ಜಮ್ಮು: ಗೃಹ ಸಚಿವ ಅಮಿತ್ ಶಾ (Amit Shah), ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ ವೇಳೆ ಅಲ್ಲಿನ ಸ್ಥಳೀಯ ಜನರೊಂದಿಗೆ ಕೆಲ ಸಮಯ ಕಳೆದಿದ್ದಾರೆ. ತಮ್ಮ ಮೂರು ದಿನಗಳ ಭೇಟಿಯ ವೇಳೆ, ಕೇಂದ್ರಾಡಳಿತ ಪ್ರದೇಶದ ಚಳಿಗಾಲದ ರಾಜಧಾನಿಗೂ ತೆರಳಿದ್ದರು. ಭಾನುವಾರ ಸಂಜೆ ಆರ್‌ಎಸ್‌ಪುರ ಸೆಕ್ಟರ್‌ನಲ್ಲಿರುವ ಭಾರತ-ಪಾಕಿಸ್ತಾನ ಗಡಿಗೂ (India- Pak Border) ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿದ್ದರು. ಜಮ್ಮುವಿನ ಪಕ್ಕದಲ್ಲಿರುವ ಮಕ್ವಾಲ್‌ನಲ್ಲಿ, ಬಿಎಸ್‌ಎಫ್ (BSF) ಪೋಸ್ಟ್‌ಗೆ ತೆರಳಿ, ಅಲ್ಲಿ ಯೋಧರೊಂದಿಗೆ ಸಂವಾದ ನಡೆಸಿದರು. ಇದರ ಜೊತೆಗೆ ಅಲ್ಲಿನ ಸ್ಥಳೀಯರೊಂದಿಗೂ ಸಮಯ ಕಳೆದಿದ್ದಾರೆ.
ಸ್ಥಳೀಯರೊಂದಿಗೆ ಶಾ ಮಾತುಕತೆ :
ಇಲ್ಲಿನ ಭೇಟಿ ವೇಳೆ, ಗೃಹ ಸಚಿವ ಅಮಿತ್ ಶಾ (Amit Shah), ಸ್ಥಳೀಯ ನಾಗರಿಕರ ಫೋನ್ ನಂಬರ್ ಅನ್ನು ತಮ್ಮ ಮೊಬೈಲ್ ನಲ್ಲಿ ಸೇವ್ ಮಾಡಿಕೊಂಡಿದ್ದಾರೆ. ಅಲ್ಲದೆ, ತಮ್ಮ ಮೊಬೈಲ್ ನಂಬರ್ (Mobile number) ಅನ್ನು ಸ್ಥಳೀಯರೊಂದಿಗೆ ಶೇರ್ ಮಾಡಿ, ಅಗತ್ಯ ಬಿದ್ದಾಗ ಕರೆ ಮಾಡುವಂತೆ ಹೇಳಿದ್ದಾರೆ. ಅಮಿತ್ ಶಾ ಇಲ್ಲಿ ಸ್ಥಳೀಯರೊಂದಿಗೆ ಚಹಾ ಸೇವಿಸಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಗೃಹ ಸಚಿವರ ಈ ಸರಳ ವರ್ತನೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
#WATCH | J&K: Union Home Minister Amit Shah takes the contact number of a local resident of Makwal border in Jammu, shares his own and tells him that the man can contact him whenever he needs.
The Home Minister visited the forward areas of Makwal border today. pic.twitter.com/KJnI9zEsSD
— ANI (@ANI) October 24, 2021
ಇದನ್ನೂ ಓದಿ : Kisan Credit Card: ರೈತರಿಗೆ ಮಾತ್ರವಲ್ಲ ಇನ್ನು ಇವರಿಗೂ ಸಿಗಲಿದೆ ಕಿಸಾನ್ ಕ್ರೆಡಿಟ್ ಕಾರ್ಡ್, ಶೀಘ್ರವೇ ಅರ್ಜಿ ಸಲ್ಲಿಸಬಹುದು
'ಭಯೋತ್ಪಾದನೆ ನಿರ್ಮೂಲನೆ' :
ಇದಕ್ಕೂ ಮುನ್ನ ಜಮ್ಮುವಿನ ಭಗವತಿ ನಗರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಜಮ್ಮು ಮತ್ತು ಕಾಶ್ಮೀರದಿಂದ (Kashmir) ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವುದು ಮತ್ತು ನಾಗರಿಕರ ಹತ್ಯೆಗಳನ್ನು ನಿಲ್ಲಿಸುವುದು ಸರ್ಕಾರದ ಗುರಿಯಾಗಿದೆ ಎಂದು ಹೇಳಿದ್ದಾರೆ. ಈ ಕೇಂದ್ರಾಡಳಿತ ಪ್ರದೇಶದಲ್ಲಿ ಶಾಂತಿ ಮತ್ತು ಅಭಿವೃದ್ಧಿಗೆ ಭಂಗ ತರಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಗುಡುಗಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ಈಗಾಗಲೇ 12,000 ಕೋಟಿ ರೂಪಾಯಿಗಳ ಹೂಡಿಕೆ (Investment) ಬಂದಿದ್ದು, 2022 ರ ಅಂತ್ಯದ ವೇಳೆಗೆ ಒಟ್ಟು ಹೂಡಿಕೆಯನ್ನು 51,000 ಕೋಟಿ ರೂಪಾಯಿಗಳಿಗೆ ತರುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಅವರು ಹೇಳಿದ್ದಾರೆ.
ಯುವಕರಿಗೆ 5 ಲಕ್ಷ ಉದ್ಯೋಗ ಸಿಗಲಿದೆ :
ಕೇಂದ್ರ ಸರ್ಕಾರದ ಪ್ರಯತ್ನದಿಂದ ಸ್ಥಳೀಯ ಯುವಕರಿಗೆ ಐದು ಲಕ್ಷ ಉದ್ಯೋಗ ದೊರೆಯಲಿದೆ ಎಂದು ಗೃಹ ಸಚಿವರು ಹೇಳಿದ್ದಾರೆ. ಆಗಸ್ಟ್ 5, 2019 ರಂದು ರಾಜ್ಯದ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸಿ ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಕೇಂದ್ರದ ನಿರ್ಧಾರದ ನಂತರ, ಅಮಿತ್ ಶಾ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ, ಸ್ಥಳೀಯ ಜನರೊಂದಿಗೆ ಸಂವಾದ ನಡೆಸಿದ್ದಾರೆ.
ಇದನ್ನೂ ಓದಿ : LPG CNG Prices Hike: ಪೆಟ್ರೋಲ್-ಡೀಸೆಲ್ ನಂತರ, ಈಗ CNG-ದೇಶೀಯ ಅನಿಲಗಳ ಬೆಲೆ ಏರಿಕೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