Vodafone Ideaದ ಈ ಪ್ಲಾನ್ ನಲ್ಲಿ ಕುಟುಂಬದ ಎಲ್ಲಾ ಸದಸ್ಯರಿಗೂ ಸಿಗಲಿದೆ unlimited internet

ವರ್ಕ್ ಫ್ರಮ್ ಹೋಂ, ಆನ್‌ಲೈನ್ ಕ್ಲಾಸ್, ಮನರಂಜನೆ ಮತ್ತು ಸಾಮಾಜಿಕೀಕರಣದಿಂದಾಗಿ ಜನರು ಹೆಚ್ಚಿನ ಡೇಟಾವನ್ನು ಬಳಸುತ್ತಿದ್ದಾರೆ. ಈ ಪ್ಲಾನ್ ಅನ್ನು ಅಂಥಹ ಜನರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. 

Written by - Ranjitha R K | Last Updated : Aug 10, 2021, 03:35 PM IST
  • ವೊಡಾಫೋನ್ ಐಡಿಯಾ 'ರೆಡ್‌ಎಕ್ಸ್' ಫ್ಯಾಮಿಲಿ ಪ್ಲಾನ್ ಆರಂಭಿಸಿದೆ.
  • 'RedX' planನಲ್ಲಿ 3-5 ಸದಸ್ಯರನ್ನು ಒಳಗೊಂಡಿರಬಹುದು.
  • ಈ ಪ್ಲಾನ್ ಬೆಲೆ ರೂ 1,699 ಮತ್ತು 2,299 ರೂ. ಆಗಿದೆ.
Vodafone Ideaದ ಈ ಪ್ಲಾನ್ ನಲ್ಲಿ ಕುಟುಂಬದ ಎಲ್ಲಾ ಸದಸ್ಯರಿಗೂ ಸಿಗಲಿದೆ unlimited internet  title=
'RedX' planನಲ್ಲಿ  3-5 ಸದಸ್ಯರನ್ನು ಒಳಗೊಂಡಿರಬಹುದು. (photo zee news)

ನವದೆಹಲಿ :  ವೊಡಾಫೋನ್ ಐಡಿಯಾ (Vi) ಮಂಗಳವಾರ ಎರಡು ಹೊಸ ರೆಡ್‌ಎಕ್ಸ್ ( RedX) ಫ್ಯಾಮಿಲಿ ಪ್ಲಾನ್  ಬಿಡುಗಡೆ ಮಾಡಿದೆ.  ಇದರ ಬೆಲೆ ರೂ 1,699 ಮತ್ತು ರೂ 2,299. ಇದು ಗ್ರಾಹಕರಿಗೆ ಕ್ರಮವಾಗಿ 3 ಮತ್ತು 5 ಕುಟುಂಬ ಸದಸ್ಯರನ್ನು ಸೇರಿಸಲು ಅವಕಾಶ ನೀಡುತ್ತದೆ. ವೊಡಾಫೋನ್ ಐಡಿಯಾದ (Vodafone Idea) ಮಲ್ಟಿ ಮೆಂಬರ್ ಆರ್‌ಇಡಿಎಕ್ಸ್ ಪ್ಲಾನ್‌ನ ವಿಶಿಷ್ಟವಾದ ವಿಷಯವೆಂದರೆ ಲಾಕ್-ಇನ್ ಅವಧಿ. ಅಂದರೆ ಗ್ರಾಹಕರು ಈ ಯೋಜನೆಗಳಿಗೆ ಕನಿಷ್ಠ 6 ತಿಂಗಳ ಅವಧಿಗೆ ಚಂದಾದಾರರಾಗಬೇಕು. ಅರ್ಧಕ್ಕೆ ಈ ಪ್ಲಾನ್ ನಿಂದ ಎಕ್ಸಿಟ್ ಆಗುವುದಾದರೆ,   3,000 ರೂ. ನಿರ್ಗಮನ ಶುಲ್ಕಪಾವತಿಸಬೇಕಾಗುತ್ತದೆ. 

