Janmasthami 2021: ಶ್ರೀ ಕೃಷ್ಣ ಜನ್ಮಾಷ್ಟಮಿಯ ಸರಿಯಾದ ಪೂಜಾ ವಿಧಿ ಹಾಗೂ ಶುಭ ಮುಹೂರ್ತ

Shri Krishna Janmashtami 2021 - ಜೀವನದಲ್ಲಿ ಬರುವ ಪ್ರತಿಯೊಂದು ಸುಖ-ದುಃಖಗಳನ್ನು ಹೇಗೆ ನಿಭಾಯಿಸಬೇಕು ಎಂದು ವಿಶ್ವಕ್ಕೆ ಭಗವದ್ಗೀತೆಯ ಸಾರವನ್ನು ಹೇಳಿದ ಶ್ರೀಕೃಷ್ಣನ ಜನ್ಮಾಷ್ಟಮಿಯನ್ನು ಈ ಬಾರಿ ಆಗಸ್ಟ್ 30 ರಂದು ಆಚರಿಸಲಾಗುತ್ತಿದೆ. ಈ ದಿನ ಶ್ರೀಕೃಷ್ಣನಿಗೆ ಬೆಣ್ಣೆ ಮತ್ತು ಕಲ್ಲು ಸಕ್ಕರೆಯನ್ನು ಅರ್ಪಿಸಿ ತೊಟ್ಟಿಲಲ್ಲಿ ತೂಗಲಾಗುತ್ತದೆ.

Written by - Nitin Tabib | Last Updated : Aug 23, 2021, 09:54 AM IST
  • ಆಗಸ್ಟ್ 30ರಂದು ಈ ಬಾರಿ ಶ್ರೀಕೃಷ್ಣನ ಜನ್ಮಾಷ್ಟಮಿಯನ್ನು ಆಚರಿಸಲಾಗುವುದು.
  • ಕೃಷ್ಣಾಷ್ಟಮಿಯ ಮಧ್ಯ ರಾತ್ರಿ ಶ್ರೀ ಕೃಷ್ಣ ಜನಿಸಿದ್ದ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
  • ಈ ಬಾರಿ ಕೇವಲ 45 ನಿಮಿಷ ಪೂಜೆಯ ಮುಹೂರ್ತ ಇದೆ.
Janmasthami 2021: ಶ್ರೀ ಕೃಷ್ಣ ಜನ್ಮಾಷ್ಟಮಿಯ ಸರಿಯಾದ ಪೂಜಾ ವಿಧಿ ಹಾಗೂ ಶುಭ ಮುಹೂರ್ತ title=
Krishna Janmasthami 2021(File Photo)

Shri Krishna Janmasthami 2021 - ಸನಾತನ ಧರ್ಮದಲ್ಲಿ ಅನುಯಾಯಿಗಳಿಂದ ಆಚರಿಸಲಾಗುವ ಮಹತ್ವದ ಹಬ್ಬ ರಕ್ಷಾ ಬಂಧನದ ಬಳಿಕ ಇದೀಗ ಶ್ರೀ ಕೃಷ್ಣ (Lord Shri Krishna) ಜನ್ಮಾಷ್ಟಮಿ ಆಚರಣೆಗೆ ದಿನಗಣನೆ ಆರಂಭವಾಗಿದೆ. ಭಾದ್ರಪದ ಮಾಸದ ಕೃಷ್ಣ ಅಷ್ಟಮಿಯ ದಿನವನ್ನು ಶ್ರೀ ಕೃಷ್ಣ ಜನ್ಮಾಷ್ಟಮಿ ರೂಪದಲ್ಲಿ ಆಚರಿಸಲಾಗುತ್ತದೆ. ಈ ದಿನ ಮಧ್ಯ ರಾತ್ರಿ ಶ್ರೀ ಕೃಷ್ಣ ಜನಿಸಿದ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಈ ವರ್ಷ ಈ ಪರ್ವವನ್ನು ಆಗಸ್ಟ್ 30, 2021 ರಂದು ಅಂದರೆ ಸೋಮವಾರ ಆಚರಿಸಲಾಗುತ್ತಿದೆ. ಈ ಶುಭ ದಿನದಂದು ಇಡೀ ದೇಶಾದ್ಯಂತ ಸಡಗರ ಸಂಭ್ರಮದಿಂದ ಶ್ರೀ ಕೃಷ್ಣನ ಜನ್ಮಾಷ್ಟಮೈಯನ್ನು ಆಚರಿಸಲಾಗುವುದು. ಈ ಅವಧಿಯಲ್ಲಿ ಶ್ರೀ ಕೃಷ್ಣನ ದೇವಸ್ಥಾನಗಳನ್ನು ಸಿಂಗರಿಸಲಾಗುತ್ತದೆ ಮತ್ತು ಮನೆಗಳಲ್ಲಿಯೂ ಕೂಡ ತೊಟ್ಟಿಲನ್ನು ಸಿಂಗರಿಸಲಾಗುತ್ತದೆ. ಪಂಚ್ಯಖಾದ್ಯ ನೈವೇದ್ಯ ತಯಾರಿಸಿ ಶ್ರೀಕೃಷ್ಣನಿಗೆ ಅರ್ಪಿಸಿ ಪೂಜೆ ಸಲ್ಲಿಸಲಾಗುತ್ತದೆ.

