ಯಾರಿಗಾದರೂ ಸ್ವಂತ ಮನೆ ಇಲ್ಲದಿದ್ದರೆ ಅವರು ಎಲ್ಲಿ ವಾಸಿಸುತ್ತಾರೆ. ಸಾಮಾನ್ಯವಾಗಿ ಬಾಡಿಗೆ ಮನೆಗಳಲ್ಲಿ ವಾಸಿಸಬಹುದು. ಕೆಲವರು ಹೋಟೆಲ್‌ಗಳಲ್ಲಿ ವಾಸ್ತವ್ಯ ಹೂಡಬಹುದು. ಆದರೆ ಇಲ್ಲೊಂದು ಕುಟುಂಬ ಶಾಲಾ ಬಸ್ ಅನ್ನು ತಮ್ಮ ಹೊಸ ಮನೆಯನ್ನಾಗಿ ಪರಿವರ್ತಿಸಿದೆ. ಈ ಬಸ್‌ನಲ್ಲಿ ಎಲ್ಲಾ ಐಷಾರಾಮಿ ಸೌಲಭ್ಯಗಳು ಲಭ್ಯವಿದೆ. ನೀವು ನಂಬದಿದ್ದರೆ, ಈ ಆಸಕ್ತಿದಾಯಕ ಚಿತ್ರಗಳನ್ನು ನೋಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
270 ಚದರ ಅಡಿ ಶಾಲಾ ಬಸ್ ಅನ್ನು ಐಷಾರಾಮಿ ತರಹದ ಮನೆಯನ್ನಾಗಿ ಪರಿವರ್ತಿಸಲು 35 ಸಾವಿರ ಡಾಲರ್‌ಗಳಿಗಿಂತ ಹೆಚ್ಚು ಅಂದರೆ ಸುಮಾರು 25 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ಬಸ್‌ನಲ್ಲಿ ವಾಸಿಸುವ ಪತಿ ಜೆಫ್ ಮತ್ತು ಪತ್ನಿ ಅನಾ ಬ್ಯಾಟರ್ಟನ್ ಅವರಿಗೆ ಐದು ಜನ ಮಕ್ಕಳಿದ್ದಾರೆ. ಇದಲ್ಲದೆ ಅವರ ಬಳಿ ಎರಡು ನಾಯಿಗಳು ಮತ್ತು ಬೆಕ್ಕು ಕೂಡ ಇದೆ.
ಇನ್ಸೈಡರ್ ಡಾಟ್ ಕಾಮ್ ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಈ ಬಸ್ಸಿನಲ್ಲಿ ಕೊಠಡಿ, ಶೌಚಾಲಯ, ಸ್ಕೈ ಲೈಟ್ ಮತ್ತು ರೈನ್ಫಾಲ್ ಶವರ್ ಮುಂತಾದ ಮೂಲಭೂತ ಸೌಕರ್ಯಗಳೂ ಇವೆ. ಇದು ಮಾತ್ರವಲ್ಲ, ಕಿಂಗ್ ಗಾತ್ರದ ಹಾಸಿಗೆಯೂ ಇದೆ, ಅದು ನೋಡಲು ತುಂಬಾ ರಾಯಲ್ ಆಗಿ ಕಾಣುತ್ತದೆ.
ಈ ಕುಟುಂಬ ಮೂಲತಃ ಟೆಕ್ಸಾಸ್‌ನ ಫೋರ್ಟ್ ವರ್ತ್‌ನಲ್ಲಿ ನೆಲೆಸಿದೆ. ಅನಾ ಮತ್ತು ಜೆಫ್ ಬ್ಯಾಟರ್ಟನ್ ಅವರ ಮಕ್ಕಳು ಏರಿಯಾ (9), ಜಿಯಾಡಾ (7), ಅಲಿರಾ (5), ಜೇಸ್ (3), ಅಥೇನಾ ಕೇವಲ ಒಂದೂವರೆ ವರ್ಷ. ಕುಟುಂಬವು ತೋಫು ಮತ್ತು ಜ್ಯಾಕ್ ಎಂಬ ಎರಡು ನಾಯಿಗಳು ಮತ್ತು ಹಾರ್ಪರ್ ಎಂಬ ಬೆಕ್ಕನ್ನು ಸಹ ಹೊಂದಿದೆ. ಇದನ್ನೂ ಓದಿ - Covid-19: ಕರೋನಾ ಯುಗದಲ್ಲಿ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡಿದ Xiaomi, Airtel, OPPO
ಬ್ಯಾಟರ್ಟನ್‌ನ ಈ ಕುಟುಂಬವು ಸಾಮಾಜಿಕ ಮಾಧ್ಯಮದಲ್ಲಿ (Social Media) ತುಂಬಾ ಸಕ್ರಿಯವಾಗಿದೆ. ಇವರು @regainingadventure ಹೆಸರಿನಲ್ಲಿ ತಮ್ಮ ಇನ್ಸ್ಟಾಗ್ರಾಮ್ ಪುಟವನ್ನು ರಚಿಸಿದ್ದು ಅದರಲ್ಲಿ ಈ ಬಸ್‌ನಲ್ಲಿ ತಮ್ಮ ಪ್ರಯಾಣದ ಬಗ್ಗೆ ವಿವರವಾಗಿ ಮಾಹಿತಿ ನೀಡಿದ್ದಾರೆ. ತಾವು ಸಾಹಸ ಪ್ರಿಯರು ಎಂದು ಹೇಳಿಕೊಂಡಿರುವ ಈ ಕುಟುಂಬ ತಾವು ಕಳೆದ ನಾಲ್ಕು ವರ್ಷಗಳಿಂದ ಅಡ್ವೆಂಚರ್ ನಲ್ಲಿ ಕಾಲ ಕಳೆಯುತ್ತಿರುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ - ಬಾನಂಗಳದ ಅದ್ಬುತ : ಬೆಂಗಳೂರಿನಲ್ಲಿ ಆಕಾಶದಲ್ಲಿ ಕಂಡು ಬಂತು ಅಮೋಘ ದೃಶ್ಯ
ಜೆಫ್ ಕೆಲವು ವರ್ಷಗಳಿಂದ ಟೆಕ್ಸಾಸ್‌ನಲ್ಲಿ ವರ್ಕ್ ಫ್ರಮ್ ಹೋಂ ಅಂದರೆ ಮನೆಯಿಂದಲೇ ಕೆಲಸ ಮಾಡುತ್ತಿದ್ದು, ಅನಾ ತನ್ನ ಮಕ್ಕಳಿಗೆ ಮನೆ ಶಿಕ್ಷಣ ನೀಡುತ್ತಿದ್ದಾಳೆ. ವಾರಾಂತ್ಯದಲ್ಲಿ, ಕುಟುಂಬವು ರಸ್ತೆ ಪ್ರವಾಸಗಳು, ಕ್ಯಾಂಪಿಂಗ್ ಸಾಹಸ ಮತ್ತು ಹೊರಾಂಗಣ ನಡಿಗೆಗೆ ಹೋಗುತ್ತದೆ. ರಸ್ತೆ ಪ್ರಯಾಣ ಮತ್ತು ಅಲ್ಲಿನ ಸಾಹಸವನ್ನು ನಾವು ಹೆಚ್ಚು ಸಮಯದೊಂದಿಗೆ ಹೇಗೆ ಆನಂದಿಸಬಹುದು ಎಂಬುದರ ಕುರಿತು ನಾವು ಯಾವಾಗಲೂ ಮಾತನಾಡುತ್ತೇವೆ ಎಂದು ಜೆಫ್ ಹೇಳಿದರು.