ಒಲಿಂಪಿಕ್ ನಲ್ಲಿ ಪದಕ ಗೆದ್ದ ಹಾಕಿ ತಂಡದ ಆಟಗಾರರಿಗೆ ಬಹುಮಾನಗಳ ಸುರಿ ಮಳೆ, ಪ್ರತಿ ಆಟಗಾರನಿಗೂ ನಗದು ಘೋಷಣೆ

ಈ ಐತಿಹಾಸಿಕ ವಿಜಯದ ನಂತರ, ಭಾರತೀಯ ಹಾಕಿ ತಂಡಕ್ಕೆ  ಬಹುಮಾನಗಳ ಸುರಿಮಳೆಯಾಗುತ್ತಿದೆ. 

Written by - Ranjitha R K | Last Updated : Aug 5, 2021, 03:02 PM IST
  • ಭಾರತೀಯ ಹಾಕಿ ತಂಡಕ್ಕೆ ಬಹುಮಾನಗಳ ಸುರಿಮಳೆ
  • ಆಟಗಾರನಿಗೆ ಒಂದು ಕೋಟಿ ರೂಪಾಯಿ ನಗದು ಘೋಷಣೆ
  • ಕಂಚಿನ ಪದಕ ಗೆದ್ದಿರುವ ಭಾರತೀಯ ಪುರುಷರ ಹಾಕಿ ತಂಡ
ಒಲಿಂಪಿಕ್ ನಲ್ಲಿ ಪದಕ ಗೆದ್ದ ಹಾಕಿ ತಂಡದ ಆಟಗಾರರಿಗೆ ಬಹುಮಾನಗಳ ಸುರಿ ಮಳೆ, ಪ್ರತಿ ಆಟಗಾರನಿಗೂ ನಗದು ಘೋಷಣೆ  title=
ಭಾರತೀಯ ಹಾಕಿ ತಂಡಕ್ಕೆ ಬಹುಮಾನಗಳ ಸುರಿಮಳೆ (photo zee news)

ನವದೆಹಲಿ : ಭಾರತೀಯ ಪುರುಷರ ಹಾಕಿ ತಂಡ (Mens hockey team) ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದಿದೆ. ಬರೋಬರಿ 41 ವರ್ಷಗಳ ನಂತರ ಪದಕ ಗೆದ್ದು ಇತಿಹಾಸ ನಿರ್ಮಿಸಿದೆ.  ಜರ್ಮನಿಯ ವಿರುದ್ಧದ ರೋಚಕ ಪಂದ್ಯದಲ್ಲಿ 5-4 ಗೆಲುವು ದಾಖಲಿಸುವ ಮೂಲಕ ಭಾರತದ ಪುರುಷರ ಹಾಕಿ (Mens hockey Indian team) ತಂಡ ಕಂಚಿನ ಪದಕವನ್ನು ಭಾರತದ ಮುಡಿಗೇರಿಸಿಕೊಂಡಿತು. ಭಾರತೀಯ ಹಾಕಿ ತಂಡವು ಈ ಹಿಂದೆ 1980 ರ ಮಾಸ್ಕೋ ಒಲಿಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದಿತ್ತು. 

ಪದಕ ಗೆದ್ದ ತಂಡದ ಆಟಗಾರರಿಗೆ ಬಹುಮಾನಗಳ ಸುರಿಮಳೆ :
ಈ ಐತಿಹಾಸಿಕ ವಿಜಯದ ನಂತರ, ಭಾರತೀಯ ಹಾಕಿ ತಂಡಕ್ಕೆ (Mens hockey team) ಬಹುಮಾನಗಳ ಸುರಿಮಳೆಯಾಗುತ್ತಿದೆ. ಟೋಕಿಯೊ ಒಲಿಂಪಿಕ್ (Tokyo Olympics) ಕ್ರೀಡಾಕೂಟದಲ್ಲಿ, ಕಂಚಿನ ಪದಕ ವಿಜೇತ ಭಾರತೀಯ ತಂಡದ ಆಟಗಾರರಿಗೆ ತಲಾ 1 ಕೋಟಿ ರೂಪಾಯಿ ನಗದು ಬಹುಮಾನವನ್ನು ಪಂಜಾಬ್ ಸರ್ಕಾರ (Punjab government) ಘೋಷಿಸಿದೆ. ಪಂಜಾಬ್ ಕ್ರೀಡಾ ಸಚಿವ ರಾಣಾ ಗುರ್ಮಿತ್ ಸಿಂಗ್ ಸೋಧಿ ಈ ಬಹುಮಾನವನ್ನು ಘೋಷಿಸಿದ್ದಾರೆ.

 

ಇದನ್ನೂ ಓದಿ : Tokyo Olympics 2020 : ಫ್ರೀ ಸ್ಟೈಲ್ ರೆಸ್ ಲಿಂಗ್ ನಲ್ಲಿ ಫೈನಲ್ ಪ್ರವೇಶಿಸಿದ Ravi Kumar Dahiya, ಭಾರತಕ್ಕೆ ಮತ್ತೊಂದು ಪದಕ ಖಚಿತ

ಒಂದು ಕೋಟಿ ರೂಪಾಯಿ ನಗದು : 
ಭಾರತೀಯ ಹಾಕಿಗೆ ಇದೊಂದು ಐತಿಹಾಸಿಕ ದಿನವಾಗಿದ್ದು, ತಂಡದ ಆಟಗಾರನಿಗೆ ಪಂಜಾಬ್‌ ಸರ್ಕಾರದ ವತಿಯಿಂದ  1 ಕೋಟಿ ನಗದು ಬಹುಮಾನ (Cash prize) ನೀಡಲಾಗುವುದು ಎಂದು ರಾಣಾ ಗುರ್ಮಿತ್ ಸಿಂಗ್ ಸೋಧಿ (Rana Gurmit Singh Sodhi) ಘೋಷಿಸಿದ್ದಾರೆ. ಆಟಗಾರು ಭಾರತಕ್ಕೆ ಹಿಂತಿರುಗಿದ ಕೂಡಲೇ ಸಂಭ್ರಮಾಚರಣೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.  ನಾಯಕ ಮನ್ ಪ್ರೀತ್ ಸಿಂಗ್ ಸೇರಿದಂತೆ, ಪಂಜಾಬ್‌ನ ಎಂಟು ಆಟಗಾರರು,  ಭಾರತೀಯ ಪುರುಷರ ಹಾಕಿ ತಂಡದ ಸದಸ್ಯರಾಗಿದ್ದಾರೆ. 

ಇದನ್ನೂ ಓದಿ : Tokyo Olympics Boxing: ಭಾರತಕ್ಕೆ 3ನೇ ಪದಕ ತಂದುಕೊಟ್ಟ ಲವ್ಲಿನಾ ಬೊರ್ಗೊಹೈನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
 

Trending News