ನವದೆಹಲಿ : 75 ನೇ ಸ್ವಾತಂತ್ರ್ಯ ದಿನಾಚರಣೆಯಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಹೊಸ ಪ್ಲಾಟಿನಂ ಠೇವಣಿ ಯೋಜನೆಯನ್ನು ಘೋಷಿಸಿದೆ, ಈ ಯೋಜನೆಯನ್ನು ಯಾವುದೇ SBI ಶಾಖೆ ಅಥವಾ SBI YONO ಆಪ್ ಮೂಲಕ ಗ್ರಾಹಕರು ಪಡೆಯಬಹುದು.
ಈ ಕುರಿತು ಎಸ್ಬಿಐ ತನ್ನ ಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದು, "75 ನೇ ಸ್ವಾತಂತ್ರ್ಯ ದಿನವನ್ನು ಪ್ಲಾಟಿನಂ ಠೇವಣಿ(SBI platinum Deposit Scheme)ಗಳೊಂದಿಗೆ ಆಚರಿಸಲು ಇದು ಸಕಾಲವಾಗಿದೆ. ಎಸ್ಬಿಐನೊಂದಿಗೆ ಅವಧಿ ಠೇವಣಿಗಳು ಮತ್ತು ವಿಶೇಷ ಅವಧಿ ಠೇವಣಿಗಳಿಗೆ ವಿಶೇಷ ಪ್ರಯೋಜನಗಳು. 14 ನೇ ಸೆಪ್ಟೆಂಬರ್ 2021 ರವರೆಗೆ ಆಫರ್ ಮಾನ್ಯವಾಗಿದೆ" ಎಂದು ಮಾಹಿತಿ ನೀಡಿದೆ.
ಇದನ್ನೂ ಓದಿ : Today Gold-Silver Price : ಆಭರಣ ಪ್ರಿಯರಿಗೆ ಸಿಹಿ ಸುದ್ದಿ : ಚಿನ್ನದ ಬೆಲೆಯಲ್ಲಿ 180 ರೂ. ಇಳಿಕೆ
ಹೊಸ ಎಸ್ಬಿಐ(State Bank of India) ಪ್ಲಾಟಿನಂ ಠೇವಣಿ ಯೋಜನೆ ಆಗಸ್ಟ್ 15 ರಿಂದ 2021 ರಿಂದ ಸೆಪ್ಟೆಂಬರ್ 14, 2021 ರವರೆಗೆ ಲಭ್ಯವಿರುತ್ತದೆ ಮತ್ತು ಗ್ರಾಹಕರು ಹೆಚ್ಚಿನ ಸಂಖ್ಯೆಯ ಆಯ್ಕೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಗ್ರಾಹಕರು ಈ ಕೆಳಗಿನ ಅವಧಿಯ ಠೇವಣಿಗಳಿಂದ ಆಯ್ಕೆ ಮಾಡಬಹುದು:
- ಪ್ಲಾಟಿನಂ 75 ದಿನಗಳು- ಪ್ಲಾಟಿನಂ 525 ದಿನಗಳು- ಪ್ಲಾಟಿನಂ 2250 ದಿನಗಳು
- NRE ಮತ್ತು NRO ಅವಧಿ ಠೇವಣಿಗಳು (Rs 2 ಕೋಟಿ) ಒಳಗೊಂಡಂತೆ ದೇಶೀಯ ಚಿಲ್ಲರೆ ಅವಧಿ ಠೇವಣಿಗಳು (DRTD)- ಹೊಸ ಮತ್ತು ನವೀಕರಣ ಠೇವಣಿಗಳು- ಅವಧಿ ಠೇವಣಿ ಮತ್ತು ವಿಶೇಷ ಅವಧಿ ಠೇವಣಿಗಳು- NRE ಠೇವಣಿಗಳು 525 ದಿನಗಳು ಮತ್ತು 2250 ದಿನಗಳವರೆಗೆ ಮಾತ್ರ ಇರುತ್ತದೆ.
ಇದನ್ನೂ ಓದಿ : Petrol-Diesel price : ವಾಹನ ಸವಾರರೆ ಗಮನಿಸಿ : ಇಲ್ಲಿದೆ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ; ನಿಮ್ಮ ನಗರದಲ್ಲಿ ಬೆಲೆ ಎಷ್ಟಿದೆ ನೋಡಿ
ಈ ಠೇವಣಿಗಳ ಬಡ್ಡಿ ದರ
- ಅವಧಿ ಠೇವಣಿಗಳು - ಮಾಸಿಕ ಅಥವಾ ತ್ರೈಮಾಸಿಕ ಠೇವಣಿಗಳಲ್ಲಿ ಮಾತ್ರ ಪಡೆಯಬಹುದು
2 ಕೋಟಿಗಿಂತ ಕಡಿಮೆ ಇರುವ ಡಿಆರ್ಟಿಡಿಗೆ ಬಡ್ಡಿ ದರ ಮತ್ತು ಎನ್ಆರ್ಇ(NRE) ಮತ್ತು ಎನ್ಆರ್ಒ ಟರ್ಮ್ ಠೇವಣಿಗಳು ಬದಲಾಗುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