7Th Pay Commission: ಸರ್ಕಾರಿ ನೌಕರರಿಗೊಂದು ಭಾರಿ ನೆಮ್ಮದಿಯ ಸುದ್ದಿ, ತಿಂಗಳು ವೇತನಕ್ಕೆ ಸೇರ್ಪಡೆಯಾಗಲಿದೆ ಹೆಚ್ಚುವರಿ ರೂ.4500

7th Pay Commission Updates: ಕೇಂದ್ರ ಸರ್ಕಾರಿ ನೌಕರರಿಗೆ ಎರಡು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಚಿಲ್ಡ್ರನ್ ಎಡ್ಯುಕೆಶನ್ ಅಲೌನ್ಸ್ ಸಿಗುತ್ತದೆ. ತಿಂಗಳಿಗೆ ಪ್ರತಿ ಮಗುವಿಗೆ ರೂ.2250 ಭತ್ಯೆ ಸಿಗುತ್ತದೆ. ಅಂದರೆ ಎರಡು ಮಕ್ಕಳಿಗೆ ಸರ್ಕಾರಿ ನೌಕರರಿಗೆ ರೂ.4500 ಭತ್ಯೆ ಸಿಗುತ್ತದೆ.

Written by - Nitin Tabib | Last Updated : Aug 23, 2021, 03:23 PM IST
  • ಸರ್ಕಾರಿ ನೌಕರರು ಚಿಲ್ಡ್ರನ್ ಎಜುಕೇಶನ್ ಅಲೌನ್ಸ್ ಕ್ಲೇಮ್ ಮಾಡಿರಲಿಲ್ಲ.
  • ಕೊರೊನಾ ಮಹಾಮಾರಿಯ ಕಾರಣ ಅವರು CEA ಕ್ಲೇಮ್ ಮಾಡಿರಲಿಲ್ಲ.
  • ಆದರೆ, ಇದೀಗ ಸೆಲ್ಫ್ ಡಿಕ್ಲೆರೇಶನ್ ಸಲ್ಲಿಸಿ ಅವರು CEA ಮರಳಿ ಪಡೆಯಬಹುದು.
7Th Pay Commission: ಸರ್ಕಾರಿ ನೌಕರರಿಗೊಂದು ಭಾರಿ ನೆಮ್ಮದಿಯ ಸುದ್ದಿ, ತಿಂಗಳು ವೇತನಕ್ಕೆ ಸೇರ್ಪಡೆಯಾಗಲಿದೆ ಹೆಚ್ಚುವರಿ ರೂ.4500 title=
7th Pay Commission Updates (File Photo)

7th Pay Commission: ಒಂದು ಕೋಟಿಗೂ ಅಧಿಕ ಕೇಂದ್ರ ಉದ್ಯೋಗಿಗಳಿಗೆ (Central Government Employees) ಮತ್ತು ಪಿಂಚಣಿದಾರರಿಗೆ ತಮ್ಮ ಹೆಚ್ಚಿದ DA (DA Hike) ಹಾಗೂ DR ಸಿಕ್ಕ ಬಳಿಕ, ಇದೀಗ ಮತ್ತೊಂದು ಒಳ್ಳೆಯ ಸುದ್ದಿ ಪ್ರಕಟವಾಗಿದೆ. ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ಮಕ್ಕಳ ಶಿಕ್ಷಣ ಭತ್ಯೆಯನ್ನು (CEA) ಪಡೆಯಲು ಸಾಧ್ಯವಾಗದ ಉದ್ಯೋಗಿಗಳು ಇದೀಗ ಅದನ್ನು ಕ್ಲೇಮ್ ಮಾಡಬಹುದಾಗಿದೆ  ಇದಕ್ಕಾಗಿ ಅವರು ಯಾವುದೇ ಅಧಿಕೃತ ದಾಖಲೆ ನೀಡುವ ಅವಶ್ಯಕತೆ ಇಲ್ಲ.

