ಜುಲೈ ತಿಂಗಳಿನಲ್ಲಿ ಅನೇಕ ಆನ್‌ಲೈನ್ ಸೇಲ್ ಗಳು ನಡೆಯಲಿವೆ. ಆನ್ಲೈನ್ ಶಾಪಿಂಗ್‌ನಲ್ಲಿ ಉತ್ತಮ ರಿಯಾಯಿತಿಗಳು ಕೂಡಾ ಲಭ್ಯವಿರಲಿದೆ.
ನವದೆಹಲಿ : ಆನ್‌ಲೈನ್ ಶಾಪಿಂಗ್‌ನ ವ್ಯಾಮೋಹ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನೀವು ಕೂಡಾ ಆನ್‌ಲೈನ್ ಶಾಪಿಂಗ್‌ನಲ್ಲಿ (Online shopping) ಆಸಕ್ತಿ ಹೊಂದಿದ್ದೀರಾ? ಹಾಗಿದ್ದರೆ ಜುಲೈ ತಿಂಗಳು ಬಹಳ ವಿಶೇಷವಾಗಿದೆ. ಜುಲೈ ತಿಂಗಳಿನಲ್ಲಿ ಅನೇಕ ಆನ್‌ಲೈನ್ ಸೇಲ್ ಗಳು (Online sale) ನಡೆಯಲಿವೆ. ಅಮೆಜಾನ್, ಫ್ಲಿಪ್‌ಕಾರ್ಟ್ ಸೇರಿದಂತೆ ಅನೇಕ ಇ-ಕಾಮರ್ಸ್ ಕಂಪನಿಗಳು ತಮ್ಮ ಗ್ರಾಹಕರಿಗೆ ಮಾರಾಟವನ್ನು ಘೋಷಿಸಿವೆ. ಆನ್ಲೈನ್ ಶಾಪಿಂಗ್‌ನಲ್ಲಿ ಉತ್ತಮ ರಿಯಾಯಿತಿಗಳು ಕೂಡಾ ಲಭ್ಯವಿರಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ವಿಶ್ವದ ಪ್ರಮುಖ ಇ-ಕಾಮರ್ಸ್ ಕಂಪನಿ ಅಮೆಜಾನ್‌ನ ಭಾರತೀಯ ಘಟಕವಾದ ಅಮೆಜಾನ್ ಇಂಡಿಯಾ ತನ್ನ ಗ್ರಾಹಕರಿಗೆ ಆಗಾಗ ಆಫರ್ ಗಳನ್ನು ನೀಡುತ್ತಿರುತ್ತದೆ. ಮತ್ತೊಮ್ಮೆ ಅಮೆಜಾನ್ ಜುಲೈನಲ್ಲಿ ಬಂಪರ್ ಸೇಲ್ ತರುತ್ತಿದೆ. Small Business Days Sale ಜುಲೈ 2 ರಿಂದ ಜುಲೈ 4, ರವರೆಗೆ ನಡೆಯಲಿದೆ.
ದೇಶದ ಪ್ರಮುಖ ಇ-ಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ ಜುಲೈ 1 ರಿಂದ ಜುಲೈ 3, 2021 ರವರೆಗೆ ಸೇಲ್ ಆರಂಭಿಸುತ್ತಿದೆ. ಕಂಪನಿಯು ಇದನ್ನು ಫ್ಲಿಪ್‌ಕಾರ್ಟ್ ಸೂಪರ್ ಸೇವರ್ ಡೇಸ್ ಸೇಲ್ ಎಂದು ಹೆಸರಿಸಿದೆ. ಇದಲ್ಲದೆ ಜುಲೈ 11 ರಂದು Flipkart Mobiles Sale ಲೈವ್ ನಡೆಯಲಿದೆ.
ಫ್ಯಾಷನ್‌ನಲ್ಲಿ ಆಸಕ್ತಿ ಹೊಂದಿರುವವರಿಗೆ, ಮಿಂತ್ರಾ (Fashion Sale on Myntra) ಬಂಪರ್ ಸೇಲ್ ತರುತ್ತಿದೆ. ಮಾರಾಟದೊಂದಿಗೆ ಮಿಂತ್ರಾ ಡಾಟ್ ಕಾಮ್ ಫ್ಯಾಶನ್ ಉತ್ಪನ್ನಗಳನ್ನು ಮಾರಾಟ ಮಾಡುವ ಆನ್‌ಲೈನ್ ಸೈಟ್ ಆಗಿದೆ. ಮುಂದಿನ ತಿಂಗಳು ಇದು ಎಂಡ್ ಆಫ್ ರೀಜನ್ ಸೇಲ್ ನಡೆಸುತ್ತಿದೆ. ಈ ಸೇಲ್ ಜುಲೈ 3 ರಿಂದ 8 ರವರೆಗೆ ನಡೆಯಲಿದೆ. ಇದರಲ್ಲಿ ನೀವು 50 ರಿಂದ 80 ಪ್ರತಿಶತದಷ್ಟು ರಿಯಾಯಿತಿ ದರದಲ್ಲಿ ಶಾಪಿಂಗ್ ಮಾಡಲು ಸಾಧ್ಯವಾಗುತ್ತದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ಗಳಲ್ಲಿ ಶೇಕಡಾ 12 ರಷ್ಟು ತ್ವರಿತ ರಿಯಾಯಿತಿ ಕೂಡಾ ಸಿಗಲಿದೆ.
ಸ್ಟೈಲಿಶ್ ಡ್ರೆಸ್ ಮತ್ತು ಫುಟ್ ವೇರ್ ಗಳಿಗಾಗಿಯೇ ಹೆಸರುವಾಸಿಯಾಗಿರುವ ajio.com ಕೂಡಾ ಆಫರ್ ಸೇಲ್ ನಡೆಸಲಿದೆ. Ajio BIG BOLD SALE ಜುಲೈ 1 ರಿಂದ 5 ರವರೆಗೆ ajio.comನಲ್ಲಿ ನಡೆಯಲಿದೆ. ಇದರಲ್ಲಿ, ಫ್ಯಾಶನ್ ಬ್ರಾಂಡ್‌ಗಳು 50 ರಿಂದ 90 ಪ್ರತಿಶತದಷ್ಟು ರಿಯಾಯಿತಿ ದರದಲ್ಲಿ ಸಿಗಲಿದೆ.