Shravan Mas 2021: ಇಂದಿನಿಂದ ಶ್ರಾವಣ ಮಾಸ ಆರಂಭ, ಮೊದಲ ಸೋಮವಾರ ಶಿವನನ್ನು ಒಲಿಸಿಕೊಳ್ಳಲು ಈ ರೀತಿ ಪೂಜೆ ಸಲ್ಲಿಸಿ

ದೇವಾದಿದೇವ ಶಿವನಿಗೆ ಅತ್ಯಂತ ಪ್ರಿಯವಾದ ಮಾಸ ಎಂದರೆ ಅದು ಶ್ರಾವಣ ಮಾಸ (Shravan Mas 2021), ಈ ವರ್ಷ ಶ್ರಾವಣ ಮಾಸ ಆಗಸ್ಟ್ 9 ಅಂದರೆ ಇಂದಿನಿಂದ ಆರಂಭಗೊಳ್ಳುತ್ತಿದೆ. ಈ ಬಾರಿಯ ಶ್ರಾವಣ ಮಾಸದ ಮತ್ತೊಂದು ವಿಶೇಷತೆ ಎಂದರೆ, ಈ ಬಾರಿ ಮೊದಲ ದಿನವೇ ಸೋಮವಾರ (Shravan Somavar) ಬಂದಿದೆ. ಶ್ರಾವಣ ಮಾಸದಲ್ಲಿ ಶಿವನಿಗೆ ಪೂಜೆ (Shravana Puja) ಸಲ್ಲಿಸುವುದು ತುಂಬಾ ಲಾಭಕಾರಿ ಎಂದು ಹೇಳಲಾಗುತ್ತದೆ. ಈ ತಿಂಗಳಿನಲ್ಲಿ ಸಂಪೂರ್ಣ ಭಕ್ತಿ ಭಾವದಿಂದ ಶಿವ-ಪಾರ್ವತಿಯರಿಗೆ  (Goddess Parvati) ಪೂಜೆ ಸಲ್ಲಿಸಿದರೆ, ಇಷ್ಟಾರ್ಥ ಪ್ರಾಪ್ತಿಯಾಗುತ್ತದೆ.

Written by - Nitin Tabib | Last Updated : Aug 9, 2021, 11:14 AM IST
  • ದೇವಾದಿದೇವ ಶಿವನಿಗೆ ಅತ್ಯಂತ ಪ್ರಿಯವಾದ ಮಾಸ ಎಂದರೆ ಅದು ಶ್ರಾವಣ ಮಾಸ.
  • ಈ ವರ್ಷ ಶ್ರಾವಣ ಮಾಸ ಆಗಸ್ಟ್ 9 ಅಂದರೆ ಇಂದಿನಿಂದ ಆರಂಭಗೊಳ್ಳುತ್ತಿದೆ.
  • ಈ ಬಾರಿಯ ಶ್ರಾವಣ ಮಾಸದ ಮತ್ತೊಂದು ವಿಶೇಷತೆ ಎಂದರೆ, ಈ ಬಾರಿ ಮೊದಲ ದಿನವೇ ಸೋಮವಾರ ಬಂದಿದೆ.
Shravan Mas 2021: ಇಂದಿನಿಂದ ಶ್ರಾವಣ ಮಾಸ ಆರಂಭ, ಮೊದಲ ಸೋಮವಾರ ಶಿವನನ್ನು ಒಲಿಸಿಕೊಳ್ಳಲು ಈ ರೀತಿ ಪೂಜೆ ಸಲ್ಲಿಸಿ title=
Shravan Mas 2021 (File Photo)