ಕೊರೊನಾ ಹಿನ್ನೆಲೆ CEA ಕ್ಲೇಮ್ ಸಲ್ಲಿಸಲಾಗಿರಲಿಲ್ಲ
ಕೇಂದ್ರ ಉದ್ಯೋಗಿಗಳು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಭತ್ಯೆಯನ್ನು (Children Education Allowance) ಪಡೆಯುತ್ತಾರೆ. 7 ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ ಈ ಭತ್ಯೆ ತಿಂಗಳಿಗೆ 2,250 ರೂ. ಇರುತ್ತದೆ. ಆದರೆ ಕಳೆದ ವರ್ಷದಿಂದ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಶಾಲೆಗಳನ್ನು ಮುಚ್ಚಲಾಗಿದೆ. ಈ ಕಾರಣದಿಂದಾಗಿ ಕೇಂದ್ರ ಉದ್ಯೋಗಿಗಳು CEA ಪಡೆಯಲು ಸಾಧ್ಯವಾಗಿರಲಿಲ್ಲ.

ಸ್ವಯಂ ಘೋಷಣೆ ನೀಡಬೇಕಾಗಲಿದೆ
ಕಳೆದ ತಿಂಗಳು ಡಿಪಾರ್ಟ್ಮೆಂಟ್ ಆಫ್ ಪರ್ಸನಲ್ ಅಂಡ್ ಟ್ರೇನಿಂಗ್ ಒಂದು ಆಫೀಸ್ ಆಫ್ ಮೆಮೊರೆಂಡಮ್ (OM) ಜಾರಿಗೊಳಿಸಿತ್ತು. ಅದರ ಪ್ರಕಾರ,  ಕೊರೊನಾ ಹಿನ್ನೆಲೆ ಕೇಂದ್ರ ಸರ್ಕಾರಿ ನೌಕರರಿಗೆ ಚಿಲ್ಡ್ರನ್ ಎಡ್ಯುಕೆಷನ್ ಅಲೌನ್ಸ್ ಪಡೆಯಲು ಅಡೆತಡೆ ಎದುರಾಗಿತ್ತು. ಏಕೆಂದರೆ, ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿದ ಬಳಿಕವೂ ಕೂಡ ಫಲಿತಾಂಶ/ರಿಪೋರ್ಟ್ ಕಾರ್ಡ್‌ಗಳನ್ನು ಶಾಲೆವತಿಯಿಂದ  ಎಸ್‌ಎಂಎಸ್/ಇ-ಮೇಲ್ ಮೂಲಕ ಕಳುಹಿಸಲಾಗಿರಲಿಲ್ಲ. CEA ಕ್ಲೈಮ್‌ಗಳನ್ನು ಸ್ವಯಂ ಘೋಷಣೆ ಅಥವಾ ಎಸ್‌ಎಂಎಸ್/ಇ-ಮೇಲ್ ಪ್ರಿಂಟ್ ಔಟ್ ಫಲಿತಾಂಶ/ವರದಿ ಕಾರ್ಡ್/ಶುಲ್ಕ ಪಾವತಿಯ ಮೂಲಕವೂ ಕ್ಲೈಮ್ ಮಾಡಬಹುದು ಎಂದು DoPT ಹೇಳಿದೆ. ಆದರೆ,  ಈ ಸೌಲಭ್ಯವು ಮಾರ್ಚ್ 2020 ಮತ್ತು ಮಾರ್ಚ್ 2021 ರಲ್ಲಿ ಕೊನೆಗೊಳ್ಳುವ ಶೈಕ್ಷಣಿಕ ವರ್ಷಕ್ಕೆ ಮಾತ್ರ ಲಭ್ಯವಿರಲಿದೆ.

ಇದನ್ನೂ ಓದಿ-7th Pay Commission: ನೀವೂ ಈ ಸರ್ಕಾರಿ ಯೋಜನೆಯ ಲಾಭ ಪಡೆದಿರುವಿರಾ? ಹಾಗಾದರೆ ಇಲ್ಲಿದೆ ನಿಮಗೊಂದು ಮಹತ್ವದ ಸೂಚನೆ

