UMANG App: ಈ app ಒಂದಿದ್ದರೆ ಕುಳಿತಲ್ಲೇ ಪಡೆದುಕೊಳ್ಳಬಹುದು ಸರ್ಕಾರಿ ಯೋಜನೆಗಳ ಲಾಭ

UMANG App: ಇದು ತುಂಬಾ ಉಪಯುಕ್ತವಾದ ಸರ್ಕಾರಿ ಅಪ್ಲಿಕೇಶನ್ ಆಗಿದೆ.  ಮನೆಯಲ್ಲಿ ಕುಳಿತು ಅನೇಕ ಸರ್ಕಾರಿ ಸೇವೆಗಳಲಾಭ ಪಡೆಯಲು ಇದು ಸಹಾಯಕವಾಗಿದೆ.

Written by - Ranjitha R K | Last Updated : Aug 18, 2021, 07:46 PM IST
  • ಇದು ತುಂಬಾ ಉಪಯುಕ್ತವಾದ ಸರ್ಕಾರಿ ಅಪ್ಲಿಕೇಶನ್ ಆಗಿದೆ.
  • app ಡೌನ್ ಲೋಡ್ ಮಾಡುವುದು ಹೇಗೆ ತಿಳಿಯಿರಿ
  • ಈ app ಮೂಲಕ ಸರ್ಕಾರಿ ಯೋಜನೆಗಳಿಗೆ ಆಕ್ಸೆಸ್ ಸಿಗುತ್ತದೆ
UMANG App: ಈ app ಒಂದಿದ್ದರೆ ಕುಳಿತಲ್ಲೇ ಪಡೆದುಕೊಳ್ಳಬಹುದು ಸರ್ಕಾರಿ ಯೋಜನೆಗಳ ಲಾಭ  title=
ದು ತುಂಬಾ ಉಪಯುಕ್ತವಾದ ಸರ್ಕಾರಿ ಅಪ್ಲಿಕೇಶನ್ ಆಗಿದೆ. (file photo)

ನವದೆಹಲಿ  : UMANG App: ಇದು ತುಂಬಾ ಉಪಯುಕ್ತವಾದ ಸರ್ಕಾರಿ ಅಪ್ಲಿಕೇಶನ್ ಆಗಿದೆ.  ಮನೆಯಲ್ಲಿ ಕುಳಿತು ಅನೇಕ ಸರ್ಕಾರಿ ಸೇವೆಗಳಲಾಭ ಪಡೆಯಲು ಇದು ಸಹಾಯಕವಾಗಿದೆ. . UMANG ಸರ್ಕಾರಿ ಆಪ್ ಆಗಿದ್ದು, ಎಲ್ಲಾ ರೀತಿಯ ಸರ್ಕಾರಿ ಸೇವೆಗಳ ಸೌಲಭ್ಯವನ್ನು ನೀವು ಸುಲಭವಾಗಿ ಪಡೆಯಬಹುದು. ಈ app ಬಳಸುವುದರಿಂದ ಸರ್ಕಾರಿ ಕಚೇರಿಗಳಲ್ಲಿ ದೀರ್ಘ ಸರತಿ ಸಾಲಿನಲ್ಲಿ ನಿಲ್ಲವುದನ್ನು ಕೂಡಾ ತಪ್ಪಿಸಬಹುದು. 

