Tokyo Olympics 2020 : ಫ್ರೀ ಸ್ಟೈಲ್ ರೆಸ್ ಲಿಂಗ್ ನಲ್ಲಿ ಫೈನಲ್ ಪ್ರವೇಶಿಸಿದ Ravi Kumar Dahiya, ಭಾರತಕ್ಕೆ ಮತ್ತೊಂದು ಪದಕ ಖಚಿತ

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ನಾಲ್ಕನೇ ಪದಕ ಖಚಿತವಾಗಿದೆ. ಕುಸ್ತಿಪಟು ರವಿಕುಮಾರ್ ಫೈನಲ್ ಪ್ರವೇಶಿಸಿದ್ದಾರೆ.   

Written by - Ranjitha R K | Last Updated : Aug 4, 2021, 04:13 PM IST
  • ಫೈನಲ್ ಪ್ರವೇಶಿಸಿದ ಕುಸ್ತಿಪಟು ರವಿಕುಮಾರ್
  • ಚಿನ್ನದ ಬೇಟೆಗೆ ಸಜ್ಜಾದ ರವಿಕುಮಾರ್
  • ಸೆಮಿಫೈನಲ್ ನಲ್ಲಿ ಸೆಣೆಸುತ್ತಿರುವ ಮಹಿಳಾ ಹಾಕಿ ತಂಡ
Tokyo Olympics 2020 :  ಫ್ರೀ ಸ್ಟೈಲ್ ರೆಸ್ ಲಿಂಗ್ ನಲ್ಲಿ ಫೈನಲ್ ಪ್ರವೇಶಿಸಿದ Ravi Kumar Dahiya, ಭಾರತಕ್ಕೆ ಮತ್ತೊಂದು ಪದಕ ಖಚಿತ  title=
ಚಿನ್ನದ ಬೇಟೆಗೆ ಸಜ್ಜಾದ ರವಿಕುಮಾರ್ (photo twitter)

ನವದೆಹಲಿ : Tokyo Olympics 2020 :  ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ನಾಲ್ಕನೇ ಪದಕ ಖಚಿತವಾಗಿದೆ. ಕುಸ್ತಿಪಟು ರವಿಕುಮಾರ್ (Ravi Kumar Dahiya) ಫ್ರೀ ಸ್ಟೈಲ್ ರೆಸ್ ಲಿಂಗ್ ನಲ್ಲಿ (freestyle wrestling) ಫೈನಲ್ ಪ್ರವೇಶಿಸಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ರವಿ ಕಜಕಿಸ್ತಾನದ ನುರಿಸ್ಲಾಮ್ ಸನಾಯೆವ್ (Nurislam Sanayev) ಅವರನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ರವಿ ಕುಮಾರ್  ಮತ್ತೊಂದು  ಪದಕವನ್ನು ಖಚಿತಪಡಿಸಿದ್ದಾರೆ.  

57 ಕೆಜಿಯ ಸೆಮಿಫೈನಲ್ ಪಂದ್ಯದಲ್ಲಿ ರವಿ, ಕಜಕಿಸ್ತಾನದ  ನುರಿಸ್ಲಾಮ್ ಸನಾಯೆವ್ ಅವರನ್ನು ಸೋಲಿಸಿದ್ದಾರೆ.  ಈ ಗೆಲುವಿನೊಂದಿಗೆ ರವಿ ಕುಮಾರ್ (Ravi Kumar Dahiya) ಚಿನ್ನದ ಬೇಟೆಗೆ ಸಜ್ಜಾಗಿದ್ದಾರೆ. ಹಿರಿಯ ಕುಸ್ತಿಪಟು ಸುಶೀಲ್ ಕುಮಾರ್ 2012 ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.  ರವಿ ಈ ಬಾರಿ ಚಿನ್ನ ಗೆದ್ದರೆ, ಈ ಸಾಧನೆ ಮಾಡಿದ ಮೊದಲ ಭಾರತೀಯ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. 

ಇದನ್ನೂ ಓದಿ : Tokyo Olympics Boxing: ಭಾರತಕ್ಕೆ 3ನೇ ಪದಕ ತಂದುಕೊಟ್ಟ ಲವ್ಲಿನಾ ಬೊರ್ಗೊಹೈನ್

ಇಂದು ದೇಶದ ಪ್ರಸಿದ್ಧ ಜಾವಲಿನ್ ಎಸೆತಗಾರ ನೀರಜ್ ಚೋಪ್ರಾ ಅವರ ಜಾವೆಲಿನ್ ಎಸೆತದೊಂದಿಗೆ ಇಂದಿನ ಆಟ ಆರಂಭವಾಯಿತು. ನೀರಜ್ (Neeraj Chopra) ತನ್ನ ಮೊದಲ ಎಸೆತದಲ್ಲಿಯೇ 83.50 ರ ಅರ್ಹತಾ ಅಂಕವನ್ನು ದಾಟಿ  ಅದ್ಭುತ ಆರಂಭವನ್ನೇ ನೀಡಿದರು.  ಅವರು 86.65 ಮೀಟರ್‌ ದೂರ ಎಸೆದಿದ್ದು, ಅರ್ಹತಾ ಗುಂಪು ಎ ಯಲ್ಲಿ ಇದು ಅತ್ಯಂತ ದೂರದ ಕ್ರಮಾಂಕವಾಗಿತ್ತು.

ಮಹಿಳಾ ಬಾಕ್ಸಿಂಗ್ (Womens Boxing) ಸೆಮಿಫೈನಲ್ ಪಂದ್ಯದಲ್ಲಿ ದೇಶವು ಯುವ ಮಹಿಳಾ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ (Lovlina Borgohain) ಅವರ ಮೇಲೆ ಭರವಸೆ ಇಟ್ಟಿತ್ತು. ಆದರೆ, ಟರ್ಕಿಯ ನಂ .1 ಬಾಕ್ಸರ್ ಬುಸೆನಾಜ್ ಸುರ್ಮೆನೆಲ್ಲಿ ವಿರುದ್ಧ ಅವರು ಸೋಲನ್ನು ಅನುಭವಿಸುವಂತಾಯಿತು. 5-0 ಅಂತರದಿಂದ ಸೋಲು ಕಂಡು ಕಂಚಿಗೆ ತೃಪ್ತಿ ಪಡುವಂತಾಯಿತು. ಲವ್ಲಿನಾ ಒಲಿಂಪಿಕ್ಸ್‌ನಲ್ಲಿ (Olympics) ಭಾರತಕ್ಕೆ ಕಂಚಿನ ಪದಕ ಗೆದ್ದ ಮೂರನೇ ಬಾಕ್ಸರ್ ಆಗಿದ್ದಾರೆ.

ಇನ್ನು ಭಾರತೀಯ ಮಹಿಳಾ (womens hockey) ಹಾಕಿ ತಂಡ ಅರ್ಜೆಂಟೀನಾ ವಿರುದ್ಧದ ಸೆಮಿಫೈನಲ್ ಪಂದ್ಯ ಆಡುತ್ತಿದೆ. ಇದೀಗ ಎಲ್ಲರ ದೃಷ್ಟಿ ಮಹಿಳಾ ಹಾಕಿ ತಂಡದ ಮೇಲಿದೆ. 

ಇದನ್ನೂ ಓದಿ : ಭಾರತಕ್ಕೆ ಇನ್ನೂ ಹೆಚ್ಚಿನ ಪದಕಗಳು ಬರಲಿವೆ: ಪಿ.ವಿ.ಸಿಂಧು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News