"ಮಮತಾ ದೀದಿ ನನಗೆ ನಿಮ್ಮನ್ನು ಬಿಟ್ಟು ಇರಲು ಸಾಧ್ಯವಿಲ್ಲ"

ಚುನಾವಣೆಗೆ ಮುನ್ನ ಬಿಜೆಪಿಗೆ ಸೇರಿದ್ದ ಮಾಜಿ ಟಿಎಂಸಿ ಶಾಸಕ ಸೋನಾಲಿ ಗುಹಾ ಅವರು ಶನಿವಾರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಪತ್ರ ಬರೆದು, ಪಕ್ಷವನ್ನು ತೊರೆದಿದ್ದಕ್ಕಾಗಿ ಕ್ಷಮೆಯಾಚಿಸಿದರು.ಅಷ್ಟೇ ಅಲ್ಲದೆ ತಮ್ಮನ್ನು ಪಕ್ಷಕ್ಕೆ ವಾಪಸ್ ಕರೆದುಕೊಳ್ಳಲು ವಿನಂತಿಸಿಕೊಂಡರು.

Last Updated : May 22, 2021, 08:12 PM IST
  • ಚುನಾವಣೆಗೆ ಮುನ್ನ ಬಿಜೆಪಿಗೆ ಸೇರಿದ್ದ ಮಾಜಿ ಟಿಎಂಸಿ ಶಾಸಕಿ ಸೋನಾಲಿ ಗುಹಾ ಅವರು ಶನಿವಾರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಪತ್ರ ಬರೆದು, ಪಕ್ಷವನ್ನು ತೊರೆದಿದ್ದಕ್ಕಾಗಿ ಕ್ಷಮೆಯಾಚಿಸಿ ತಮ್ಮನ್ನು ಪಕ್ಷಕ್ಕೆ ವಾಪಸ್ ಕರೆದುಕೊಳ್ಳಲು ವಿನಂತಿಸಿಕೊಂಡರು
"ಮಮತಾ ದೀದಿ ನನಗೆ ನಿಮ್ಮನ್ನು ಬಿಟ್ಟು ಇರಲು ಸಾಧ್ಯವಿಲ್ಲ"  title=

ನವದೆಹಲಿ: ಚುನಾವಣೆಗೆ ಮುನ್ನ ಬಿಜೆಪಿಗೆ ಸೇರಿದ್ದ ಮಾಜಿ ಟಿಎಂಸಿ ಶಾಸಕಿ ಸೋನಾಲಿ ಗುಹಾ ಅವರು ಶನಿವಾರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಪತ್ರ ಬರೆದು, ಪಕ್ಷವನ್ನು ತೊರೆದಿದ್ದಕ್ಕಾಗಿ ಕ್ಷಮೆಯಾಚಿಸಿ ತಮ್ಮನ್ನು ಪಕ್ಷಕ್ಕೆ ವಾಪಸ್ ಕರೆದುಕೊಳ್ಳಲು ವಿನಂತಿಸಿಕೊಂಡರು.

ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಪತ್ರದಲ್ಲಿ,ಗುಹಾ ಅವರು ಭಾವುಕರಾದ ನಂತರ ಪಕ್ಷವನ್ನು ತೊರೆದಿದ್ದಾರೆ ಎಂದು ಹೇಳಿದ್ದಾರೆ.

'ನಾನು ಇದನ್ನು ಒಡೆದ ಹೃದಯದಿಂದ ಬರೆಯುತ್ತಿದ್ದೇನೆ, ನಾನು ಭಾವನಾತ್ಮಕವಾದ ನಂತರ ಮತ್ತೊಂದು ಪಕ್ಷಕ್ಕೆ ಸೇರುವ ತಪ್ಪು ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ನನಗೆ ಅಲ್ಲಿ ಒಗ್ಗಿಕೊಳ್ಳಲು ಸಾಧ್ಯವಾಗಲಿಲ್ಲ, ಒಂದು ಮೀನು ನೀರಿನಿಂದ ಹೊರಗುಳಿಯಲು ಸಾಧ್ಯವಿಲ್ಲ, ಅದೇ ರೀತಿ ನೀವು ಇಲ್ಲದೆ ನಾನು ಬದುಕಲು ಸಾಧ್ಯವಿಲ್ಲ,‘ ದೀದಿ . ನಾನು ನಿಮ್ಮ ಕ್ಷಮೆ ಕೋರುತ್ತೇನೆ ಮತ್ತು ನೀವು ನನ್ನನ್ನು ಕ್ಷಮಿಸದಿದ್ದರೆ, ನನಗೆ ಬದುಕಲು ಸಾಧ್ಯವಾಗುವುದಿಲ್ಲ.ದಯವಿಟ್ಟು ನನಗೆ ಹಿಂತಿರುಗಲು ಅವಕಾಶ ನೀಡಿ ಮತ್ತು ನನ್ನ ಉಳಿದ ಜೀವನವನ್ನು ನಿಮ್ಮ ವಾತ್ಸಲ್ಯದಲ್ಲಿ ಕಳೆಯಲು ಅವಕಾಶ ನೀಡಿ, "ಎಂದು ಅವರು ಹೇಳಿದರು.