ನವದೆಹಲಿ: Shravan Mas 2021 - ದೇವಾದಿದೇವ ಶಿವನಿಗೆ (Lord Shiva) ಅತ್ಯಂತ ಪ್ರಿಯವಾದ ಮಾಸ ಎಂದರೆ ಅದು ಶ್ರಾವಣ ಮಾಸ, ಈ ವರ್ಷ ಶ್ರಾವಣ ಮಾಸ ಆಗಸ್ಟ್ 9 ಅಂದರೆ ಇಂದಿನಿಂದ ಆರಂಭಗೊಳ್ಳುತ್ತಿದೆ. ಸೆಪ್ಟೆಂಬರ್ 6 ರಂದು ಮುಕ್ತಾಯಗೊಳ್ಳುತ್ತಿದೆ. ಈ ಬಾರಿಯ ಶ್ರಾವಣದ ವಿಶೇಷತೆ ಎಂದರೆ, ಈ ಬಾರಿ ಶ್ರಾವಣ ಮಾಸ ಸೋಮವಾರ ಆರಂಭಗೊಂಡು ಸೋಮವಾರವೇ ಮುಕ್ತಾಯಗೊಳ್ಳುತ್ತಿದೆ. ಅಂದರೆ ಈ ಬಾರಿಯ ಶ್ರಾವಣ ಮಾಸ 29 ದಿನಗಳದ್ದಾಗಿರಲಿದ್ದು, ಇದರಲ್ಲಿ ಒಟ್ಟು 5 ಸೋಮವಾರಗಳು ಬರಲಿವೆ. ಹಿಂದೂ ಪಂಚಾಂಗದ ಪ್ರಕಾರ ಶ್ರಾವಣ ಮಾಸ ಐದನೇ ಮಾಸವಾಗಿದೆ. ಈ ತಿಂಗಳಿನಲ್ಲಿ ಶಿವನಿಗೆ ಪೂಜೆ ಸಲ್ಲಿಸುವುದು ತುಂಬಾ ಲಾಭಕಾರಿ ಎಂದು ಭಾವಿಸಲಾಗುತ್ತದೆ. ಈ ತಿಂಗಳಿನಲ್ಲಿ ಸಂಪೂರ್ಣ ಭಕ್ತಿ ಭಾವದಿಂದ ಶಿವ-ಪಾರ್ವತಿಯರಿಗೆ ಪೂಜೆ ಸಲ್ಲಿಸಿದರೆ, ಇಷ್ಟಾರ್ಥ ಪ್ರಾಪ್ತಿಯಾಗುತ್ತದೆ.

ಮೊದಲ ದಿನ ಈ ರೀತಿ ಪೂಜೆ ಸಲ್ಲಿಸಿ (How To Worship Lord Shiv)
- ಈ ಬಾರಿ ಸೋಮವಾರದ ದಿನ ಶ್ರಾವಣ ಮಾಸ ಆರಂಭವಾಗುತ್ತಿದೆ. ಇಂದು ಎಲ್ಲಕ್ಕಿಂತ ಮೊದಲು ಸ್ನಾನ ಮಾಡಿ ಶಿವ-ಪಾರ್ವತಿಗೆ ಜಲಾಭಿಷೇಕ ಮಾಡಿ.
- ಅರಿಶಿನ-ಕುಂಕುಮ ಚಂದನ ಹಚ್ಚಿ
- ಇದಾದ ಬಳಿಕ ಮನೆಯಲ್ಲಿಯೇ ಸ್ಥಾಪಿಸಲಾಗಿರುವ ಅಥವಾ ದೇವಸ್ಥಾನಕ್ಕೆ ಹೋಗಿ ಶಿವಲಿಂಗಕ್ಕೆ ಹಾಲು, ಪುಷ್ಪ, ಧತ್ತೂರಿ ಇತ್ಯಾದಿಗಳನ್ನು ಅರ್ಪೀಸಿ.
- ಬಳಿಕ ಮಂತ್ರೋಚ್ಛಾರಣೆಯ ಮೂಲಕ ದೇವಾದಿದೇವನಿಗೆ ಅಡಿಕೆ, ಪಂಚ ಅಮೃತ, ತೆಂಗಿನ ಕಾಯಿ ಹಾಗೂ ಬೆಲ್ ಪತ್ರಿಯನ್ನು ಅರ್ಪಿಸಿ.
- ಇದರ ಜೊತೆಗೆ ದೇವಿ ಪಾರ್ವತಿಯನ್ನು ಅಲಂಕರಿಸಿ.
- ನಂತರ ಧೂಪ, ದೀಪ ಹಾಗೂ ಅಗರಬತ್ತಿ ಬೆಳಗಿ ಅರ್ಚನೆ ಮಾಡಿ.
- ನಂತರ ಕೆಲ ಕಾಲ 21, 101, 108 ಬಾರಿ ॐ ನಮಃ ಶಿವಾಯ ಮಂತ್ರವನ್ನು ಉಚ್ಛರಿಸಿ. 
- ಪೂಜೆಯ ಕೊನೆಯಲ್ಲಿ ಶಿವ ಚಾಲಿಸಾ ಹೇಳಿ ಶಿವನಿಗೆ ಆರತಿ ಬೆಳಗಿ.
- ದಿನದಲ್ಲಿ ಒಟ್ಟು ಎರಡು ಬಾರಿ (ಬೆಳಗ್ಗೆ ಮತ್ತು ಸಾಯಂಕಾಲ ) ಶಿವನಿಗೆ ಪೂಜೆ ಸಲ್ಲಿಸಿ.
- ಸಾಯಂಕಾಲದ ಪೂಜೆ ಕೂಡ ತುಂಬಾ ಮಹತ್ವದ್ದಾಗಿದೆ.

