Private Sector Jobs : ನೌಕರಿಯ ಹುಡುಕಾಟದಲ್ಲಿರುವವರಿಗೆ ಇಲ್ಲಿ ಸಿಗಲಿದೆ ಅಗತ್ಯ ಮಾಹಿತಿ

ಖಾಸಗಿ ವಲಯದಲ್ಲಿ ನೌಕರಿ ಹುಡುಕುತ್ತಿರುವವರಿಗೆ (Job serch in private sector) ಇಲ್ಲೊಂದು ಸಿಹಿ ಸುದ್ದಿಯಿದೆ.  ಇನ್ನು ಮುಂದೆ ಯಾವ ಕಂಪನಿಯಲ್ಲಿ ಎಷ್ಟು ಹುದ್ದೆಗಳು ಖಾಲಿಯಿವೆ, ಆ ಹುದ್ದೆಗೆ ಬೇಕಾಗುವ ಅರ್ಹತೆ ಏನು? ಈ ಎಲ್ಲಾ ಮಾಹಿತಿಗಳು ಕೇವಲ ಒಂದು ಕ್ಲಿಕ್ ನಲ್ಲಿ ಲಭ್ಯವಾಗಲಿದೆ.

Written by - Ranjitha R K | Last Updated : Jun 20, 2021, 11:53 AM IST
  • ನೌಕರಿ ಹುಡುಕುತ್ತಿರುವವರಿಗೆ ಇಲ್ಲೊಂದು ಸಿಹಿ ಸುದ್ದಿ
  • ಒಂದೇ ಪೋರ್ಟಲ್ ನಲ್ಲಿ ಉದ್ಯೋಗದ ಬಗ್ಗೆ ನಿಖರ ಮಾಹಿತಿ
  • ಮುಂದಿನ ತಿಂಗಳು ಹೊಸ ಕಾನೂನು ಜಾರಿ ಸಾಧ್ಯತೆ
Private Sector Jobs : ನೌಕರಿಯ ಹುಡುಕಾಟದಲ್ಲಿರುವವರಿಗೆ ಇಲ್ಲಿ ಸಿಗಲಿದೆ ಅಗತ್ಯ ಮಾಹಿತಿ title=
ಒಂದೇ ಪೋರ್ಟಲ್ ನಲ್ಲಿ ಉದ್ಯೋಗದ ಬಗ್ಗೆ ನಿಖರ ಮಾಹಿತಿ (photo zee news)

ನವದೆಹಲಿ : ಖಾಸಗಿ ವಲಯದಲ್ಲಿ ನೌಕರಿ ಹುಡುಕುತ್ತಿರುವವರಿಗೆ (Job serch in private sector) ಇಲ್ಲೊಂದು ಸಿಹಿ ಸುದ್ದಿಯಿದೆ.  ವಾಸ್ತವದಲ್ಲಿ ಖಾಸಗಿ ವಲಯದ ಉದ್ಯೋಗಗಳ ಬಗ್ಗೆ ಸರಿಯಾದ ಸಮಯದಲ್ಲಿ ಸರಿಯಾದ ಮಾಹಿತಿಯನ್ನು ಪಡೆಯುವುದು ಅಷ್ಟು ಸುಲಭವಲ್ಲ. ಇಲ್ಲಿ ಪರಿಚಯಸ್ಥರಿಗೆ ಮೊದಲ ಆದ್ಯತೆ ಸಿಗುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಸಾಧ್ಯತೆಗಳನ್ನು ತಡೆಗಟ್ಟಿ, ಪ್ರತಿಯೊಂದು ಕ್ಷೇತ್ರದಲ್ಲೂ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ. ಹೌದು ಇನ್ನು ಮುಂದೆ ಯಾವ ಕಂಪನಿಯಲ್ಲಿ ಎಷ್ಟು ಹುದ್ದೆಗಳು ಖಾಲಿಯಿವೆ, ಆ ಹುದ್ದೆಗೆ ಬೇಕಾಗುವ ಅರ್ಹತೆ ಏನು? ಈ ಎಲ್ಲಾ ಮಾಹಿತಿಗಳು ಕೇವಲ ಒಂದು ಕ್ಲಿಕ್ ನಲ್ಲಿ ಲಭ್ಯವಾಗಲಿದೆ.

ಸರ್ಕಾರಿ ಪೋರ್ಟಲ್‌ನಲ್ಲಿ ನಿಖರ ಮಾಹಿತಿ : 
ಇನ್ನು ನೌಕರಿ ಹುಡುಕಾಟಕ್ಕೆ (Job search) ಇದ್ದಬದ್ದ ಪೋರ್ಟಲ್ ಗಳಿಗೆ ಭೇಟಿ ನೀಡಬೇಕಾಗಿಲ್ಲ. ನ್ಯಾಷನಲ್ ಕರಿಯರ್ ಸರ್ವಿಸ್ ಪೋರ್ಟಲ್ ನಲ್ಲಿ (national career service) ಖಾಸಗಿ ವಲಯಕ್ಕೆ ಸಂಬಂಧಿಸಿದ ಉದ್ಯೋಗಗಳ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತದೆ. ಇಲ್ಲಿ ಎಲ್ಲಾ ಕಂಪನಿಗಳ ಇತ್ತೀಚಿನ ಡೇಟಾ ಮತ್ತು ಉದ್ಯೋಗದ ಅವಶ್ಯಕತೆಗಳು ಸೇರಿದಂತೆ ಇತರ ಮಾಹಿತಿಗಳು ಲಭ್ಯವಿರುತ್ತವೆ.