ಇದನ್ನೂ ಓದಿ : One Nation One Ration Card : ಪಡಿತರ ಚೀಟಿದಾರರಿಗೊಂದು ಸಿಹಿ ಸುದ್ದಿ..!

ನಾಲ್ಕು ಬಾರಿ ಶಾಸಕರಾಗಿದ್ದ ಗುಹಾ ಈ ಹಿಂದೆ ಮಮತಾ ದೀದಿಗೆ ಅತಿ ಆಪ್ತರಾಗಿದ್ದರು.ಈ ಬಾರಿ ಅವರಿಗೆ ಟಿಎಂಸಿ ಟಿಕೆಟ್ ನಿರಾಕರಿಸಿದ ಹಿನ್ನಲೆಯಲ್ಲಿ ಅವರು ಟಿಎಂಸಿ ತೊರೆದು ಬಿಜೆಪಿಗೆ ಸೇರಿದ್ದರು.ಆದರೆ ಅವರು ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ ಬದಲಾಗಿದೆ ಬಿಜೆಪಿ ಸಂಘಟನೆ ಬಲಪಡಿಸುವುದಾಗಿ ಹೇಳಿದ್ದರು.

ಈಗ ಮತ್ತೆ ವಾಪಸ್ ಟಿಎಂಸಿ ಸೇರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು "ಬಿಜೆಪಿಗೆ ಸೇರ್ಪಡೆಗೊಳ್ಳುವ ನನ್ನ ನಿರ್ಧಾರ ತಪ್ಪು ಮತ್ತು ಇಂದು ನಾನು ಅದನ್ನು ಅನುಭವಿಸಬಹುದು. ಆ ಪಕ್ಷವನ್ನು ತೊರೆಯುವ ಬಗ್ಗೆ ಬಿಜೆಪಿಗೆ ಹೇಳಲು ನಾನು ತಲೆಕೆಡಿಸಿಕೊಳ್ಳಲಿಲ್ಲ. ನಾನು ಯಾವಾಗಲೂ ಅಲ್ಲಿ ಅನಗತ್ಯ ಎಂದು ಭಾವಿಸಿದೆ. ಅವರು ನನ್ನನ್ನು ಬಳಸಲು ಪ್ರಯತ್ನಿಸಿದರು ಮತ್ತು ಮಮತಾ (Mamata Banerjee) ದೀದಿ ಬಗ್ಗೆ ಕೆಟ್ಟದಾಗಿ ಮಾತನಾಡಲು ನನಗೆ ಹೇಳಿದರು.ಆದರೆ ನಾನು ಅದನ್ನು ಮಾಡಲು ಸಾಧ್ಯವಾಗಲಿಲ್ಲ, "ಎಂದು ಅವರು ಹೇಳಿದರು.

ಇದನ್ನೂ ಓದಿ: Funny Viral Video: Coronavirus ಹೊಡೆದೋಡಿಸು ಈ Viral Video ವೀಕ್ಷಿಸಲು ಮರೆಯಬೇಡಿ

ಟಿಎಂಸಿಗೆ ಮತ್ತೆ ಸೇರ್ಪಡೆಗೊಳ್ಳಲು ಮುಖ್ಯಮಂತ್ರಿಯನ್ನು ಭೇಟಿಯಾಗಲು ಸಿದ್ಧರಿರುವುದಾಗಿ ಗುಹಾ ಹೇಳಿದ್ದಾರೆ.

"ನಾನು ವೈಯಕ್ತಿಕವಾಗಿ ದೀದಿಯನ್ನು ಭೇಟಿಯಾಗಲು ಪ್ರಯತ್ನಿಸುತ್ತೇನೆ, ಆದರೆ ಅವರು ಮುಖ್ಯಮಂತ್ರಿ, ಆದ್ದರಿಂದ ಬ್ಯುಸಿ ಇರುತ್ತಾರೆ. ನೀವು ಅಪಾಯಿಂಟ್ಮೆಂಟ್ ಬಯಸಿದಾಗಲೆಲ್ಲಾ ಅವರು ನಿಮಗೆ ಸಮಯವನ್ನು ನೀಡಬೇಕೆಂದು ನೀವು ನಿರೀಕ್ಷಿಸಬಾರದು, ”ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News