ಇದನ್ನೂ ಓದಿ-ಮಕ್ಕಳ ಸಂತೋಷ ಅಭಿವೃದ್ಧಿಗೆ ಶ್ರಾವಣದಲ್ಲಿ ಈ ಕೆಲಸ ಮಾಡಿ

ಈ ಪುಷ್ಪಗಳಿಂದ ಶಿವ ಪ್ರಸನ್ನನಾಗುತ್ತಾನೆ
ಪೂಜೆ ಸಲ್ಲಿಸುವಾಗ ದೇವಾಧಿ ದೇವನನ್ನು ಒಲಿಸಿಕೊಳ್ಳಲು ಕೆಲ ವಿಶೇಷ ಪ್ರಕಾರದ ಪುಷ್ಪಗಳನ್ನು ಶಿವನಿಗೆ ಅರ್ಪಿಸಿ. ಈ ಪುಷ್ಪಗಳನ್ನೂ ಅರ್ಪಿಸುವುದರಿಂದ ಶಿವ ಬೇಗನೆ ಪ್ರಸನ್ನನಾಗಿ ನಿಮ್ಮ ಇಷ್ಟಾರ್ಥಗಳನ್ನು ಬೇಗನೆ ಪೂರ್ಣಗೊಳಿಸುತ್ತಾನೆ.

ಧತ್ತೂರಿ ಹೂವು, ಕನೇರಿ ಹೂವು, ಕುಶ ಪುಷ್ಪ, ಚೆಂಡು ಹೂವು, ಗುಲಾಬಿ ಹೂವು, ನಾಗಕೇಷರ ಬಿಳಿ ಹೂವು, ಒಣಗಿದೆ ಕಮಲ ಗಟ್ಟೆ, ಶಂಖಪುಷ್ಪಿ ಹೂವು, ಬೆಲ್ ಪತ್ರಿ ಗಿಡದ ಹೂವು, 

ಇದನ್ನೂ ಓದಿ-Shravan Somvar 2021: ಶ್ರಾವಣ ಸೋಮವಾರದ ವೃತದ ವೇಳೆ ಈ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಿ

- ಶಿವನ ಪೂಜೆಯ ವೇಳೆ ಶಂಖ ನಾದ ಮಾಡಬೇಡಿ.
- ಶಿವಲಿಂಗದ ಜಲಧಾರೆಯನ್ನು ದಾಟಬೇಡಿ.
- ಶಿವನ ಸಂಪೂರ್ಣ ಪ್ರದಕ್ಷಣೆ ಬೇಡ.
- ಪೂಜೆಯ ವೇಳೆ ಕಪ್ಪು ಬಣ್ಣದ ವಸ್ತ್ರ ಧರಿಸಬೇಡಿ.

ಇದನ್ನೂ ಓದಿ-Monday Remedies: ಸೋಮವಾರದಂದು ಅಪ್ಪಿ-ತಪ್ಪಿಯೂ ಮಾಡದಿರಿ ಈ ಕೆಲಸ, ಇಲ್ಲವೇ ಪಶ್ಚಾತ್ತಾಪ ಪಡಬೇಕಾಗಬಹುದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News