ಕೇಂದ್ರ ಸರ್ಕಾರಿ ನೌಕರರಿಗೆ ಎರಡು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಚಿಲ್ಡ್ರನ್ ಎಡ್ಯುಕೆಶನ್ ಅಲೌನ್ಸ್ ಸಿಗುತ್ತದೆ. ತಿಂಗಳಿಗೆ ಪ್ರತಿ ಮಗುವಿಗೆ ರೂ.2250 ಭತ್ಯೆ ಸಿಗುತ್ತದೆ. ಅಂದರೆ ಎರಡು ಮಕ್ಕಳಿಗೆ ಸರ್ಕಾರಿ ನೌಕರರಿಗೆ ರೂ.4500 ಭತ್ಯೆ ಸಿಗುತ್ತದೆ. ಎರಡನೇ ಮಗು ಅವಳಿ ಮಕ್ಕಳಾಗಿದ್ದರೆ, ಈ ಭತ್ಯೆಯನ್ನು ಮೊದಲ ಮಗುವಿನೊಂದಿಗೆ ಅವಳಿಗಳ ಶಿಕ್ಷಣಕ್ಕೂ ನೀಡಲಾಗುತ್ತದೆ. ಎರಡು ಶೈಕ್ಷಣಿಕ ಕ್ಯಾಲೆಂಡರ್‌ಗಳ ಪ್ರಕಾರ, ಒಂದು ಮಗುವಿಗೆ 4500 ರೂ.  ಸಿಗುತ್ತದೆ. ಮಾರ್ಚ್ 2020 ಮತ್ತು ಮಾರ್ಚ್ 2021 ಕ್ಕೆ ಉದ್ಯೋಗಿ ಇನ್ನೂ ಕ್ಲೈಮ್ ಮಾಡದಿದ್ದರೆ, ಅದನ್ನು ಕ್ಲೈಮ್ ಮಾಡಬಹುದು. ಇಂತಹ ಪರಿಸ್ಥಿತಿಯಲ್ಲಿ, ಆತನ ವೇತನಕ್ಕೆ ರೂ. 4500 ಸೇರಿಸಲಾಗುತ್ತದೆ.

ಇದನ್ನೂ ಓದಿ-7th Pay Commission: ಕೇಂದ್ರ ಸರ್ಕಾರಿ ನೌಕರರಿಗೊಂದು ಭಾರಿ ನೆಮ್ಮದಿಯ ಸುದ್ದಿ

CEA ಕ್ಲೇಮ್ ಗಾಗಿ ಹಲವು ದಾಖಲೆಗಳು ಬೇಕು
ಮಕ್ಕಳ ಶಿಕ್ಷಣ ಭತ್ಯೆಯನ್ನು ಪಡೆಯಲು, ಕೇಂದ್ರೀಯ ಉದ್ಯೋಗಿಗಳು ಶಾಲಾ ಪ್ರಮಾಣಪತ್ರ ಮತ್ತು ಹಕ್ಕು ದಾಖಲೆಗಳನ್ನು ಸಲ್ಲಿಸಬೇಕು. ಶಾಲೆಯಿಂದ ಪಡೆದ ಡಿಕ್ಲೆರೇಶನ್ ನಲ್ಲಿ, ಮಗು ತಮ್ಮ ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತದೆ ಎಂದು ಬರೆದಿರಲಾಗಿರುತ್ತದೆ. ಇದರೊಂದಿಗೆ, ನೀವು ಅಧ್ಯಯನ ಮಾಡಿದ ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಸಹ ಉಲ್ಲೇಖಿಸಲಾಗಿರುತ್ತದೆ. CEA ಕ್ಲೈಮ್‌ಗಾಗಿ, ಮಗುವಿನ ಫಲಿತಾಂಶ ವರದಿ, ಸ್ವಯಂ ದೃಡೀಕರಣ ಪ್ರತಿ ಮತ್ತು ಶುಲ್ಕ ರಶೀದಿಯನ್ನು ಕೂಡ ಲಗತ್ತಿಸಬೇಕಾಗುತ್ತದೆ.

ಇದನ್ನೂ ಓದಿ-7th Pay Commission : 8 ಲಕ್ಷ PSU ನೌಕರರಿಗೆ ಸಿಹಿ ಸುದ್ದಿ! ಶೇ.2 ರಷ್ಟು DA ಹೆಚ್ಚಿಸಿದೆ ಕೇಂದ್ರ ಸರ್ಕಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News