ನವದೆಹಲಿ: Insurance Protection To Jan-Dhan Account Holders - ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರ್ಕಾರವು ಜನ-ಧನ್ ಖಾತೆದಾರರಿಗೆ ಜೀವವಿಮೆ ಮತ್ತು ಅಪಘಾತ ರಕ್ಷಣೆಯನ್ನು ನೀಡಲು ಚಿಂತನೆ ನಡೆಸುತ್ತಿದೆ.
ನವದೆಹಲಿ: Insurance Protection To Jan-Dhan Account Holders - ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರ್ಕಾರವು (Modi Government) ಜನ-ಧನ್ ಖಾತೆದಾರರಿಗೆ ಜೀವವಿಮೆ ಮತ್ತು ಅಪಘಾತ ರಕ್ಷಣೆಯನ್ನು ನೀಡಲು ಚಿಂತನೆ ನಡೆಸುತ್ತಿದೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ (PMJJBY) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ (PMSBY) ಅಡಿಯಲ್ಲಿ ಸರ್ಕಾರವು ವಿಮಾ ರಕ್ಷಣೆಯನ್ನು ಜನ್-ಧನ್ ಖಾತೆದಾರರಿಗೆ ನೀಡಲು ಬಯಸುತ್ತದೆ. "ಈ ಬಗ್ಗೆ ಈಗಾಗಲೇ ಬ್ಯಾಂಕ್ ಗಳಿಗೆ ಮಾಹಿತಿ ನೀಡಲಾಗಿದೆ" ಎಂದು ಹಣಕಾಸು ಸಚಿವಾಲಯ ಶನಿವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. 43 ಕೋಟಿ ಜನ-ಧನ್ ಖಾತೆದಾರರು ಸರ್ಕಾರದ ಈ ಹೆಜ್ಜೆಯ ಲಾಭವನ್ನು ಪಡೆಯುವ ನಿರೀಕ್ಷೆಯಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. 342ರೂ. ಪ್ರಿಮಿಯಂ : ಪ್ರಧಾನ ಮಂತ್ರಿ ಜೀವನ ಜ್ಯೋತಿ (PMJJBY) ಯೋಜನೆಯ ಅಡಿಯಲ್ಲಿ, ನಿತ್ಯ 1ರೂ.ಗಿಂತಲೂ ಕಡಿಮೆ ಪ್ರೀಮಿಯಂನಲ್ಲಿ ರೂ 2 ಲಕ್ಷ ಜೀವ ವಿಮೆ ಲಭ್ಯವಿರಲಿದೆ. ಇದಕ್ಕಾಗಿ ವಾರ್ಷಿಕ ರೂ . 330 ಪ್ರೀಮಿಯಂ ಪಾವತಿಸಬೇಕು. ಇದೇ ವೇಳೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ (PMSBY) ಯೋಜನೆಯು ಆಕಸ್ಮಿಕ ಅಪಾಯಗಳನ್ನು ಒಳಗೊಂಡಿದೆ. ಈ ಯೋಜನೆಯು ಆಕಸ್ಮಿಕ ಸಾವು ಮತ್ತು ರೂ. 2 ಲಕ್ಷದವರೆಗಿನ ಸಂಪೂರ್ಣ ಅಂಗವೈಕಲ್ಯಕ್ಕೆ ರಕ್ಷಣೆ ಒದಗಿಸುತ್ತದೆ. ಇದಲ್ಲದೇ, ಭಾಗಶಃ ಅಂಗವೈಕಲ್ಯಕ್ಕಾಗಿ, 1 ಲಕ್ಷ ರೂ. ರಕ್ಷಣೆ ಒದಗಿಸುತ್ತದೆ. ಇದಕ್ಕಾಗಿ, ವಾರ್ಷಿಕ ರೂ 12 ಪ್ರೀಮಿಯಂ ಪಾವತಿಸಬೇಕು. ಇದರರ್ಥ ಜನ್ ಧನ್ ಖಾತೆದಾರರು ರೂ. 342 ವೆಚ್ಚದಲ್ಲಿ ರೂ. 4 ಲಕ್ಷದವರೆಗೆ ವಿಮೆಯನ್ನು ಪಡೆಯಲಿದ್ದಾರೆ.
2. 43 ಕೋಟಿಗೂ ಅಧಿಕ ಖಾತೆದಾರರು: ಪ್ರಧಾನ ಮಂತ್ರಿ ಜನ-ಧನ್ ಯೋಜನೆ (PMJDY) ಅಡಿಯಲ್ಲಿ ಬ್ಯಾಂಕ್ ಖಾತೆದಾರರ ಸಂಖ್ಯೆ 43 ಕೋಟಿಗಿಂತ ಹೆಚ್ಚಾಗಿದೆ. ಪ್ರಸ್ತುತ ಈ ಖಾತೆಗಳಲ್ಲಿ ಠೇವಣಿ ಮಾಡಲಾಗಿರುವ ಮೊತ್ತವು 1.46 ಲಕ್ಷ ಕೋಟಿಗಳನ್ನು ದಾಟಿದೆ. PMJDY ಅನ್ನು ಆಗಸ್ಟ್ 15, 2014 ರಂದು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದರು. ಅಲ್ಲದೆ, ಆರ್ಥಿಕ ಸೇರ್ಪಡೆ ಉತ್ತೇಜಿಸಲು ಇದನ್ನು ಆಗಸ್ಟ್ 28 ರಂದು ಆರಂಭಿಸಲಾಯಿತು. ಇಂದಿಗೆ ಅಂದರೆ ಅಂದರೆ 28 ಆಗಸ್ಟ್ 2021 ರಂದು ಈ ಯೋಜನೆಗೆ ಇಂದಿಗೆ ಏಳು ವರ್ಷಗಳು ಪೂರ್ಣಗೊಂಡಿವೆ.
3. ಇದರಲ್ಲಿ 23.87 ಕೋಟಿ ಖಾತೆದಾರರು ಮಹಿಳೆಯರಾಗಿದ್ದಾರೆ - ಹಣಕಾಸು ಸಚಿವಾಲಯದ (Finance Ministry) ಪ್ರಕಾರ, ಅರೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು ಜನ್-ಧನ್ ಖಾತೆದಾರರ ಸಂಖ್ಯೆ ಆಗಸ್ಟ್ 18, 2021 ಕ್ಕೆ 43.04 ಕೋಟಿಗೆ ಏರಿಕೆಯಾಗಿದೆ. ಇದರಲ್ಲಿ ಶೇ.55.47 ಅಥವಾ 23.87 ಕೋಟಿ ಖಾತೆದಾರರು ಮಹಿಳೆಯರು ಮತ್ತು ಶೇ.66.69 ಅಥವಾ 28.70 ಕೋಟಿ ಖಾತೆದಾರರು ಪುರುಶರಾಗಿದ್ದಾರೆ. ಸಚಿವಾಲಯದ ಪ್ರಕಾರ, ಈ ಯೋಜನೆಯ ಮೊದಲ ವರ್ಷದಲ್ಲಿ 17.90 ಕೋಟಿ ಜನ-ಧನ್ ಖಾತೆಗಳನ್ನು ತೆರೆಯಲಾಗಿದೆ.