ಕಂಪನಿ ಹೇಳಿಕೆ ಏನು ?
ವರ್ಕ್ ಫ್ರಮ್ ಹೋಂ (work from home),  ಆನ್‌ಲೈನ್ ಕ್ಲಾಸ್, ಮನರಂಜನೆ ಮತ್ತು ಸಾಮಾಜಿಕೀಕರಣದಿಂದಾಗಿ ಜನರು ಹೆಚ್ಚಿನ ಡೇಟಾವನ್ನು ಬಳಸುತ್ತಿದ್ದಾರೆ. ಈ ಪ್ಲಾನ್ ಅನ್ನು ಅಂಥಹ ಜನರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ಪ್ಲಾನ್ ಪ್ರಕಾರ  ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಅನ್ಲಿಮಿಟೆಡ್ ಡೇಟಾವನ್ನು (Unlimited data) ನೀಡಲಾಗುತ್ತದೆ. ಆದರೆ ಬಿಲ್ ಒಂದೇ ಆಗಿರುತ್ತದೆ. 

ಇದನ್ನೂ ಓದಿ :  Motorola Edge 20: ಆ. 17ರಂದು ಭಾರತದಲ್ಲಿ ಲಾಂಚ್ ಆಗಲಿದೆ ಅತ್ಯಂತ ತೆಳ್ಳನೆಯ 5G ಸ್ಮಾರ್ಟ್ಫೋನ್

ಈ ಪ್ರಯೋಜನಗಳು ಸಿಗಲಿದೆ : 
ಹೊಸ ರೆಡ್‌ಎಕ್ಸ್ ಕುಟುಂಬ ಯೋಜನೆಯೊಂದಿಗೆ, ಪ್ರೈಮರಿ ಮೆಂಬರ್ ನೆಟ್‌ಫ್ಲಿಕ್ಸ್ (ಒಂದು ವರ್ಷದ ಚಂದಾದಾರಿಕೆಯೊಂದಿಗೆ), 1 ವರ್ಷಕ್ಕೆ ಅಮೆಜಾನ್ ಪ್ರೈಮ್ (Amazon prime), 1 ವರ್ಷಕ್ಕೆ ಡಿಸ್ನಿ+ ಹಾಟ್‌ಸ್ಟಾರ್ ವಿಐಪಿ ಸದಸ್ಯತ್ವ, ವಿಐ ಮೂವಿಸ್ ಮತ್ತು ಒಟಿಟಿ (OTT) ಪ್ಲಾಟ್‌ಫಾರ್ಮ್‌ಗಳ ಚಂದಾದಾರಿಕೆಯ ಪ್ರಯೋಜನವನ್ನು  ಪಡೆಯಬಹುದು. ಇದರೊಂದಿಗೆ, Zee5 ಪ್ರೀಮಿಯಂಗೆ ಆಕ್ಸೆಸ್ ಕೂಡಾ ಸಿಗುತ್ತದೆ. 

ಅನ್ಲಿಮಿಟೆಡ್ ಕಾಲಿಂಗ್ ಸಿಗಲಿದೆ :
ಪ್ರತಿ ಸಂಪರ್ಕದ ಮೇಲೆ ಅನಿಯಮಿತ 4 ಜಿ ಡೇಟಾದೊಂದಿಗೆ, ಹೊಸ ರೆಡ್‌ಎಕ್ಸ್ ಕುಟುಂಬ ಯೋಜನೆಗಳು, ಭಾರತದಾದ್ಯಂತ ಪ್ರೈಮರಿ ಮತ್ತು ಸೆಕೆಂಡರಿ ಸಂಖ್ಯೆಗಳಿಗೆ ಅನ್ಲಿಮಿಟೆಡ್ ವಾಯ್ಸ್ ಕಾಲಿಂಗ್ ಅವಕಾಶ ಸಿಗುತ್ತದೆ. 

ಇದನ್ನೂ ಓದಿ : ಎರಡು ದಿನಗಳವರೆಗೆ ಬರುತ್ತದೆ ಈ ಫೋನಿನ್ ಚಾರ್ಜ್, 3D ಬ್ಯೂಟಿ ಮೋಡ್ ನಲ್ಲಿ ಫೋಟೋ ತೆಗೆಯಬಹುದು Infinix ಬಿಡುಗಡೆ ಮಾಡಿದೆ ಹೊಸ Smartphone,

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
 

Trending News