Viral Video : ನೆಟ್ಟಿಗರನ್ನು ಮೆಚ್ಚಿಸಿದೆ ನವ ವಧುವರರ ಡ್ಯಾನ್ಸ್ ಬ್ಯಾಟಲ್!  

ಸಧ್ಯ ಈ ಹಾಡಿಗೆ ನವ ವಿವಾಹಿತ ದಂಪತಿಗಳು ಸಖತ್ ಸ್ಟೆಪ್ ಹಾಕಿದ್ದು ಅದು ಸಧ್ಯ ಭಾರಿ ವೈರಲ್ ಆಗಿದೆ. ಹಾಡಿನ ಟ್ಯೂನ್‌ಗೆ ನವ ಜೋಡಿಗಳು ತಮ್ಮ ಮದುವೆಯ ಉಡುಪಿನಲ್ಲಿ ಡಾನ್ಸ್ ಮಾಡುತ್ತಿರುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Last Updated : Aug 4, 2021, 04:52 PM IST
  • ಇತ್ತೀಚಿನ ದಿನಗಳಲ್ಲಿ ಇನ್‌ಸ್ಟಾಗ್ರಾಮ್ ವೀಡಿಯೋಗಳು ನೆಟ್ಟಿಗರನ್ನು ಮನರಂಜಿಸುತ್ತವೆ
  • ಸಧ್ಯ ಇನ್‌ಸ್ಟಾಗ್ರಾಮ್ ನಲ್ಲಿ ಭಾರಿ ಟ್ರೆಂಡಿಂಗ್ ನಲ್ಲಿದೆ ವೀಡಿಯೋ
  • ಹಾಡಿನ ಟ್ಯೂನ್‌ಗೆ ನವ ಜೋಡಿಗಳು ತಮ್ಮ ಮದುವೆಯ ಉಡುಪಿನಲ್ಲಿ ಡಾನ್ಸ್
Viral Video : ನೆಟ್ಟಿಗರನ್ನು ಮೆಚ್ಚಿಸಿದೆ ನವ ವಧುವರರ ಡ್ಯಾನ್ಸ್ ಬ್ಯಾಟಲ್!   title=

ಹೊಸದಿಲ್ಲಿ: ಇತ್ತೀಚಿನ ದಿನಗಳಲ್ಲಿ ಇನ್‌ಸ್ಟಾಗ್ರಾಮ್ ವೀಡಿಯೋಗಳು ನೆಟ್ಟಿಗರನ್ನು ಮನರಂಜಿಸುತ್ತವೆ. ಅವುಗಳಲ್ಲಿ ಏಕ್ ಬಾರ್ ಪೆಹ್ರಾ ಹತಾ ದೇ ಶರಾಬಿಯ ರೀಮಿಕ್ಸ್ಡ್ ಸಧ್ಯ ಇನ್‌ಸ್ಟಾಗ್ರಾಮ್ ನಲ್ಲಿ ಭಾರಿ ಟ್ರೆಂಡಿಂಗ್ ನಲ್ಲಿದೆ ಈ ಹಾಡನ್ನು ಮೂಲತಃ ಲತಾ ಮಂಗೇಶ್ಕರ್ ಹಾಡಿದ್ದಾರೆ. 

ಸಧ್ಯ ಈ ಹಾಡಿಗೆ ನವ ವಿವಾಹಿತ ದಂಪತಿಗಳು ಸಖತ್ ಸ್ಟೆಪ್ ಹಾಕಿದ್ದು ಅದು ಸಧ್ಯ ಭಾರಿ ವೈರಲ್(Viral Video) ಆಗಿದೆ. ಹಾಡಿನ ಟ್ಯೂನ್‌ಗೆ ನವ ಜೋಡಿಗಳು ತಮ್ಮ ಮದುವೆಯ ಉಡುಪಿನಲ್ಲಿ ಡಾನ್ಸ್ ಮಾಡುತ್ತಿರುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋವನ್ನ  ನಿರಂಜನ್ ಮಹಾಪಾತ್ರಾ ಎಂಬವುವವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ನಂತರ ಈ  ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಭಾರೀ ವೈರಲ್ ಆಗಿದೆ. 

ಇದನ್ನೂ ಓದಿ : e-RUPI Digital Payment: ಡಿಜಿಟಲ್ ಪಾವತಿ ಉತ್ತೇಜಿಸುವ E-RUPIಯ 10 ಪ್ರಯೋಜನ ತಿಳಿಯಿರಿ

ವೈರಲ್ ಆಗಿರುವ ವೀಡಿಯೋದಲ್ಲಿ ವಧು ಕೆಂಪು ಬಣ್ಣದ ಲೆಹೆಂಗಾ ಮತ್ತು ಕಪ್ಪು ಸನ್ ಗ್ಲಾಸ್  ಧರಿಸಿದ್ದನ್ನು ಕಾಣಬಹುದು ಮತ್ತು ವರನು ತನ್ನ ಮದುವೆಯ ಶೇರ್ವಾಣಿಯನ್ನು ಅಲಂಕರಿಸಿದ್ದಾನೆ. ವೀಡಿಯೊದ ಅತ್ಯುತ್ತಮ ಭಾಗವೆಂದರೆ ದಂಪತಿಗಳು ನಿರಾತಂಕವಾಗಿ ನೃತ್ಯ ಮಾಡುತ್ತಿರುವುದು. ಆ ಕ್ಷಣವನ್ನು ನವ ವದು-ವರರು(Bride and Groom) ಸಂಪೂರ್ಣವಾಗಿ ಆನಂದಿಸುವದನ್ನ ವಿಡಿಯೋದಲ್ಲಿ ಕಾಣಬಹುದು.

ದೇಶದಲ್ಲಿ ಈಗ ಮದುವೆ ಸೀಸನ್(wedding season) ಭರದಿಂದ ಸಾಗುತ್ತಿರುವುದರಿಂದ, ದಂಪತಿಗಳು ತಮ್ಮ ವಿಶೇಷ ದಿನವನ್ನು ಸ್ಮರಣೀಯವಾಗಿರಿಸಲು ತಮ್ಮ ಅತ್ಯುತ್ತಮ ಪ್ರಯತ್ನಗಳನ್ನು ಮಾಡುವಂತಹ ಹೆಚ್ಚಿನ ಸಂಖ್ಯೆಯ ಅನನ್ಯ ವೀಡಿಯೊಗಳು ವೈರಲ್ ಆಗುತ್ತಿವೆ. ಈ ವಿಡಿಯೋ ಕೂಡ ಜನರಿಂದ ಹೆಚ್ಚಿನ ಪ್ರೀತಿಯನ್ನು ಪಡೆದಿದೆ ಮತ್ತು ಸುಮಾರು 800 ಜನ ವೀಕ್ಷಿಸಿದ್ದಾರೆ. ಮತ್ತೆ ನೂರಾರು ಕಾಮೆಂಟ್‌ಗಳು  ಬಂದಿವೆ.

ಇದನ್ನೂ ಓದಿ : Aadhaar for NRI: ಎನ್ಆರ್ ಐ ಗಳು ಕೂಡಾ ಮಾಡಿಸಬಹುದು ಆಧಾರ್ ಕಾರ್ಡ್..! UIDAI ತಂದಿದೆ ಹೊಸ ನಿಯಮ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News