ರಾಹುಲ್ ಗಾಂಧಿ ಬಗ್ಗೆ ನಳಿನ್ ಕುಮಾರ್ ಕಟೀಲ್ ಹೇಳಿಕೆ : ಕ್ಷಮೆ ಯಾಚಿಸುವಂತೆ ಕಾಂಗ್ರೆಸ್ ಒತ್ತಾಯ

 ರಾಹುಲ್ ಗಾಂಧಿ ಬಗ್ಗೆ ಮಾದಕ ದ್ರವ್ಯ ಬಳಕೆ ಆರೋಪ ಹೊರಿಸಿದ್ದಕ್ಕಾಗಿ , ನಳಿನ್ ಕುಮಾರ್ ಕಟೀಲ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಸಿಂಧಗಿಯಲ್ಲಿ ಮಾತನಾಡಿದ ರಂದೀಪ್ ಸುರ್ಜೆವಾಲ , ರಾಹುಲ್ ಗಾಂಧಿ ಬಗ್ಗೆ ನೀಡಿರುವ ಹೇಳಿಕೆಗೆ ನಳಿನ್ ಕುಮಾರ್ ಕಟೀಲ್ ತಕ್ಷಣ ಕ್ಷಮೆ ಯಾಚಿಸಬೇಕು ಎಂದು ಹೇಳಿದ್ದಾರೆ. 

Written by - Ranjitha R K | Last Updated : Oct 20, 2021, 07:49 PM IST
  • ನಳೀನ್ ಕುಮಾರ್ ಕ್ಷಮೆಯಾಚನೆಗೆ ಕಾಂಗ್ರೆಸ್ ಆಗ್ರಹ
  • ರಾಜ್ಯ ಬಿಜೆಪಿ ವಿರುದ್ದ ರಂದೀಪ್ ಸುರ್ಜೆವಾಲ ಆಕ್ರೋಶ
  • ಈ ಹೇಳಿಕೆ ಬಿಜೆಪಿ ನಾಯಕರ ಸಂಸ್ಕೃತಿ, ಮನ ಸ್ಥಿತಿಯನ್ನು ತೋರಿಸುತ್ತದೆ - ರಂದೀಪ್ ಸುರ್ಜೆವಾಲ
ರಾಹುಲ್ ಗಾಂಧಿ ಬಗ್ಗೆ ನಳಿನ್ ಕುಮಾರ್ ಕಟೀಲ್ ಹೇಳಿಕೆ : ಕ್ಷಮೆ ಯಾಚಿಸುವಂತೆ ಕಾಂಗ್ರೆಸ್ ಒತ್ತಾಯ  title=
ನಳೀನ್ ಕುಮಾರ್ ಕ್ಷಮೆಯಾಚನೆಗೆ ಕಾಂಗ್ರೆಸ್ ಆಗ್ರಹ (photo ANI)

ವಿಜಯಪುರ : ರಾಹುಲ್ ಗಾಂಧಿ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Naleen Kumar Kateel) ಹೇಳಿಕೆಗೆ ಕಾಂಗ್ರೆಸ್  ಪ್ರಧಾನ ಕಾರ್ಯದರ್ಶಿ ರಂದೀಪ್ ಸುರ್ಜೆವಾಲ (Randeep Singh  Surjewala) ಆಕಾಶ ವ್ಯಕ್ತ ಪಡಿಸಿದ್ದಾರೆ. ರಾಹುಲ್ ಗಾಂಧಿ (Rahul Gandhi) ಬಗ್ಗೆ ಮಾದಕ ದ್ರವ್ಯ ಬಳಕೆ ಆರೋಪ ಹೊರಿಸಿದ್ದಕ್ಕಾಗಿ , ನಳಿನ್ ಕುಮಾರ್ ಕಟೀಲ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಸಿಂಧಗಿಯಲ್ಲಿ ಮಾತನಾಡಿದ ರಂದೀಪ್ ಸುರ್ಜೆವಾಲ , ರಾಹುಲ್ ಗಾಂಧಿ ಬಗ್ಗೆ ನೀಡಿರುವ ಹೇಳಿಕೆಗೆ ನಳಿನ್ ಕುಮಾರ್ ಕಟೀಲ್ ತಕ್ಷಣ ಕ್ಷಮೆ ಯಾಚಿಸಬೇಕು ಎಂದು ಹೇಳಿದ್ದಾರೆ. 

