ನವದೆಹಲಿ : Paytm Postpaid : ಬೈ ನೌ ಪೇ ಲೇಟರ್ ಸೇವೆಯನ್ನು ವಿಸ್ತರಿಸುತ್ತಾ, Paytm ಪೋಸ್ಟ್ಪೇಯ್ಡ್ ಮಿನಿ ಅನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ, ಪೇಟಿಎಂ ಗ್ರಾಹಕರಿಗೆ ಕೆಲವೇ ನಿಮಿಷಗಳಲ್ಲಿ 60,000 ರೂ.ವರೆಗೆ ಸಾಲ (instant loan) ಸಿಗುತ್ತದೆ. ಈ ಸೇವೆಯ ಮೂಲಕ ಕಂಪನಿಯು ಸಣ್ಣ ಸಾಲಗಳನ್ನು ನೀಡುತ್ತದೆ. ಕಂಪನಿಯು ಆದಿತ್ಯ ಬಿರ್ಲಾ ಫೈನಾನ್ಸ್ ಲಿಮಿಟೆಡ್ನ ಸಹಭಾಗಿತ್ವದಲ್ಲಿದೆ. ಸ್ಮಾಲ್ ಟಿಕೆಟ್ ಲೋನ್ ನಿಂದ ಗ್ರಾಹಕರಿಗೆ ಸಹಾಯವಾಗಲಿದೆ ಎನ್ನುವುದು ಕಂಪನಿಯ ಮಾತು. ಕರೋನಾ ಅವಧಿಯಲ್ಲಿ ತಮ್ಮ ಮನೆಯ ವೆಚ್ಚವನ್ನು ಪೂರೈಸಲು ಈ ಸಾಲ ಸೌಲಭ್ಯ ಸಹಕಾರಿಯಾಗಲಿದೆ ಏನು ಹೇಳುತ್ತದೆ ಕಂಪನಿ.
ಪೋಸ್ಟ್ಪೇಯ್ಡ್ ಮಿನಿ (Paytm Mini) ಸೇವೆಯಡಿಯಲ್ಲಿ ಕಂಪನಿಯು 250 ರಿಂದ 1,000 ರೂ.ಗಳ ಸಾಲವನ್ನು ನೀಡಲಿದೆ. ಇನ್ನು 60,000 ರೂಪಾಯಿಗಳ ತ್ವರಿತ ಸಾಲ ಕೂಡಾ ನೀಡಲಿದೆ. ಈ ಸಾಲದ ಮೂಲಕ ಗ್ರಾಹಕರು ತಮ್ಮ ಮಾಸಿಕ ಮೊಬೈಲ್ ಬಿಲ್, ಡಿಟಿಎಚ್ ರೀಚಾರ್ಜ್, ಗ್ಯಾಸ್ ಸಿಲಿಂಡರ್ ಬುಕಿಂಗ್ (Gas booking) , ವಿದ್ಯುತ್ ಬಿಲ್ ಮತ್ತು ವಾಟರ್ ಬಿಲ್ ಪಾವತಿಸಲು ಸಾಧ್ಯವಾಗುತ್ತದೆ. ಇದರೊಂದಿಗೆ ಗ್ರಾಹಕರು ಪೇಟಿಎಂ ಮಾಲ್ನೊಂದಿಗೆ (Paytm mall) ಶಾಪಿಂಗ್ ಮಾಡಲು ಸಹ ಸಾಧ್ಯವಾಗುತ್ತದೆ.
ಇದನ್ನೂ ಓದಿ : Alert! SBI ಖಾತೆದಾರರ ಮೇಲೆ ಚೀನಾ ಸೈಬರ್ ಕಳ್ಳರ ಕಣ್ಣು, ಖಾತೆ ಖಾಲಿಯಾದೀತು ಎಚ್ಚರ!
ಫಸ್ಟ್ ಟೈಮ್ ಗ್ರಾಹಕರಿಗೆ ಸಿಗಲಿದೆ ಹೊಸ :
“ನಾವು ಮೊದಲ ಬಾರಿಗೆ ಗ್ರಾಹಕರಿಗೆ ಸಾಲ ಸೌಲಭ್ಯವನ್ನು ಪರಿಚಯಿಸುತ್ತಿದ್ದೇವೆ. ಇದು ಅವರಲ್ಲಿ ಆರ್ಥಿಕ ಶಿಸ್ತು ಮೂಡಿಸುತ್ತದೆ ಎಂದು ಪೇಟಿಎಂ ಲೆಂಡಿಂಗ್ ಸಿಇಒ ಭಾವೇಶ್ ಗುಪ್ತಾ ಹೇಳಿದ್ದಾರೆ. ಈ ಪೋಸ್ಟ್ ಪೇಯ್ಡ್ (Post paid) ಸೌಲಭ್ಯದ ಮೂಲಕ, ಗ್ರಾಹಕರು ತಮ್ಮ ಬಿಲ್ಗಳು ಮತ್ತು ಬಾಕಿ ಪಾವತಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
30 ದಿನಗಳವರೆಗೆ ಯಾವುದೇ ಬಡ್ಡಿ ವಿಧಿಸುವುದಿಲ್ಲ :
Paytm ಪೋಸ್ಟ್ಪೇಯ್ಡ್ ಸೇವೆಯಡಿಯಲ್ಲಿ, ಗ್ರಾಹಕರಿಗೆ 30 ದಿನಗಳವರೆಗೆ ಯಾವುದೇ ಬಡ್ಡಿಯನ್ನು ವಿಧಿಸುವುದಿಲ್ಲ. ಇದನ್ನುಅಕ್ಟಿವೇಟ್ ಮಾಡಲು ಕೂಡಾ ಯಾವುದೇ ಶುಲ್ಕವನ್ನು ಪಾವತಿಸಬೇಕಿಲ್ಲ. ಆದರೆ Paytm ಸೌಲಭ್ಯ ಶುಲ್ಕವನ್ನು ಮಾತ್ರ ಪಾವತಿಸ ಬೇಕಾಗುತ್ತದೆ. ತಮ್ಮ ಮಾಸಿಕ ಬಜೆಟ್ ಅನ್ನು ಗಮನದಲ್ಲಿಟ್ಟುಕೊಂಡು, ಪೇಟಿಎಂ ಗ್ರಾಹಕರು ದೇಶದ ಯಾವ ಮೂಲೆಯಿಂದಾದರೂ ಶಾಪಿಂಗ್ ಮಾಡಬಹುದು. ದೇಶದ 550 ಕ್ಕೂ ಹೆಚ್ಚು ನಗರಗಳಲ್ಲಿ ಪೇಟಿಎಂ ಸೇವೆ ಲಭ್ಯವಿದೆ.
ಇದನ್ನೂ ಓದಿ : Personal Loan : ವೈಯಕ್ತಿಕ ಸಾಲದ ಮೇಲೆ ಆದಾಯ ತೆರಿಗೆ ವಿನಾಯಿತಿ ಲಭ್ಯ : ಹೇಗೆ ಕ್ಲೈಮ್ ಮಾಡಬೇಕು ಇಲ್ಲಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