ಇದನ್ನೂ ಓದಿ : 7th Pay Commission: ಪಿಂಚಣಿಗೆ ಸಂಬಂಧಿಸಿದಂತೆ ಬದಲಾದ ನಿಯಮ; ಷರತ್ತುಗಳು ಅನ್ವಯ
ವರದಿಯ ಪ್ರಕಾರ, ದೇಶದಲ್ಲಿ ಜಾರಿಯಾಗಲಿರುವ ಹೊಸ ಕಾರ್ಮಿಕ ಕಾನೂನುಗಳಲ್ಲಿ ಇದು ಅಗತ್ಯವಾಗಿದೆ. ಎಲ್ಲಾ ಖಾಸಗಿ ಕಂಪೆನಿಗಳು ವರ್ಷದಲ್ಲಿ ಹೊರಬರುವ ಖಾಲಿ ಹುದ್ದೆಗಳ ಬಗ್ಗೆ ಸರ್ಕಾರಿ ಪೋರ್ಟಲ್ ನಲ್ಲಿ (Government portal) ಮಾಹಿತಿ ನೀಡಬೇಕಾಗುತ್ತದೆ. ಸರ್ಕಾರಿ ಪೋರ್ಟಲ್ ನ ಜೊತೆಗೆ ತಮಗೆ ಬೇಕಾಗಿರುವ ಇತರ ಪೋರ್ಟಲ್ ನಲ್ಲಿಯೂ ನೌಕರಿಯ ಬಗ್ಗೆ ಮಾಹಿತಿ ನೀಡುವ ಸ್ವಾತಂತ್ರಯ ಕಂಪನಿಗಳಿಗೆ ಇರುತ್ತವೆ. 

ಮುಂದಿನ ತಿಂಗಳು ಹೊಸ ಕಾನೂನು ಜಾರಿ ಸಾಧ್ಯತೆ : 
ಹೊಸ ಕಾರ್ಮಿಕ ಕಾನೂನುಗಳು ಜುಲೈ 1 ರಿಂದ ಜಾರಿಗೆ ಬರಬಹುದು. ಇದಕ್ಕಾಗಿ ಕಾರ್ಮಿಕ ಸಚಿವಾಲಯವು (Ministry of Labour and Employement) ಬಹುತೇಕ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಈ ನಿಯಮಗಳಿಗೆ ಸರ್ಕಾರ ಅಂತಿಮ ರೂಪುರೇಷೆ ಕೂಡಾ ನೀಡಿದೆ. ಅದೇ ಸಮಯದಲ್ಲಿ, ರಾಜ್ಯಗಳು ಸಹ ತಮ್ಮ ನಿಯಮಗಳನ್ನು ಅಂತಿಮಗೊಳಿಸಿವೆ. ಈ ಪೋರ್ಟಲ್‌ ಮೂಲಕ ನಿಮಗೆ ಬೇಕಾದ ಕ್ಷೇತ್ರದಲ್ಲಿ ಉದ್ಯೋಗವನ್ನು ಪಡೆಯುವುದು ಸಾಧ್ಯವಾಗುತ್ತದೆ. 

ಇದನ್ನೂ ಓದಿ : SBI New Rule: ಜುಲೈ 1 ರಿಂದ ಎಟಿಎಂನಿಂದ ಹಣ ವಿತ್ ಡ್ರಾ ಆಗಲಿದೆ ದುಬಾರಿ

ಈ ಸೇವೆಗಳು ಪೋರ್ಟಲ್‌ನಲ್ಲಿ ಲಭ್ಯ:
2015 ರಲ್ಲಿ ಪ್ರಾರಂಭಿಸಲಾದ ರಾಷ್ಟ್ರೀಯ ವೃತ್ತಿ ಸೇವೆ (NCS) ಯುವಕರ ಉದ್ಯೋಗ ಮತ್ತು ವೃತ್ತಿ ಅಗತ್ಯಗಳನ್ನು ಪೂರೈಸುತ್ತದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವ ಸಂತೋಷ್ ಗಂಗ್ವಾರ್ ಹೇಳಿದ್ದಾರೆ. ಇದರಲ್ಲಿ, ವೃತ್ತಿಯ ಬಗ್ಗೆ ಸಲಹೆ, ವೃತ್ತಿಪರ ಮಾರ್ಗದರ್ಶನ, ಕೌಶಲ್ಯ ಅಭಿವೃದ್ಧಿ ಕೋರ್ಸ್‌ಗಳ ಮಾಹಿತಿ, ಅಪ್ರೆಂಟಿಸ್‌ಶಿಪ್, ಇಂಟರ್ನ್‌ಶಿಪ್ ಮುಂತಾದ ಹಲವು ರೀತಿಯ ಉದ್ಯೋಗ ಸಂಬಂಧಿತ ಸೇವೆಗಳನ್ನು ಒದಗಿಸಲಾಗಿದೆ. ಅಂದರೆ, ಈಗ ನೀವು ಖಾಸಗಿ ವಲಯದ ಉದ್ಯೋಗಗಳಿಗಾಗಿ ಇಂಟರ್ ನೆಟ್ ನಲ್ಲಿ (Internet) ಕಂಡ ಕಂಡಲ್ಲಿ ಸರ್ಚ್ ಮಾಡುವ ಅಗತ್ಯವಿಲ್ಲ. ಅಗತ್ಯತಕ್ಕೆ ಅನುಗುಣವಾಗಿ, ಮಾಹಿತಿಯನ್ನು ಸರ್ಕಾರಿ ಪೋರ್ಟಲ್‌ನಲ್ಲಿ ಪಡೆಯಬಹುದು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News