UAE ನಲ್ಲಿ T-20 ವಿಶ್ವಕಪ್ ನಡೆಸಲು ICC ನಿರ್ಧಾರ!

ಯುಎಇಯ ಅಬುದಾಭಿ, ದುಬೈ ಮತ್ತು ಶಾರ್ಜಾದಲ್ಲಿ ಪಂದ್ಯಗಳು ನಡೆಯಲಿದ್ದು

Last Updated : Jun 6, 2021, 11:04 AM IST
  • ಭಾರತವು ಆತಿಥ್ಯ ವಹಿಸಲಿರುವ ಟ್ವೆಂಟಿ-20 ವಿಶ್ವಕಪ್ ಟೂರ್ನಿ

    ಯುನೈಟೆಡ್‌ ಅರಬ್ ಎಮಿರೇಟ್ಸ್‌ ಗೆ ಸ್ಥಳಾಂತರಿಸಲು ICC ನಿರ್ಧಾರ
  • ಯುಎಇಯ ಅಬುದಾಭಿ, ದುಬೈ ಮತ್ತು ಶಾರ್ಜಾದಲ್ಲಿ ಪಂದ್ಯಗಳು ನಡೆಯಲಿದ್ದು
UAE ನಲ್ಲಿ T-20 ವಿಶ್ವಕಪ್ ನಡೆಸಲು ICC ನಿರ್ಧಾರ! title=

ನವದೆಹಲಿ : ಭಾರತವು ಇದೇ ಅಕ್ಟೋಬರ್-ನವೆಂಬರ್‌ನಲ್ಲಿ ಆತಿಥ್ಯ ವಹಿಸಲಿರುವ ಟ್ವೆಂಟಿ-20 ವಿಶ್ವಕಪ್ ಟೂರ್ನಿಯನ್ನು ಯುನೈಟೆಡ್‌ ಅರಬ್ ಎಮಿರೇಟ್ಸ್‌ ಗೆ ಸ್ಥಳಾಂತರಿಸಲು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್ (ICC) ನಿರ್ಧಾರ ಮಾಡಿದೆ. ಈ ಕುರಿತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)ಗೂ ಆಂತರಿಕವಾಗಿ ಮಾಹಿತಿ ನೀಡಿದೆಯೆನ್ನಲಾಗಿದೆ.

ಯುಎಇ(United Arab Emirates)ಯ ಅಬುದಾಭಿ, ದುಬೈ ಮತ್ತು ಶಾರ್ಜಾದಲ್ಲಿ ಪಂದ್ಯಗಳು ನಡೆಯಲಿದ್ದು, ಒಮನ್‌ನ ರಾಜಧಾನಿ ಮಸ್ಕತ್‌ ಕೂಡ ನಾಲ್ಕನೇ ತಾಣವಾಗಲಿದೆ. ಅಕ್ಟೋಬರ್ ಕೊನೆಯ ವಾರದಲ್ಲಿ ಟೂರ್ನಿ ಆರಂಭವಾಗುವುದು.

ಇದನ್ನೂ ಓದಿ : ಮೊದಲ ಫೋಟೋ : ಈಗ ಹೀಗಿದ್ದಾಳೆ ನೋಡಿ Virushka ಮುದ್ದಿನ ಮಗಳು ವಾಮಿಕ..!

ಈಚೆಗೆ ಐಸಿಸಿಯ ಸಭೆಯಲ್ಲಿ ವಿಶ್ವಕಪ್ ಟೂರ್ನಿಯನ್ನು ಭಾರತದಲ್ಲಿ ನಡೆಸುವ ಕುರಿತು ನಿರ್ಧರಿಸಲು ಬಿಸಿಸಿಐ(BCCI)ಗೆ ನಾಲ್ಕು ವಾರಗಳ ಸಮಯಾವಕಾಶ ನೀಡಲಾಗಿದೆ. ಆದರೆ ಟೂರ್ನಿಯನ್ನು ತಟಸ್ಥ ತಾಣವಾದ ಯುಎಇಯಲ್ಲಿ ಆಯೋಜಿಸಲು ಸಿದ್ಧರಾಗಿರುವಂತೆ ಬಿಸಿಸಿಐಗೆ ಆಂತರಿಕವಾಗಿ ತಿಳಿಸಲಾಗಿದೆ' ಎಂದು ಮಂಡಳಿಯ ಹಿರಿಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ : World Test Championship final ಗೂ ಮುನ್ನ ನಂಬರ್ 1 ಬೌಲರ್ ಹೆಸರಿಸಿದ ಅಜಿತ್ ಅಗರ್ಕರ್

16 ತಂಡಗಳು ಆಡುವ ಟೂರ್ನಿಯ ಪ್ರಥಮ ಹಂತರದಲ್ಲಿ ಮಸ್ಕತ್ ಬಗ್ಗೆ ಪ್ರಸ್ತಾಪವಾಗಿಲ್ಲ. ಸೆಪ್ಟೆಂಬರ್‌ನಲ್ಲಿ ಯುಎಇಯ ಮೂರು ತಾಣಗಳಲ್ಲಿ ಐಪಿಎಲ್‌ನ 31 ಪಂದ್ಯಗಳು ನಡೆಯಲಿವೆ. ಅದರ ನಂತರ ವಿಶ್ವಕಪ್ ಟೂರ್ನಿಗೆ ಆ ಮೂರು ತಾಣಗಳನ್ನು ಸಿದ್ಧಪಡಿಸಲಾಗುವುದು.

ಇದನ್ನೂ ಓದಿ : IPL 2021: Playoffs ಹಾಗೂ Final ಪಂದ್ಯಗಳಲ್ಲಿ BCCI ನಿಂದ ಬದಲಾವಣೆ ಸಾಧ್ಯತೆ

'ಐಪಿಎಲ್(IPL 2021) ಅಕ್ಟೋಬರ್ 10ರಂದು ಮುಕ್ತಾಯವಾಗುತ್ತದೆ. ಅದಾಗಿ ಮೂರು ವಾರಗಳ ನಂತರ ವಿಶ್ವಕಪ್ ಟೂರ್ನಿ ಆರಂಭವಾಗುತ್ತದೆ. ಈ ಅವಧಿಯಲ್ಲಿ ಪಿಚ್‌, ಕ್ರೀಡಾಂಗಣ ಸೌಲಭ್ಯಗಳನ್ನು ಸಿದ್ಧಗೊಳಿಸಲು ಐಸಿಸಿ ಯೋಜಿಸಿದೆ' ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News