Good News: ವಾಹನ ಸವಾರರಿಗೆ ಇಲ್ಲಿದೆ ಒಂದು ಸಂತಸದ ಸುದ್ದಿ... ಶೀಘ್ರದಲ್ಲಿಯೇ ಪೆಟ್ರೋಲ್ ಡಿಸೇಲ್ ಬೆಲೆ...!

Crude Oil Price Today: ಕಚ್ಚಾ ತೈಲೋತ್ಪಾದನೆಯಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಹೆಚ್ಚಾಗುತ್ತಿರುವ ಕರೋನವೈರಸ್ನ ಡೆಲ್ಟಾ ರೂಪಾಂತರಿಯ ಅಪಾಯ ಹಾಗೂ ಬೇಡಿಕೆಯ ಕೊರತೆಯ ಕಾರಣ ಕಚ್ಚಾ ತೈಲ ಬೆಲೆಯಲ್ಲಿ ನಿರಂತರ ಇಳಿಕೆ ಕಂಡುಬರುತ್ತಿತ್ತು.

Written by - Nitin Tabib | Last Updated : Aug 9, 2021, 06:27 PM IST
  • ಕಚ್ಚಾ ತೈಲೋತ್ಪಾದನೆಯಲ್ಲಿ ಭಾರಿ ಏರಿಕೆ.
  • ಪ್ರತಿ ಬ್ಯಾರೆಲ್ ಗೆ $65 ಕ್ಕಿಂತ ಕೆಳಕ್ಕೆ ಜಾರಿದ ಕಚ್ಚಾ ತೈಲ ಬೆಲೆ.
  • ದೇಸೀಯ ಮಾರುಕಟ್ಟೆಯಲ್ಲಿಯೂ ಕೂಡ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಭಾರಿ ಇಳಿಕೆಯ ಸಂಕೇತ.
Good News: ವಾಹನ ಸವಾರರಿಗೆ ಇಲ್ಲಿದೆ ಒಂದು ಸಂತಸದ ಸುದ್ದಿ... ಶೀಘ್ರದಲ್ಲಿಯೇ ಪೆಟ್ರೋಲ್ ಡಿಸೇಲ್ ಬೆಲೆ...! title=
Crude Oil Price Today (File Photo)

Crude Oil Price Today: ಅಮೆರಿಕದಿಂದ ಭಾರತಕ್ಕೆ ಒಳ್ಳೆಯ ಸುದ್ದಿಯೊಂದು ಪ್ರಕಟವಾಗಿದೆ. ಇದೀಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಶೀಘ್ರದಲ್ಲೇ ಇಳಿಕೆಯಾಗಬಹುದು ಎನ್ನಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಪೆಟ್ರೋಲ್ ಬೆಲೆ ಮತ್ತೊಮ್ಮೆ 100 ರೂ.ಗಿಂತ ಕೆಳಗೆ ಜಾರಲಿದೆ ಎನ್ನಲಾಗುತ್ತಿದೆ. ಏಕೆಂದರೆ ಕಚ್ಚಾ ಬೆಲೆಯಲ್ಲಿ ದೊಡ್ಡ ಕುಸಿತ ಕಂಡುಬಂದಿದೆ. ಕಚ್ಚಾ ತೈಲದ ಇಳಿಕೆಯ ಲಾಭವನ್ನು ತೈಲ ಕಂಪನಿಗಳು ಸಾಮಾನ್ಯ ಗ್ರಾಹಕರಿಗೆ ವರ್ಗಾಯಿಸುತ್ತವೆ. ಸೋಮವಾರದ ವಹಿವಾಟಿನಲ್ಲಿ ಕಚ್ಚಾ ತೈಲ ಬೆಲೆ ಇಂದು ಶೇ.4 ರಷ್ಟು ಕುಸಿದಿದೆ. ಕಚ್ಚಾ ತೈಲ ಬೆಲೆಯಲ್ಲಿನ ಈ ದೊಡ್ಡ ಕುಸಿತವು ಮುಂಬರುವ ದಿನಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಕಡಿಮೆಯಾಗುವ ಸ್ಪಷ್ಟ ಸೂಚನೆಯನ್ನು ನೀಡುತ್ತಿದೆ. 

ಕಚ್ಚಾ ತೈಲ ಬೆಲೆಯಲ್ಲಿ ಎಲ್ಲಿ ಎಷ್ಟು ಕುಸಿತ?
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಇಳಿಕೆ ಮುಂದುವರಿದಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ $ 68 ಕ್ಕಿಂತ ಕೆಳಕ್ಕೆ ಜಾರಿಗೆ . ಇದೆ ವೇಳೆ, WTI ಕಚ್ಚಾ ಬೆಲೆ $ 65 ಕ್ಕಿಂತ ಕೆಳಗೆ ತಲುಪಿದೆ.  ಡೆಲ್ಟಾ ರೂಪಾಂತರಿಯ ಕಾರಣ ಡಿಮ್ಯಾಂಡ್ ಕುರಿತು ಚಿಂತೆ ವ್ಯಕ್ತಪಡಿಸಲಾಗುತ್ತಿದೆ, ಈ ಕಾರಣದಿಂದಾಗಿ ಕಚ್ಚಾ ತೈಲ ದುರ್ಬಲವಾಗಿ ಉಳಿದಿದೆ. 1 ವಾರದಲ್ಲಿ ಕಚ್ಚಾ ತೈಲ ಬೆಲೆ ಶೇ 9 ರಷ್ಟು ಕಡಿಮೆಯಾಗಿದೆ. 9 ತಿಂಗಳಲ್ಲಿ ಅತಿದೊಡ್ಡ ಸಾಪ್ತಾಹಿಕ ಕುಸಿತ ಇದಾಗಿದೆ.  MCX ಕಚ್ಚಾ ತೈಲ (Crude Oil) ಬೆಲೆಯ ಕುರಿತು ಹೇಳುವುದಾದರೆ, ಅಲ್ಲಿಯೂ ಕೂಡ ಬೆಲೆಯಲ್ಲಿ ದುರ್ಬಲತೆ ಇದೆ.  MCX Crude Oil ರೂ 4,900 ಕ್ಕಿಂತ ಕೆಳಕ್ಕೆ ಜಾರಿಗೆ. ಸೋಮವಾರ ಕಚ್ಚಾ ತೈಲ ಬೆಲೆ ಶೇ.4 ಕ್ಕಿಂತ ಹೆಚ್ಚು ಕುಸಿತ ಕಂಡಿದೆ.

