ಟಾಟಾ ಕಂಪನಿಯ ಈ ಕಾರು ಸಹ ಗ್ರಾಹಕರಿಗೆ ಉತ್ತಮ ಮೈಲೇಜ್ ಆಯ್ಕೆ ನೀಡುತ್ತಿದೆ. ಟಾಟಾದ ಆಲ್ಟ್ರೋಸ್ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಯಲ್ಲಿ ಲಭ್ಯವಿದೆ ಮತ್ತು ಇದರ ಎಕ್ಸ್ ಶೋ ರೂಂ ಬೆಲೆ (ದೆಹಲಿ) 5.69 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ. ಈ ಕಾರು ಲೀಟರ್ ಗೆ ಗರಿಷ್ಠ 25 ಕಿ.ಮೀ. ಮೈಲೇಜ್ ನೀಡುತ್ತದೆ.
4.Kia Sonet - ಕಿಯಾ ಕಂಪನಿಯ ಸಾನೆಟ್ ಕಾರು ಡೀಸೆಲ್ ಮತ್ತು ಪೆಟ್ರೋಲ್ ರೂಪಾಂತರಗಳಲ್ಲಿ ಲಭ್ಯವಿದೆ ಮತ್ತು ಈ ಕಾರ್ ನ ಎಕ್ಸ್ ಶೋ ರೂಂ ಬೆಲೆ 6.79 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ. ಈ ಕಾರು ಲೀಟರ್‌ನಲ್ಲಿ 24 ಕಿ.ಮೀ.ವರೆಗೆ ಓಡುತ್ತದೆ.
5.Maruti Baleno - ಮಾರುತಿಯ ಬಲೆನೊ ಪೆಟ್ರೋಲ್ ರೂಪಾಂತರದಲ್ಲಿ ಮಾತ್ರ ಲಭ್ಯವಿದೆ ಮತ್ತು ಇದರ ಎಕ್ಸ್ ಶೋ ರೂಂ ಬೆಲೆ 5.98 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ. ಕಂಪನಿಯ ಹೇಳಿಕೆಯ ಪ್ರಕಾರ, ಈ ಕಾರು ಪ್ರತಿ ಲೀಟರ್‌ಗೆ 23 ಕಿ.ಮೀ ಮೈಲೇಜ್ ನೀಡುತ್ತಿದೆ.