ಜನ್ಮಾಷ್ಟಮಿಯ ಪೂಜೆಯ ಮುಹೂರ್ತ (Janmashtami Puja Muhurat)
ಈ ಬಾರಿ 29 ಆಗಸ್ಟ್ 2021ರಂದು ರಾತ್ರಿ 11.25 ರಿಂದ ಆಗಸ್ಟ್ 30, 2021 ರ ರಾತ್ರಿ 1.59 ಗಂಟೆಯವರೆಗೆ ಅಷ್ಟಮಿ ತಿಥಿ ಇರಲಿದೆ. ಶ್ರೀ ಕೃಷ್ಣನ ಜನ್ಮಾಷ್ಟಮಿಯ (Shri Krishna Janmasthami 2021) ಶುಭ ಮುಹೂರ್ತ ಆಗಸ್ಟ್ 30, 2021 ರಾತ್ರಿ 12.44 ರಿಂದ ತಡರಾತ್ರಿ 12.44ರವರೆಗೆ ಇರಲಿದೆ. ಪೂಜೆಗಾಗಿ ನಿಮ್ಮ ಬಳಿ ಕೇವಲ 45 ನಿಮಿಷಗಳು ಮಾತ್ರ ಇರಲಿವೆ. ಈ ಅವಧಿಯಲ್ಲಿ ಶ್ರೀ ಕೃಷ್ಣನಿಗೆ ಹೊಸ ವಸ್ತ್ರವನ್ನು ತೊಡಿಸಿ, ಸಿಂಗರಿಸಿ ತೊಟ್ಟಿಲಲ್ಲಿ ತೂಗಲಾಗುತ್ತದೆ.

ಇದನ್ನೂ ಓದಿ-Raksha Bandhan 2021: ರಕ್ಷಾ ಬಂಧನದ ಈ ಶುಭ ದಿನ ನಿಮ್ಮ ಸಹೋದರಿಗೆ ಈ ಉಡುಗೊರೆ ನೀಡಿ, ಭವಿಷ್ಯದಲ್ಲಿ ಹಣಕಾಸಿನ ಮುಗ್ಗಟ್ಟು ಎದುರಾಗಲ್ಲ

ಜನ್ಮಾಷ್ಟಮಿಯ ಪೂಜಾ ವಿಧಿ (Janmashtami Puja Vidhi)
ಒಂದು ಶುಚಿಗೊಳಿಸಿದ ಚೌರಂಗದ ಮೇಲೆ ಕೆಂಪು ಬಣ್ಣದ ಬಟ್ಟೆಯನ್ನು ಹಾಸಿ, ಒಂದು ತಟ್ಟೆಯಲ್ಲಿ ಶ್ರೀಕೃಷ್ಣನ ಮೂರ್ತಿಯನ್ನಿಡಬೇಕು. ದೇವರ ಮುಂದೆ ಧೂಪ-ದೀಪ ಬೆಳಗಿ ಹಾಗೂ ಪ್ರಾರ್ಥನೆ ಸಲ್ಲಿಸಿ. ಬಳಿಕ ಪಂಚಾಮೃತದಿಂದ ದೇವರಿಗೆ ಅಭಿಷೇಕ ಮಾಡಿ.  ನಂತರ ಗಂಗಾ ಜಲದಿಂದ ಸ್ನಾನ ಮಾಡಿಸಿ. ಈಗ ಶ್ರೀ ಕೃಷ್ಣನಿಗೆ ಹೊಸ ಬಟ್ಟೆಯನ್ನು ತೊಡಿಸಿ ಸಿಂಗರಿಸಿ, ಧೂಪ ದೀಪ ಮತ್ತೊಮ್ಮೆ ಬೆಳಗಿ ಆರತಿ ಮಾಡಿ. ಅಷ್ಟಗಂಧ, ಚಂದನ ಹಾಗೂ ಅಕ್ಷತೆಯ ತಿಲಕವನ್ನಿಡಿ. ದೇವರಿಗೆ ಬೆಣ್ಣೆ, ಕಲ್ಲು ಸಕ್ಕರೆ ಹಾಗೂ ಪಂಚಖಾದ್ಯ ನೈವೇದ್ಯ ಅರ್ಪಿಸಿ. ಈ ಅವಧಿಯಲ್ಲಿ ಶ್ರೀ ಕ್ರಿಷ್ಣನಿಗೆ ತುಳಸಿ ಹಾಗೂ ಗಂಗಾಜಲ ಅರ್ಪಿಸಲು ಮರೆಯಬೇಡಿ. ದೇವರನ್ನು ಆರಾಧಿಸಿ. ಕೊನೆಯಲ್ಲಿ ಪುಷ್ಪ ಹಾಗೂ ಅಕ್ಕಿ ಅರ್ಪಿಸಿ ಪೂಜೆಗೆ ಬಂದು ಪೂಜೆ ಪೂಜೆ ಸ್ವೀಕರಿಸಿದ್ದಕ್ಕಾಗಿ ಕೃತಜ್ಞತೆಗಳನ್ನು ಸಲ್ಲಿಸಿ.

ಇದನ್ನು ಓದಿ -Tulsi Water Benefits: ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ನೀರನ್ನು ಸೇವಿಸಿ, ಈ ಸಮಸ್ಯೆಗಳಿಂದ ಪರಿಹಾರ ಪಡೆಯಿರಿ

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ಓದಿ-Palmistry: ನಿಮ್ಮ ಜೀವನಕ್ಕೆ ಸಂಬಂಧಿಸಿದ ಎಲ್ಲಾ ಸಂಗತಿಗಳ ಕುರಿತು ಹೇಳುತ್ತವೆ ಅಂಗೈಯಲ್ಲಿನ ಈ ನಾಲ್ಕು ರೇಖೆಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News