ನವದೆಹಲಿ: IPL 2021 Latest News - ಬಿಸಿಸಿಐ IPL-2021 ಸಿದ್ಧತೆಗಳನ್ನು ನಡೆಸಲು ಬಿಸಿಸಿಐ (BCCI) ಕಟಿಬದ್ಧವಾಗಿದೆ. ಈ ಮೆಗಾ ಟಿ-20 ಲಾಜಿಸ್ಟಿಕ್ ಕುರಿತು ಹೇಳುವುದಾದರೆ, ಪ್ರಸ್ತುತ BCCI ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಹಾಗೂ ಕಾರ್ಯದರ್ಶಿ ಜಯ್ ಶಾಹ್ (Jay Shah) ಈಗಾಗಲೇ ದುಬೈ (Dubai) ತಲುಪಿದ್ದಾರೆ. ಮ್ಯಾಚ್ ವೆನ್ಯೂ ಸೇರಿದಂತೆ ಟೂರ್ನಿಯ ಶೆಡ್ಯೂಲ್ ಬದಲಾವಣೆಯ ಘೋಷಣೆ ಮಾಡುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ.
BCCI ಪ್ಲಾನ್ ಏನು?
IPL 2021 Latest Update - ಇನ್ಸೈಡ್ ಸ್ಪೋರ್ಟ್ಸ್ ವರದಿಯೊಂದರ ಪ್ರಕಾರ ಐಪಿಎಲ್ 2021ರ ಉಳಿದ 31 ಪಂದ್ಯಗಳನ್ನು 25 ದಿನಗಳ ವಿಂಡೋನಲ್ಲಿ ಆಯೋಜಿಸುವುದಾಗಿ ಘೋಷಿಸಲಾಗಿದೆ. BCCI ಈ 25 ದಿನಗಳ ವಿಂಡೋನಲ್ಲಿ 8 ಡಬಲ್ ಡೆಕ್ಕರ್ ಪಂದ್ಯಗಳನ್ನು ಸೇರಿಸಲು ಹೊಸ ಶೆಡ್ಯೂಲ್ (IPl 2021 Schedule) ತಯಾರಿಸುತ್ತಿದೆ. ಜೂನ್ ತಿಂಗಳಾಂತ್ಯದವರೆಗೆ ಶೆಡ್ಯೂಲ್ ಜಾರಿಯಾಗುವ ನಿರೀಕ್ಷೆ ವ್ಯಕ್ತಪಡಿಸಲಾಗುತ್ತಿದೆ. IPL-2021ರ ಎರಡನೇ ಹಂತ 17 ರಿಂದ 19 ಸೆಪ್ಟೆಂಬರ್ ಮಧ್ಯೆ ಆರಂಭಿಸಲು BCCI ಯೋಜನೆ ರೂಪಿಸುತ್ತಿದೆ.
ಇದನ್ನೂ ಓದಿ- ICC WTC Final: ಟೀಮ್ ಇಂಡಿಯಾ Quarantine Period ಕಳೆಯುವುದು ಅಷ್ಟು ಸುಲಭವಲ್ಲ
ಹಲವು ಡಬಲ್ ಡೆಕ್ಕರ್ ಪಂದ್ಯಗಳು ನಡೆಯುವ ಸಾಧ್ಯತೆ
IPL 2021 Dubai Updates - IPL-2021ರ ಬಳಿಕ ICC T20 World Cup 2021ರ ಆಯೋಜನೆ ಕೂಡ ನಡೆಸಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ BCCI 8 ರಿಂದ 10 ಡಬಲ್ ಡೆಕ್ಕರ್ (Double Decker Matches) ಪಂದ್ಯಗಳಿಗಾಗಿ ಪ್ಲಾನ್ ನಡೆಸುತ್ತಿದೆ. ಕಳೆದ ಬಾರಿಯಂತೆ ಈ ಬಾರಿಯೂ ಕೂಡ ಪಂದ್ಯಗಳನ್ನು ದುಬೈ (Dubai), ಅಬುಧಾಬಿ (Abu Dhabi) ಹಾಗೋ ಶಾರ್ಜಾಹ್ (Sharjah) ನಲ್ಲಿ ಆಯೋಜಿಸಲಾಗುತ್ತಿದೆ.
ಇದನ್ನೂ ಓದಿ-David Warner On Covid-19 Situation In India:'ಭಾರತದಲ್ಲಿ ವಾಸಿಸುವುದು ಒಂದು ಭಯಾನಕ ಅನುಭವ'
ನಾಕೌಟ್ ಪಂದ್ಯಗಳು ಒಂದೇ ಜಾಗದಲ್ಲಿ ನಡೆಯುವ ಸಾಧ್ಯತೆ
IPL 2021 Latest Update Today - ಪ್ಲೇಆಫ್ (Playoff Matches) ಹಾಗೂ ಫೈನಲ್ ಪಂದ್ಯಗಳ (Final Match) ಕುರಿತು ಹೇಳುವುದಾದರೆ, ಬಿಸಿಸಿಐ, ಈ ಎಲ್ಲಾ ಪಂದ್ಯಗಳನ್ನು ಒಂದೇ ಜಾಗದಲ್ಲಿ ನಡೆಸಲು ಬಯಸುತ್ತಿದೆ ಎನ್ನಲಾಗಿದೆ. ನಾಕೌಟ್ ಪಂದ್ಯಗಳಿಗೆ ದುಬೈ ಮೊದಲ ಆಯ್ಕೆಯಾಗಿರುವ ಸಾಧ್ಯತೆ ಇದೆ. ಈ ಕಾರಣದಿಂದ ಹಲವು ಫ್ರಂಚೈಸಿಗಳು ದುಬೈನಲ್ಲಿ ತಮ್ಮ-ತಮ್ಮ ಹೋಟೆಲ್ ಗಳ ಬುಕಿಂಗ್ ಮಾಡಿಸುವ ಸಾಧ್ಯತೆ ಇದ್ದು, ಕಳೆದ ಬಾರಿಯೂ ಕೂಡ ಇದೆ ರೀತಿ ನಡೆದಿತ್ತು.
ಇದನ್ನೂ ಓದಿ- ICC ODI World Cup:ಜಾಗತಿಕ ಕ್ರಿಕೆಟ್ ಸಂಸ್ಥೆಯಿಂದ ಇಲ್ಲೊಂದು ಮಹತ್ವದ ಪ್ರಕಟಣೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.