ನವದೆಹಲಿ : SBI ATM New Rule : ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಗ್ರಾಹಕರಾಗಿದ್ದರೆ ನಿಮಗಿದು ಬಹಳ ಮುಖ್ಯವಾದ ಸುದ್ದಿ. ಎಸ್ಬಿಐ ತನ್ನ ಹಲವು ಪ್ರಮುಖ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿದೆ. ಸ್ಟೇಟ್ ಬ್ಯಾಂಕಿನಿಂದ (SBI) ಪಡೆದ ಮಾಹಿತಿಯ ಪ್ರಕಾರ, ಈ ಹೊಸ ನಿಯಮಗಳು ಜುಲೈ 1, 2021 ರಿಂದ ಅನ್ವಯವಾಗಲಿವೆ. ನಂತರ ATM ನಿಂದ Cash Withdrawal , ಚೆಕ್ ಬುಕ್ ಬಳಸುವುದು ದುಬಾರಿಯಾಗಲಿದೆ.
ಸೇವಾ ಶುಲ್ಕದಲ್ಲಿ ಬದಲಾವಣೆ :
ಜುಲೈ 1, 2021 ರಿಂದ, ದೇಶದ ಅತಿದೊಡ್ಡ ಬ್ಯಾಂಕ್ ಎಸ್ಬಿಐನ (SBI) ಅನೇಕ ನಿಯಮಗಳು ಬದಲಾಗಲಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ATM ಮತ್ತು ಬ್ಯಾಂಕ್ ಸೇವೆಯ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಇದರ ಅಡಿಯಲ್ಲಿ, ಈಗ ಎಟಿಎಂ ಮತ್ತು ಬ್ಯಾಂಕ್ ಶಾಖೆಯಿಂದ ಹಣವನ್ನು ಹಿಂಪಡೆಯುವ ಸೇವಾ ಶುಲ್ಕವನ್ನು ಬದಲಾಯಿಸಲಾಗಿದೆ. ಈ ಮಾಹಿತಿಯನ್ನು ಎಸ್ಬಿಐನ ಅಧಿಕೃತ ವೆಬ್ಸೈಟ್ನಲ್ಲಿ ನೀಡಲಾಗಿದೆ. ಇದರ ಪ್ರಕಾರ, ಚೆಕ್ ಬುಕ್ ವರ್ಗಾವಣೆ (Cheque book) ಮತ್ತು ಇತರ ಹಣಕಾಸುೇತರ ವಹಿವಾಟುಗಳಲ್ಲಿ ಹೊಸ ಶುಲ್ಕಗಳು ಅನ್ವಯವಾಗುತ್ತವೆ. ಜುಲೈ 1, 2021 ರಿಂದ ಎಸ್ಬಿಐ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡೆಪಾಸಿಟ್ ಖಾತೆದಾರರಿಗೆ (BSBD) ಎಲ್ಲಾ ಹೊಸ ಸೇವಾ ಶುಲ್ಕಗಳು ಅನ್ವಯವಾಗುತ್ತವೆ ಎಂದು ಬ್ಯಾಂಕ್ ತಿಳಿಸಿದೆ.
ಇದನ್ನೂ ಓದಿ : Fact Check: ಜುಲೈ ತಿಂಗಳಿನಿಂದ DA-DR ಸಿಗಲಿದೆ! ಸರ್ಕಾರಿ ನೌಕರರು ಓದಲೇ ಬೇಕಾದ ಸುದ್ದಿ ಇದು
ಎಟಿಎಂನಿಂದ ಹಣವನ್ನು ಪಡೆಯುವುದು ಕೂಡಾ ದುಬಾರಿ :
ಎಸ್ಬಿಐನ BSBD ಗ್ರಾಹಕರಿಗೆ ನಾಲ್ಕು ಬಾರಿ ಫ್ರೀ ಟ್ರಾನ್ಸಾಕ್ಷನ್ ಸೌಲಭ್ಯ ನೀಡಲಾಗಿದೆ. ಆದರೆ ಉಚಿತ ಮಿತಿ ಮುಗಿದ ನಂತರ ಬ್ಯಾಂಕ್ ಗ್ರಾಹಕರಿಗೆ ಶುಲ್ಕ ವಿಧಿಸುತ್ತದೆ. ಜುಲೈ 1 ರ ನಂತರ, ಎಟಿಎಂಗಳಿಂದ (ATM) ಹಣವನ್ನು ಪಡೆದರೆ, ಬ್ಯಾಂಕ್ 15 ರೂ. ಜೊತೆಗೆ ಜಿಎಸ್ಟಿ ವಿಧಿಸುತ್ತದೆ. ಕರೋನಾ ಬಿಕ್ಕಟ್ಟಿನಿಂದಾಗಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ನಗದು ಹಿಂಪಡೆಯುವ ಮಿತಿಯನ್ನು ಹೆಚ್ಚಿಸಿದೆ. ಅಂದರೆ, ಗ್ರಾಹಕರು ಬೇರೆ ಶಾಖೆಯಲ್ಲಿ ಕೂಡಾ, ವಿತ್ ಡ್ರಾವಲ್ ಫಾರ್ಮ್ ಮೂಲಕ ತಮ್ಮ ಉಳಿತಾಯ ಖಾತೆಯಿಂದ 25 ಸಾವಿರ ರೂ.ಗಳನ್ನು ಡ್ರಾ ಮಾಡಿಕೊಳ್ಳಬಹದು. ಚೆಕ್ ಮೂಲಕ ಒಂದು ಲಕ್ಷ ರೂಪಾಯಿಗಳನ್ನು ಪಡೆಯಬಹುದು.
