Benefits of Curd for Face: ಮೊಸರನ್ನು ಹೊಟ್ಟೆಗೆ ಮಾತ್ರವಲ್ಲ ಚರ್ಮಕ್ಕೂ ಕೂಡ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ಮುಖವನ್ನು ಸುಂದರಗೊಳಿಸಲು ಮತ್ತು ಚರ್ಮದ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಕೇವಲ 2 ಚಮಚ ಮೊಸರನ್ನು ಮುಖಕ್ಕೆ ಹಚ್ಚುವುದರಿಂದ, ನೀವು ಅನೇಕ ಸೌಂದರ್ಯ ಪ್ರಯೋಜನಗಳನ್ನು ಪಡೆಯುತ್ತೀರಿ. ಅನೇಕ ಮಾಧ್ಯಮ ವರದಿಗಳ ಪ್ರಕಾರ, ಖ್ಯಾತ ನಟಿಯರಾದ ಐಶ್ವರ್ಯ ರೈ ಬಚ್ಚನ್, ಆಲಿಯಾ ಭಟ್ ಕೂಡ ತಮ್ಮ ತ್ವಚೆಯ ಆರೈಕೆಯ ದಿನಚರಿಯಲ್ಲಿ ಮೊಸರನ್ನು ಬಳಸುತ್ತಾರೆ ಎಂದು ತಿಳಿದುಬಂದಿದೆ.
ಮುಖಕ್ಕೆ ಮೊಸರನ್ನು ಹೇಗೆ ಬಳಸುವುದು ಮತ್ತು ಅದರ ಪ್ರಯೋಜನಗಳೇನು ಎಂದು ತಿಳಿಯೋಣ...
ಮೊಸರನ್ನು ಮುಖಕ್ಕೆ ಹಚ್ಚುವುದರಿಂದ ಆಗುವ ಲಾಭಗಳು (Curd Benefits on Face) :
ಮೇಯೊ ಕ್ಲಿನಿಕ್ ಪ್ರಕಾರ, ಮೊಸರು ಲ್ಯಾಕ್ಟಿಕ್ ಆಮ್ಲವನ್ನು ಹೊಂದಿರುತ್ತದೆ, ಇದು ಒಂದು ರೀತಿಯ AHA (ಆಲ್ಫಾ ಹೈಡ್ರಾಕ್ಸಿ ಆಸಿಡ್). ಇದು ವಿವಿಧ ಮೊಡವೆ ಉತ್ಪನ್ನಗಳಲ್ಲಿ ಕಂಡುಬರುತ್ತದೆ. ಲ್ಯಾಕ್ಟಿಕ್ ಆಮ್ಲ ಮತ್ತು ಇತರ AHA ಗಳು ಚರ್ಮವನ್ನು ಸ್ವಚ್ಛಗೊಳಿಸಲು, ಉರಿಯೂತದ ವಿರುದ್ಧ ಹೋರಾಡಲು ಮತ್ತು ಹೊಸ ಕೋಶಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಇದರ ಹೊರತಾಗಿ, ಮುಖಕ್ಕೆ ಮೊಸರಿನ ಬಳಕೆಯಿಂದ ಈ ಕೆಳಗಿನ ಪ್ರಯೋಜನಗಳು (Curd Benefits for face) ಲಭ್ಯವಿದೆ.
ಇದನ್ನೂ ಓದಿ- Vegetables For Eyes: ದುರ್ಬಲ ಕಣ್ಣುಗಳನ್ನು ಬಲಪಡಿಸಲು ನಿಮ್ಮ ಆಹಾರದಲ್ಲಿರಲಿ ಈ ತರಕಾರಿಗಳು
>> ಮೊಡವೆಗಳನ್ನು ತಡೆಯುತ್ತದೆ ಮತ್ತು ಅದರ ಗುರುತುಗಳು ಮಾಯವಾಗುತ್ತವೆ.
>> ಮುಖದ ಮೇಲಿನ ದೊಡ್ಡ ರಂಧ್ರಗಳನ್ನು ಕಡಿಮೆ ಮಾಡುತ್ತದೆ.
>> ಸೂರ್ಯನ ಹಾನಿಯಿಂದ ರಕ್ಷಿಸುತ್ತದೆ.
>> ಸುಕ್ಕುಗಳನ್ನು ನಿವಾರಿಸುತ್ತದೆ.
>> ಚರ್ಮವನ್ನು ತೇವಗೊಳಿಸುತ್ತದೆ.
>> ಕಪ್ಪು ವರ್ತುಲಗಳನ್ನು ಅಂದರೆ ಡಾರ್ಕ್ ಸರ್ಕಲ್ಸ್ ಗಳನ್ನು ಕಡಿಮೆ ಮಾಡುತ್ತದೆ.