ಈ ಸೌಲಭ್ಯಗಳು UMANG ಆಪ್‌ನಲ್ಲಿ ಲಭ್ಯವಿದೆ  :
1.UMANG ಆಪ್ ಮೂಲಕ ಜೀವನ್ ಪ್ರಮಾಣವನ್ನು ಬಳಸಿಕೊಂಡು ಬ್ಯಾಂಕ್‌ಗೆ ಭೇಟಿ ನೀಡದೆ ಜೀವನ್ ಪ್ರಮಾಣವನ್ನು ಜನರೇಟ್ ಮಾಡಿಕೊಳ್ಳಬಹುದು 
2. ನ್ಯಾಯಾಲಯಕ್ಕೆ ಹೋಗದೆ UMANG ಅಪ್ಲಿಕೇಶನ್‌ನಲ್ಲಿ ಇ-ಕೋರ್ಟ್ ಬಳಸಿ ನಿಮ್ಮ ಪ್ರಕರಣದ ಸ್ಟೇಟಸ್  ಪರಿಶೀಲಿಸಬಹುದು.
3.  ಈ ಆಪ್‌ನಲ್ಲಿರುವ ಭಾರತ್ ಬಿಲ್ ಪೇ (bharat bill pay) ಬಳಸಿ ವಿದ್ಯುತ್ ಬಿಲ್, ನೀರಿನ ಬಿಲ್ ಪಾವತಿಸಬಹುದು
4.  ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರೆ ಮನೆಯಲ್ಲಿಯೇ ಕುಳಿತು UMANG ಆಪ್ ಮೂಲಕ ಅಪಾಯಿಂಟ್‌ಮೆಂಟ್ ಲಭ್ಯತೆಯನ್ನು ಪರಿಶೀಲಿಸಬಹುದು.
5. ಡಿಜಿಲಾಕರ್ (digilocker) ಮೂಲಕ ನಿಮ್ಮ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಬಹುದು.
6.ಆಪ್‌ನಲ್ಲಿ ಎನ್‌ಡಿಎಲ್‌ಐ ಬಳಸುವ ಮೂಲಕ, ನೀವು ಉನ್ನತ ಗ್ರಂಥಾಲಯ ಮತ್ತು ಶೈಕ್ಷಣಿಕ ಸಂಪನ್ಮೂಲಗಳ ಲಾಭವನ್ನು ಪಡೆಯಬಹುದು. 
7.ನೀವು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು ಮತ್ತು ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ ಸೇವೆಯ ಮೂಲಕ ವಿದ್ಯಾರ್ಥಿವೇತನ ಅರ್ಜಿಯನ್ನು ಟ್ರ್ಯಾಕ್ ಮಾಡಬಹುದು.
8. UMANG ಆಪ್‌ನಲ್ಲಿ ನೀವು ಆಧಾರ್, LPG ಗ್ಯಾಸ್ ಕನೆಕ್ಷನ್ ಪೇಪರ್, PAN ಅನ್ನು ಸಾಫ್ಟ್ ಕಾಪಿಯಾಗಿ ಉಳಿಸಬಹುದು ಮತ್ತು ಅಗತ್ಯವಿದ್ದಾಗ ತೋರಿಸಬಹುದು. ಇದು ಸಂಪೂರ್ಣವಾಗಿ ಮಾನ್ಯವಾಗಿದೆ.

ಇದನ್ನೂ ಓದಿ :  Tata Tigor EV Launch:ದೇಶೀಯ ಮಾರುಕಟ್ಟೆಗೆ Tata Tigor EV ಬಿಡುಗಡೆ ಮಾಡಿದ ಟಾಟಾ ಮೋಟರ್ಸ್, 60 ನಿಮಿಷದಲ್ಲಿ ಫುಲ್ ಚಾರ್ಜ್

app ಡೌನ್ ಲೋಡ್ ಮಾಡುವುದು ಹೇಗೆ ? 
ನೀವು UMANG ಆಪ್ ಅನ್ನು ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು. ಯಾವುದೇ ಆಪ್ ಅನ್ನು  ಅಧಿಕೃತ ಚಾನಲ್‌ನಿಂದ ಮಾತ್ರ ಡೌನ್‌ಲೋಡ್ ಮಾಡಿದರೆ ಒಳ್ಳೆಯದು. ಅಥವಾ ನೀವು ಈ ಆಪ್ ಅನ್ನು http://umang.gov.in ಗೆ ಭೇಟಿ ನೀಡುವ ಮೂಲಕ ಅಥವಾ 9718397183 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕವೂ ಡೌನ್‌ಲೋಡ್ ಮಾಡಬಹುದು.

ಸರ್ಕಾರಿ ಯೋಜನೆಗಳಿಗೂ ಆಕ್ಸೆಸ್ ಸಿಗುತ್ತದೆ : 
ಈ ಆಪ್ ಮೂಲಕ, ನೀವು ಭಾರತ ಸರ್ಕಾರ, ಮತ್ತು ರಾಜ್ಯ ಸರ್ಕಾರಗಳ ದ ಎಲ್ಲಾ ಯೋಜನೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದು. ಅದಕ್ಕಾಗಿ ಅರ್ಜಿಯನ್ನೂ ಸಲ್ಲಿಸಬಹುದು. ಈ ಆಪ್ ಕೇಂದ್ರ ಸರ್ಕಾರದ 131 ಇಲಾಖೆಗಳನ್ನು ಮತ್ತು ರಾಜ್ಯ ಸರ್ಕಾರಗಳ 128 ಇಲಾಖೆಗಳನ್ನು ಹೊಂದಿದೆ.

ಇದನ್ನೂ ಓದಿ :  PM Kisan FPO Yojana: ರೈತರಿಗೆ ಸರ್ಕಾರ ನೀಡುತ್ತಿದೆ 15 ಲಕ್ಷ ರೂ. ಗಳ ನೆರವು , ಅರ್ಜಿ ಸಲ್ಲಿಸುವುದು ಹೇಗೆ ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
 

Trending News