One Nation One Ration Card: ವಲಸೆ ಕಾರ್ಮಿಕರಿಗೆ ಸಂಬಂಧಿಸಿದಂತೆ ಇಂದು ಇಂದು ಸುಪ್ರೀಂ ಕೋರ್ಟ್ (Supreme Court) ಮಹತ್ವದ ತೀರ್ಪನ್ನು ಪ್ರಕಟಿಸಿದೆ. ಕೊರೊನಾ ಪ್ರಭಾವಕ್ಕೆ ಒಳಗಾಗಿರುವ ವಲಸೆ ಕಾರ್ಮಿಕರ (Migrant Workers) ಕಲ್ಯಾಣಕ್ಕಾಗಿ ನ್ಯಾಯಾಲಯ ಕೇಂದ್ರ (Modi Government) ಮತ್ತು ರಾಜ್ಯಸರ್ಕಾರಗಳಿಗೆ ಎಲ್ಲಾ ಅಗತ್ಯ ಸೂಚನೆಗಳನ್ನು ಹೀದಿದೆ. ಇದಲ್ಲದೆ ಎಲ್ಲಾ ರಾಜ್ಯಗಳು ಜುಲೈ 31ರವೆರೆಗೆ ' ಒನ್ ನೇಶನ್- ಒನ್ ರೇಶನ್ ಕಾರ್ಡ್' ಯೋಜನೆಯನ್ನು (One Nation-One Ration Card Scheme) ಜಾರಿಗೊಳಿಸಲು ನಿರ್ದೇಶನಗಳನ್ನು ನೀಡಿದೆ. ಹೀಗಾಗಿ ಈ ನಿಗದಿತ ಕಾಲ ಮಿತಿಯೊಳಗೆ ರಾಜ್ಯ ಸರ್ಕಾರಗಳು ಈ ಯೋಜನೆಯನ್ನು ಜಾರಿಗೊಳಿಸುವುದು ಕಡ್ಡಾಯವಾಗಿದೆ.
Supreme Court issues a slew of directions to Centre & state governments relating to the welfare of migrant workers due to COVID19, directed govts to provide dry ration & continue community kitchens for migrant workers till pandemic continues pic.twitter.com/x4xZhndnpK
— ANI (@ANI) June 29, 2021
ಇದನ್ನೂ ಓದಿ-Fake Vaccination:ಏನಿದು Fake Covid Vaccination? ಲಸಿಕಾ ಕೇಂದ್ರ ನಕಲಿಯಾಗಿದೆ ಎಂದು ಹೇಗೆ ಪತ್ತೆಹಚ್ಚಬೇಕು?
ವಲಸೆ ಕಾರ್ಮಿಕರಿಗಾಗಿ ಹಲವು ನಿರ್ದೇಶನಗಳನ್ನು ಜಾರಿಗೊಳಿಸಿದ ಸುಪ್ರೀಂ
ಕೊರೊನಾ ಹೊಡೆತಕ್ಕೆ ಸಿಲುಕಿರುವ ವಲಸೆ ಕಾರ್ಮಿಕರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಣ ಪಡಿತರವನ್ನು ವಿತರಿಸುವ ವ್ಯವಸ್ಥೆಯನ್ನು ಮಾಡಬೇಕು ಎಂದು ಸುಪ್ರೀಂ ಆದೇಶ ನೀಡಿದೆ.. ಇದಲ್ಲದೆ ಕೊರೊನಾ ಮಹಾಮಾರಿ (Corona Pandemic) ಇರುವವರೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೈಗ್ರಂಟ್ ವರ್ಕರ್ಸ್ ಗಳಿಗೆ ಸಾಮುದಾಯಿಕ ಅಡುಗೆ ಮನೆ ವ್ಯವಸ್ಥೆ ಜಾರಿಯನ್ನು ಸುನಿಶ್ಚಿತಗೊಳಿಸಬೇಕು ಎಂದು ಹೇಳಿದೆ. ರಾಷ್ಟ್ರೀಯ ಮಾಹಿತಿ ಕೇಂದ್ರ (National Information Centre) ಯೊಂದಿಗೆ ಸಮಾಲೋಚನೆ ನಡೆಸಿ ಅಸಂಘಟಿತ ಮತ್ತು ವಲಸೆ ಕಾರ್ಮಿಕರನ್ನು ನೋಂದಾಯಿಸಬಹುದಾದ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಕೇಳಿದೆ. ಈ ಪೋರ್ಟಲ್ ಅಭಿವೃದ್ಧಿಗಾಗಿ ನ್ಯಾಯಾಲಯವು 31 ಜುಲೈ 2021 ರವರೆಗೆ ಗಡುವು ನೀಡಿದೆ.
ಏನಿದು ಒನ್ ನೇಶನ್-ಒನ್ ರೇಶನ್ ಕಾರ್ಡ್ ಯೋಜನೆ?
'ಒನ್ ನೇಷನ್ ಒನ್ ರೇಷನ್ ಕಾರ್ಡ್' ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಪಿಡಿಎಸ್‌ನ ಫಲಾನುಭವಿಗಳು ದೇಶದ ಎಲ್ಲಿಯಾದರೂ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಕಾರ್ಯನಿರ್ವಹಿಸುವ ಪಡಿತರ ಅಂಗಡಿಗಳಿಂದ ತಮ್ಮ ಪಾಲಿನ ಪಡಿತರವನ್ನು ಪಡೆಯುತ್ತಾರೆ. ಈ ಯೋಜನೆಯಡಿ, ಪಿಡಿಎಸ್‌ನ ಫಲಾನುಭವಿಗಳನ್ನು ತಮ್ಮ ಆಧಾರ್ ಕಾರ್ಡ್‌ನಲ್ಲಿ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ ಸಾಧನದೊಂದಿಗೆ ಗುರುತಿಸಲಾಗುತ್ತದೆ. ಇದರಲ್ಲಿ ಫಲಾನುಭವಿಗಳಿಗೆ ಸಂಬಂಧಿಸಿದ ವಿವರಗಳನ್ನು ನೀಡಲಾಗುತ್ತದೆ. ಪ್ರಸ್ತುತ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ (Food Security Act) ದೇಶದ 80 ಕೋಟಿಗೂ ಹೆಚ್ಚು ಜನರಿಗೆ ಕೇಂದ್ರ ಸರ್ಕಾರವು ಆಹಾರ ಧಾನ್ಯಗಳನ್ನು ಉಚಿತವಾಗಿ ವಿತರಿಸುತ್ತಿದೆ ಎಂಬುದು ಇಲ್ಲಿ ಗಮನಾರ್ಹ.
ಇದನ್ನೂ ಓದಿ-Provident Fund: PFಗೆ ಸಂಬಂಧಿಸಿದಂತೆ Modi ಸರ್ಕಾರದ ಮಹತ್ವದ ಘೋಷಣೆ, ನೌಕರಿ ಕಳೆದುಕೊಂಡವರಿಗೆ ಸಿಗಲಿದೆ ಈ ನೆಮ್ಮದಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.