ಏ.10ರಂದು ಭಾರತ್ ಬಂದ್ : ಮುಂಜಾಗ್ರತಾ ಕ್ರಮಕ್ಕೆ ರಾಜ್ಯಗಳಿಗೆ ಗೃಹ ಸಚಿವಾಲಯ ಸೂಚನೆ

ಹಲವು ಸಂಘಟನೆಗಳು ಏಪ್ರಿಲ್ 10ರಂದು ಭಾರತ ಬಂದ್'ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ. 

Last Updated : Apr 9, 2018, 05:55 PM IST
ಏ.10ರಂದು ಭಾರತ್ ಬಂದ್ : ಮುಂಜಾಗ್ರತಾ ಕ್ರಮಕ್ಕೆ ರಾಜ್ಯಗಳಿಗೆ ಗೃಹ ಸಚಿವಾಲಯ ಸೂಚನೆ title=

ನವದೆಹಲಿ : ಹಲವು ಸಂಘಟನೆಗಳು ಏಪ್ರಿಲ್ 10ರಂದು ಭಾರತ ಬಂದ್'ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ. 

ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ವಾಟ್ಸ್ಆಪ್ ಗ್ರೂಪ್ಗಳಲ್ಲಿ ಏ.10ರಂದು ಭಾರತ್ ಬಂದ್'ಗೆ ಸಂಬಂಧಿತ ಸಂದೇಶಗಳು ಹರಿದಾಡಿದ ಹಿನ್ನೆಲೆಯಲ್ಲಿ ಗೃಹ ಇಲಾಖೆ ಈ ಸೂಚನೆ ನೀಡಿದೆ. ಕೆಲ ಸಂಘಟನೆಗಳು ಎಸ್ಸಿ/ಎಸ್ಟಿ ಕಾಯ್ದೆಗೆ ಸಂಬಂಧಿಸಿದಂತೆ ಬಂದ್'ಗೆ ಕರೆ ನೀಡಿದ್ದರೆ, ಮತ್ತೆ ಕೆಲವರು ಏಪ್ರಿಲ್ 2ರಂದು ನಡೆಸಿದ ಭಾರತ ಬಂದ್ ಸಂದರ್ಭದಲ್ಲಿ ನಡೆದ ಹಿಂಸಾಚಾರ ವಿರೋಧಿಸಿ ಬಂದ್'ಗೆ ಕರೆ ನೀಡಿವೆ. 

ಇದೇ ವೇಳೆ, ರಾಜಸ್ಥಾನದ ವಿವಿಧ ಸಮುದಾಯಗಳ ಪ್ರತಿನಿಧಿಗಳು ಏ.10ರ ಬಂದ್ಗೆ ಬೆಂಬಲ ನೀಡುವುದಿಲ್ಲ ಎಂದು ಬಿಲ್ವಾರ ಜಿಲ್ಲಾಡಳಿತಕ್ಕೆ ತಿಳಿಸಿದ್ದಾರೆ. ಕರಣಿ ಸೇನಾ, ಜಾಟ್ ಮಹಾಸಭಾ, ಜಾಟ್ ಸಮಾಜಸೇವಾ ಸಂಸ್ಥಾನ ಮತ್ತು ಅಖಿಲ ಭಾರತೀಯ ಗುರ್ಜಾರ್ ಮಹಾಸಭಾ ಪ್ರತಿನಿಧಿಗಳು ಇಂದು ಜಿಲ್ಲಾ ಅಧಿಕಾರಿಗಳನ್ನು ಭೇಟಿ ಮಾಡಿ ನಿಲುವು ತಿಳಿಸಿದ್ದಾರೆ.

ಏ.2ರಂದು ನಡೆದ ಭಾರತ್ ಬಂದ್ ಸಂದರ್ಭದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಅನೇಕ ರಾಜ್ಯಗಳಲ್ಲಿ ಸಾರಿಗೆ, ಮೊಬೈಲ್ ಮತ್ತು ಅಂತರ್ಜಾಲ ಸೇವೆಗಳನ್ನು ನಿಷ್ಕ್ರಿಯಗೊಳಿಸಲಾಗಿತ್ತು. 12ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಅಲ್ಲದೆ, 100 ಹೆಚ್ಚು ರೈಲುಗಳ ಸಂಚಾರ ಅಸ್ಥವ್ಯಸ್ಥಗೊಂಡಿತ್ತು.

Trending News