>> ಚರ್ಮದ ಟೋನ್ ಸರಿಪಡಿಸುತ್ತದೆ. ಇತ್ಯಾದಿ
ಮೊಸರನ್ನು ಮುಖಕ್ಕೆ ಹಚ್ಚುವುದು ಹೇಗೆ? (How to use curd on face)
ಮೊಡವೆ, ಸುಕ್ಕುಗಳು ಮತ್ತು ವಯಸ್ಸಾಗುವಿಕೆಯ ಲಕ್ಷಣಗಳನ್ನು ತಡೆಗಟ್ಟಲು ನೀವು 2 ಟೀ ಚಮಚ ಮೊಸರನ್ನು ನೇರವಾಗಿ ನಿಮ್ಮ ಮುಖಕ್ಕೆ ಹಚ್ಚಬಹುದು. ಇದನ್ನು 10 ನಿಮಿಷಗಳ ಮುಖದ ಮೇಲೆ ಹಾಗೆ ಬಿಟ್ಟು ನಂತರ ಶುದ್ಧ ನೀರಿನಿಂದ ತೊಳೆಯಿರಿ. ಆದರೆ, ಮೊಸರನ್ನು ವಿವಿಧ ಫೇಸ್ ಪ್ಯಾಕ್ಗಳೊಂದಿಗೆ (Different Curd Face Pack) ಕೂಡ ಅನ್ವಯಿಸಬಹುದು.
ಇದನ್ನೂ ಓದಿ- Diabetes: ಈ ಹಣ್ಣುಗಳಿಂದ ಮಧುಮೇಹ ನಿಯಂತ್ರಿಸಬಹುದು, ಇಲ್ಲಿದೆ ಅದನ್ನು ತಿನ್ನಲು ಸರಿಯಾದ ಮಾರ್ಗ
* ಎಲ್ಲಾ ಚರ್ಮದ ಪ್ರಕಾರಗಳಿಗೆ ಮೊಸರು ಮತ್ತು ಸೌತೆಕಾಯಿ ಫೇಸ್ ಪ್ಯಾಕ್ (ವಾರಕ್ಕೊಮ್ಮೆ)
* ಎಲ್ಲಾ ಚರ್ಮದ ಪ್ರಕಾರಗಳಿಗೆ ಮೊಸರು ಮತ್ತು ಅರಿಶಿನ ಫೇಸ್ ಪ್ಯಾಕ್ (ವಾರಕ್ಕೊಮ್ಮೆ)
* ಸಾಮಾನ್ಯ ಅಥವಾ ಒಣ ಚರ್ಮಕ್ಕಾಗಿ ಮೊಸರು ಮತ್ತು ಜೇನುತುಪ್ಪದ ಫೇಸ್ ಪ್ಯಾಕ್ (ವಾರಕ್ಕೊಮ್ಮೆ)
* ಸಾಮಾನ್ಯ ಅಥವಾ ಎಣ್ಣೆಯುಕ್ತ ಚರ್ಮಕ್ಕಾಗಿ ಮೊಸರು ಮತ್ತು ಕಡಲೆ ಹಿಟ್ಟಿನ ಫೇಸ್ ಪ್ಯಾಕ್ (ವಾರಕ್ಕೊಮ್ಮೆ)
* ಸಾಮಾನ್ಯ ಅಥವಾ ಎಣ್ಣೆಯುಕ್ತ ಚರ್ಮಕ್ಕಾಗಿ ಮೊಸರು ಮತ್ತು ನಿಂಬೆ ರಸದೊಂದಿಗೆ ಫೇಸ್ ಪ್ಯಾಕ್ ಮಾಡಿ (ವಾರಕ್ಕೊಮ್ಮೆ)
* ಸಾಮಾನ್ಯ ಅಥವಾ ಎಣ್ಣೆಯುಕ್ತ ಚರ್ಮಕ್ಕಾಗಿ, ಮೊಸರು ಮತ್ತು ಕಿತ್ತಳೆ ಸಿಪ್ಪೆಯ ಪುಡಿಯನ್ನು (ವಾರಕ್ಕೊಮ್ಮೆ ಅಥವಾ ಎರಡು ಬಾರಿ) ಫೇಸ್ ಪ್ಯಾಕ್ ಮಾಡಿ, ಇತ್ಯಾದಿ.
ಗಮನಿಸಿ- ಚರ್ಮದ ಮೇಲೆ ಏನನ್ನಾದರೂ ಬಳಸುವ ಮೊದಲು, ಪ್ಯಾಚ್ ಪರೀಕ್ಷೆ ಮಾಡಿ.
ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯು ಯಾವುದೇ ಸಾಮಾನ್ಯ ಮಾಹಿತಿಯಾಗಿದ್ದು ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ಪುಷ್ಟೀಕರಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