ಸ್ಟೇಟ್ ಬ್ಯಾಂಕಿನ ಸೇವಾ ಶುಲ್ಕದಲ್ಲಿ ಮಾಡಲಾದ ಬದಲಾವಣೆಗಳು :
1. ಎಸ್ಬಿಐ ಬಿಎಸ್ಬಿಡಿ ಖಾತೆದಾರರಿಗೆ ಹಣಕಾಸಿನ ವರ್ಷದಲ್ಲಿ 10 ಚೆಕ್ ಲೀಫ್ ಗಳನ್ನು ನೀಡುತ್ತದೆ. ಈಗ 10 ಚೆಕ್ ಹೊಂದಿರುವ ಚೆಕ್ ಬುಕ್ನ ಶುಲ್ಕವನ್ನು ಪಾವತಿಸಬೇಕಾಗುತ್ತದೆ. 10 ಚೆಕ್ ಲೀಫ್ ಗಳಿಗೆ 40 ರೂ ಮತ್ತು ಜಿಎಸ್ಟಿ ಪಾವತಿಸಬೇಕಾಗುತ್ತದೆ.
2. ತುರ್ತು ಚೆಕ್ ಬುಕ್ ಬೇಕಾದಲ್ಲಿ 10 ಚೆಕ್ ಲೀಫ್ ಗಳಿರುವ ಚೆಕ್ ಬುಕ್ ಗೆ 50 ರೂ ಮತ್ತು ಜಿಎಸ್ಟಿ ಪಾವತಿಸಬೇಕಾಗುತ್ತದೆ.
3.25 ಚೆಕ್ ಲೀಫ್ ಇರುವ ಚೆಕ್ ಬುಕ್ ಗಾಗಿ 75 ರೂ. ಜೊತೆಗೆ ಜಿಎಸ್ಟಿ (GST) ಶುಲ್ಕವನ್ನು ಪಾವತಿಸಬೇಕಾಗುತ್ತದೆ.
4. ಹಿರಿಯ ನಾಗರಿಕರಿಗೆ ಚೆಕ್ ಪುಸ್ತಕಗಳಲ್ಲಿ ಹೊಸ ಸೇವಾ ಶುಲ್ಕದಿಂದ ವಿನಾಯಿತಿ ನೀಡಲಾಗುತ್ತದೆ.
5. BSBD ಖಾತೆದಾರರಿಗೆ ಹೋಂ ಬ್ರಾಂಚ್ ಅಥವಾ ಬೇರೆ ಬ್ಯಾಂಚ್ ನಿಂದ ಹಣ ವಿತ್ ಡ್ರಾ ಮಾಡುವುದಾದರೆ ಯಾವುದೇ ಶುಲ್ಕ ಪಾವತಿಸಬೇಕಿಲ್ಲ
ಇದನ್ನೂ ಓದಿ : LPG Cylinder Discount: ಕೇವಲ ರೂ.9 ಕ್ಕೆ ಮನೆಗೆ ಬರಲಿದೆ LPG Cylinder, ಈ ಮೊಬೈಲ್ ಆಪ್ ಮೇಲೆ ಬುಕಿಂಗ್ ಮಾಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