ಇದನ್ನೂ ಓದಿ-Assam Land Dispute: ಈ ರಾಜ್ಯಗಳಲ್ಲಿ ತಲೆದೋರಿತು ತೈಲ ಸಮಸ್ಯೆ : ಬೈಕ್ ಗೆ ಸಿಗಲಿದೆ ಕೇವಲ 5 ಲೀ. ಪೆಟ್ರೋಲ್

ಅಗ್ಗವಾಗಲಿದೆಯೇ ಪೆಟ್ರೋಲ್-ಡಿಸೇಲ್ ?
ಪ್ರಸ್ತುತ ದೇಶಾದ್ಯಂತ ಬಹುತೇಕ ನಗರಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ ರೂ. 100ರ ಗಡಿ ದಾಟಿದೆ. ಚೀನಾದ ಕಳಪೆ ಆರ್ಥಿಕ ಬೆಳವಣಿಗೆಯ ದರ, ಕೊರೊನಾ ವೈರಸ್ ನ ಹೆಚ್ಚಾಗುತ್ತಿರುವ ಪ್ರಕರಣಗಳು ಹಾಗೂ OPEC+ ನ ಉತ್ಪಾದನೆಯಲ್ಲಿನ ಹೆಚ್ಚಳದ ಆತಂಕದ ಹಿನ್ನೆಲೆ ಕಚ್ಚಾ ತೈಲ ಬೆಲೆಯಲ್ಲಿ ಪ್ರಸ್ತುತ ಇಳಿಕೆಯನ್ನು (Crude Oil Price) ಗಮನಿಸಲಾಗುತ್ತಿದೆ. ಇದರ ನೇರ ಲಾಭ ದೇಸಿಯ ಮಾರುಕಟ್ಟೆಯಲ್ಲಿ ನೋಡಬಹುದಾಗಿದೆ. ಒಂದು ಅಂದಾಜಿನ ಪ್ರಕಾರ ಮುಂಬರುವ ದಿನಗಳಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯಲ್ಲಿ (Petrol-Diesel Price) ಏಕಕಾಲಕ್ಕೆ ರೂ 5 ಇಳಿಕೆಯಾಗುವ ಸಾಧ್ಯತೆ ಇದೆ. 

ಇದನ್ನೂ ಓದಿ-'ಪೆಟ್ರೋಲನ್ನು ಜಿಎಸ್ಟಿ ಗೆ ಸೇರಿಸುವ ರಾಷ್ಟ್ರೀಯ ಪಕ್ಷಗಳ ಹುನ್ನಾರವನ್ನು ವಿರೋಧಿಸುತ್ತೇವೆ'

ಈ ಕುರಿತು ಮಾತನಾಡಿರುವ IIFL ಸಿಕ್ಯೋರೀಟೀಸ್ ನ ವೈಸ್ ಪ್ರೆಸಿಡೆಂಟ್ (ಕಮಾಡಿಟಿ ಅಂಡ್ ರಿಸರ್ಚ್) ಅನುಜ್ ಗುಪ್ತಾ, ಕಚ್ಚಾತೈಲದ ಉತ್ಪಾದನೆಯಲ್ಲಾಗಿರುವ (Crude Oil Production) ಹೆಚ್ಚಳದಿಂದ ಮುಂಬರುವ ದಿನಗಳಲ್ಲಿ ಕಚ್ಚಾ ತೈಲ ಬೆಲೆ $65 ಪ್ರತಿ ಬ್ಯಾರೆಲ್ ಇಳಿಕೆಯಾಗುವ ಸಾಧ್ಯತೆ ಇದೆ. ಒಂದು ವೇಳೆ ಎಲ್ಲವು ಅಂದುಕೊಂಡಂತೆ ನಡೆದರೆ ದೇಸೀಯ ಮಾರುಕತೆಯಲ್ಲಿ ಪೆಟ್ರೋಲ್-ಡಿಸೇಲ್ ಬೆಳೆಗಳಲ್ಲಿ ಇಳಿಕೆಯನ್ನು ಗಮನಿಸಲು ಸಿಗಲಿದೆ. ಕಚ್ಚಾ ತೈಲ (Brent Crude Oil) ಬೆಲೆ ಒಂದು ವೇಳೆ $65 ಪ್ರತಿ ಬ್ಯಾರೆಲ್ ಕೆಳಕ್ಕೆ ಜಾರಿದರೆ, ಪೆಟ್ರೋಲ್ ಡಿಸೇಲ್ ಬೆಲೆಯಲ್ಲಿ ಏಕಕಾಲಕ್ಕೆ ರೂ.4 ರಿಂದ ರೂ.5ರವರೆಗೆ ಇಳಿಕೆಯಾಗಬಹುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-ವಾಹನ ಸವಾರರಿಗೆ ಬಿಗ್ ಶಾಕ್ : ಭಾರೀ ಏರಿಕೆ ಕಂಡ ಪೆಟ್ರೋಲ್-ಡೀಸೆಲ್ ಬೆಲೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News