ಈ ರೀತಿಯ ಹೇಳಿಕೆ ನೀಡುವ ಬದಲು ಅವರು ಡ್ರಗ್ಸ್ ನ (drugs) ಹ್ಯಾಂಗ್ ಓವರ್ ನಲ್ಲಿ ಇದ್ದಾರೆಯೇ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಬಹುಶಃ ನಳೀನ್ ಕುಮಾರ್ ಕಟೀಲ್ (Naleen Kumar Kateel) ಅವರೇ ಡ್ರಗ್ಸ್  ತೆಗೆದುಕೊಂಡಿರಬೇಕು. ಆದರೆ ಹ್ಯಾಂಗ್ ಓವರ್ ನಲ್ಲಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.  

ಇದನ್ನೂ ಓದಿ : Gita Gopinath To Leave IMF: IMF ನೌಕರಿಯನ್ನು ತೊರೆಯಲಿದ್ದಾರೆಯೇ ಗೀತಾ ಗೋಪಿನಾಥ್? ಅವರ ಮುಂದಿನ ಯೋಜನೆ ಏನು?

ರಾಹುಲ್ ಗಾಂಧಿ (Rahul Gandhi) ಬಗ್ಗೆ ಈ ರೀತಿ ಹೇಳಿಕೆ ನೀಡುತ್ತಿರುವುದು ಬಿಜೆಪಿ ನಾಯಕರ ತಮ್ಮ ಸಂಸ್ಕೃತಿ ಮತ್ತು ಮನ ಸ್ಥಿತಿಯನ್ನು ತೋರಿಸುತ್ತದೆ ಎಂದು ರಂದೀಪ್ ಸುರ್ಜೆವಾಲ (Randeep Singh  Surjewala) ಹೇಳಿದ್ದಾರೆ. ನಳಿನ್ ಕುಮಾರ್ ಕಟೀಲ್ ನೀಡಿರುವ ಹೇಳಿಕೆಯನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ (BJP) ಅಧ್ಯಕ್ಷರಾಗಿದ್ದುಕೊಂಡು ಈ ರೀತಿಯ ಹೇಳಿಕೆ ನೀಡಿರುವುದು ಖಂಡನಾರ್ಹ ಮತ್ತು ಕೂಡಲೇ ಅವರು ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ. 

ಇನ್ನು ನಳಿನ್ ಕುಮಾರ್ ಕಟೀಲ್ ಹೇಳಿಕೆಯನ್ನು ಖಂಡಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಟೀಲ್ ಅಪಕ್ವ ಮತ್ತು ಸಂಸ್ಕೃತಿಯಿಲ್ಲದ ರಾಜಕಾರಣಿ ಎಂದು ಹೇಳಿದ್ದಾರೆ. ಅಲ್ಲದೆ ಅವರು ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದ್ದಾರೆ. 

ಇದನ್ನೂ ಓದಿ :Helpdesk: ಉತ್ತರಾಖಂಡದಲ್ಲಿ ಸಿಲುಕಿರುವ ಕನ್ನಡಿಗರಿಗಾಗಿ ಸಹಾಯವಾಣಿ ಸ್ಥಾಪಿಸಿದ ರಾಜ್ಯ ಸರ್ಕಾರ

ನಿನ್ನೆ ರಾಹುಲ್ ಗಾಂಧಿ ಬಗ್ಗೆ ಮಾತನಾಡಿದ್ದ ನಳೀನ್ ಕುಮಾರ್ ಕಟೀಲ್ , ರಾಹುಲ್ ಗಾಂಧಿ ಯಾರು? ಅವರೊಬ್ಬ ಡ್ರಗ್ ಎಡಿಕ್ಟ್, ಡ್ರಗ್ ಪೆಡ್ಲರ್.  ಅವರಿಗೆ ಒಂದು ಪಕ್ಷವನ್ನು ಮುನ್ನಡೆಸಲು ಸಾಧ್ಯವಿಲ್ಲ. ಅಂಥವರು ದೇಶವನ್ನು ಹೇಗೆ ಮುನ್ನಡೆಸುತ್ತಾರೆ ಎಂದು ಪ್ರಶ್ನಿಸಿದ್ದರು.     

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News