ITR Filing : ತೆರಿಗೆದಾರರಿಗೆ ಗುಡ್ ನ್ಯೂಸ್: IT ರಿಟರ್ನ್ಸ್ ದಿನಾಂಕ 2 ತಿಂಗಳು ವಿಸ್ತರಣೆ!

ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT)ಕಂಪೆನಿಗಳಿಗೆ ಐಟಿಆರ್ ಸಲ್ಲಿಸುವ ಗಡುವನ್ನು ನವೆಂಬರ್ 30 ರವರೆಗೆ ವಿಸ್ತರಿಸಿದೆ.

Last Updated : May 21, 2021, 10:54 AM IST
  • ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ದಿನಾಂಕ ಕೇಂದ್ರ ಸರ್ಕಾರ ಎರಡು ತಿಂಗಳ ವಿಸ್ತರಿಸಿದ್ದು
  • ಆದಾಯ ತೆರಿಗೆ ಕಾನೂನಿನ ಪ್ರಕಾರ, ಲೆಕ್ಕಪರಿಶೋಧನೆಯ ಅಗತ್ಯವಿಲ್ಲ
  • ಐಟಿಆರ್ ಸಲ್ಲಿಸಲು ಗಡುವು ಜುಲೈ 31 ಆಗಿತ್ತು.
ITR Filing : ತೆರಿಗೆದಾರರಿಗೆ ಗುಡ್ ನ್ಯೂಸ್: IT ರಿಟರ್ನ್ಸ್ ದಿನಾಂಕ 2 ತಿಂಗಳು ವಿಸ್ತರಣೆ! title=

ನವದೆಹಲಿ : ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸುವ ದಿನಾಂಕವನ್ನು ಕೇಂದ್ರ ಸರ್ಕಾರ ಎರಡು ತಿಂಗಳ ವಿಸ್ತರಿಸಿ ಆದೇಶ ಹೊರಡಿಸಿದೆ, ಸಧ್ಯ ದಿನಾಂಕವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿದೆ. ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT)ಕಂಪೆನಿಗಳಿಗೆ ಐಟಿಆರ್ ಸಲ್ಲಿಸುವ ಗಡುವನ್ನು ನವೆಂಬರ್ 30 ರವರೆಗೆ ವಿಸ್ತರಿಸಿದೆ.

ಆದಾಯ ತೆರಿಗೆ ಕಾನೂನಿನ ಪ್ರಕಾರ, ಲೆಕ್ಕಪರಿಶೋಧನೆಯ ಅಗತ್ಯವಿಲ್ಲದ ಮತ್ತು ಸಾಮಾನ್ಯವಾಗಿ ಐಟಿಆರ್ -1 ಅಥವಾ ಐಟಿಆರ್ -4 ಬಳಸಿ ಆದಾಯ ತೆರಿಗೆ ರಿಟರ್ನ್(Income Tax Return) ಸಲ್ಲಿಸುವ ವ್ಯಕ್ತಿಗಳಿಗೆ ಐಟಿಆರ್ ಸಲ್ಲಿಸಲು ಗಡುವು ಜುಲೈ 31 ಆಗಿತ್ತು.

ಇದನ್ನೂ ಓದಿ : ಅಗ್ಗದ ಬೆಲೆಯಲ್ಲಿ ಚಿನ್ನ ಖರೀದಿಸಲು ಇಂದೇ ಕೊನೆಯ ಅವಕಾಶ

ಜೊತೆಗೆ ಕಂಪನಿಗಳಂತೆ ತೆರಿಗೆ ಪಾವತಿ(Taxpayer)ದಾರರಿಗೆ ಗಡುವು ಅಥವಾ ಆಡಿಟ್ ಮಾಡಬೇಕಾದ ಸಂಸ್ಥೆಗಳ ಅವಧಿಯು ಅಕ್ಟೋಬರ್ 31 ಆಗಿದೆ. ಇದರೊಂದಿಗೆ ಜೂನ್ 7 ರಂದು ಆದಾಯ ತೆರಿಗೆ ಕಟ್ಟಲು ಹೊಸ ವೆಬ್ ತಾಣ http://www.incometaxindiaefiling.gov.in/homeವನ್ನು ಇಲಾಖೆ ಪರಿಚಯಿಸುತ್ತಿದೆ.

ಇದನ್ನೂ ಓದಿ : Bank Alert‌ : 3 ದಿನ 'SBI ಇಂಟರ್ನೆಟ್ ಬ್ಯಾಂಕಿಂಗ್ UPI, YONO ಬಂದ್ : ಇಲ್ಲಿದೆ ಸಂಪೂರ್ಣ ಮಾಹಿತಿ

ಇನ್ನು ಉದ್ಯೋಗದಾತರಿಂದ(Employers) ಉದ್ಯೋಗಿಗಳಿಗೆ ಫಾರ್ಮ್- 16 ನೀಡುವ ಗಡುವನ್ನು ಜುಲೈ 15 ರವರೆಗೆ ಒಂದು ತಿಂಗಳವರೆಗೆ ವಿಸ್ತರಿಸಲಾಗಿದೆ ಎಂದು ಸಿಬಿಡಿಟಿ ಹೇಳಿದೆ.

ಇದನ್ನೂ ಓದಿ : Work from home ನಿಂದ ಬೇಸತ್ತಿದ್ದರೆ IRCTC ನೀಡುತ್ತಿದೆ ವರ್ಕ್ ಫ್ರಮ್ ಹೊಟೇಲ್ ಆಫರ್

ಆಡಿಟ್ ರಿಪೋರ್ಟ್‌(Audit Report) ಮತ್ತು ಟ್ರಾನ್ಸ್‌ಫರ್ ಪ್ರೈಸಿಂಗ್ ಸರ್ಟಿಫಿಕೆಟ್ ಸಲ್ಲಿಸುವ ದಿನಾಂಕವನ್ನು ಕ್ರಮವಾಗಿ ಅಕ್ಟೋಬರ್ 31 ಮತ್ತು ನವೆಂಬರ್ 30 ರವರೆಗೆ ವಿಸ್ತರಿಸಲಾಗಿದೆ. ಪರಿಷ್ಕೃತ ಆದಾಯವನ್ನು ಸಲ್ಲಿಸಲು, ಅಂತಿಮ ದಿನಾಂಕವು ಈಗ ಜನವರಿ 31, 2022 ಆಗಿದೆ.

ಇದನ್ನೂ ಓದಿ : Paytm, PhonePe, Amazon Pay ಬಳಕೆದಾರರಿಗೆ ಬಿಗ್ ನ್ಯೂಸ್ : ಈಗ ನೀವು ಇವುಗಳನ್ನ ಬಳಸಿ ATM  ನಿಂದ ಹಣ ಪಡೆಯಬಹದು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News