ನವದೆಹಲಿ: IPL 2022 Update - ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಸಿಎಸ್ಕೆ ಐಪಿಎಲ್ 2021 ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಸಿಎಸ್ ಕೆ ಪಾಲಿಗೆ ಐಪಿಎಲ್ ಟ್ರೋಫಿ ಗೆಲ್ಲುವ ಅವಕಾಶ ಇದು ನಾಲ್ಕನೇ ಬಾರಿಯಾಗಿದೆ. ಆದರೆ ಈ ನಡುವೆ ಸಿಎಸ್ಕೆ ಅಭಿಮಾನಿಗಳ ಪಾಲಿಗೆ ಕಹಿ ಸುದ್ದಿಯೊಂದು ಹೊರಬಿದ್ದಿದೆ. ಧೋನಿ ಮುಂದಿನ ವರ್ಷ CSK ಪರ ಆಡಲು ಸಿದ್ಧರಿಲ್ಲ, ಹೀಗಾಗಿ ಆಡಳಿತ ಮಂಡಳಿ ಹೊಸ ನಾಯಕನ ಹುಡುಕಾಟದಲ್ಲಿ ತೊಡಗಿದೆ.
ಧೋನಿ ಸಿಎಸ್ಕೆ ತಂಡವನ್ನು ತೊರೆಯಲಿದ್ದಾರೆ!
ಐಪಿಎಲ್ 2022 ರ ಮೆಗಾ ಹರಾಜಿನ ಮೊದಲು, ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಮಾಲೀಕ ಎನ್ ಶ್ರೀನಿವಾಸನ್ (N Srinivasan), ಮಹೇಂದ್ರ ಸಿಂಗ್ ಧೋನಿ ಕುರಿತು ಮಹತ್ವದ ಅಪ್ಡೇಟ್ ವೊಂದನ್ನು ಹಂಚಿಕೊಂಡಿದ್ದಾರೆ. ಸಿಎಸ್ಕೆ ತಂಡವು ಮತ್ತೊಮ್ಮೆ ಉಳಿಸಿಕೊಳ್ಳಲು ಮಹೇಂದ್ರ ಸಿಂಗ್ ಧೋನಿ (MS Dhoni) ಬಯಸುತ್ತಿಲ್ಲ ಎಂದು ಶ್ರೀನಿವಾಸನ್ ಹೇಳಿದ್ದಾರೆ. CSK ತನ್ನ ಮೇಲೆ ಹೆಚ್ಚು ಹಣವನ್ನು ವ್ಯರ್ಥ ಮಾಡಬಾರದು ಎಂದು ಧೋನಿ ಅನಿಸಿಕೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಧೋನಿ ಮತ್ತು ಸಿಎಸ್ಕೆ ಪಯಣ ಅಂತ್ಯವಾಗಲಿದೆ ಎಂದೇ ಹೇಳಲಾಗುತ್ತಿದೆ.
ಈ ಆಟಗಾರ CSK ತಂಡದ ಹೊಸ ನಾಯಕನಾಗುವ ಸಾಧ್ಯತೆ
ಧೋನಿ ತಂಡದಿಂದ ಹೊರ ನಡೆದ ತಕ್ಷಣ ಸಿಎಸ್ಕೆಗೆ ಹೊಸ ನಾಯಕ ಸಿಗಲಿದ್ದಾರೆ. ಸಿಎಸ್ಕೆಯ ಆರಂಭಿಕ ಆಟಗಾರ ಫಾಫ್ ಡು ಪ್ಲೆಸಿಸ್ (Faf du Plessis)ಈ ಸ್ಥಾನವನ್ನು ನಿಭಾಯಿಸಬಲ್ಲರು. ಡು ಪ್ಲೆಸಿಸ್ ಅವರು ಸಿಎಸ್ಕೆಯೊಂದಿಗೆ ದೀರ್ಘಕಾಲ ಸಂಬಂಧ ಹೊಂದಿದ್ದಾರೆ ಮತ್ತು ಕಳೆದ ಎರಡು ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ಅವರು ಮಹತ್ವದ ಪಾತ್ರವನ್ನು ನಿರ್ವಹಿಸಿದ್ದಾರೆ. ಇದೇ ವೇಳೆ, ಡು ಪ್ಲೆಸಿಸ್ ದೀರ್ಘಕಾಲ ದಕ್ಷಿಣ ಆಫ್ರಿಕಾದ (South Africa Captain) ನಾಯಕತ್ವವನ್ನು ವಹಿಸಿದ್ದಾರೆ. ಹೀಗಿರುವಾಗ ಸಿಎಸ್ಕೆ ಆಡಳಿತವು ಈ ಅನುಭವಿ ಆಟಗಾರನನ್ನು ನಾಯಕನನ್ನಾಗಿ ನೇಮಿಸಲು ಬಯಸುತ್ತಿದೆ.
ಇದನ್ನೂ ಓದಿ-ಮೊಹಮ್ಮದ್ ಶಮಿ ಸಮರ್ಥನೆ: ವಿರಾಟ್ ಕೊಹ್ಲಿ 10 ತಿಂಗಳ ಪುತ್ರಿಗೆ ಅತ್ಯಾಚಾರದ ಬೆದರಿಕೆ..!
2021ರಲ್ಲೂ ಅದ್ಭುತ ಪ್ರದರ್ಶನ
ಐಪಿಎಲ್ 2021ರಲ್ಲೂ ಫಾಫ್ ಡು ಪ್ಲೆಸಿಸ್ (Faf du Plessis) ಅದ್ಭುತ ಪ್ರದರ್ಶನ ನೀಡಿದ್ದಾರೆ. CSK ಪರ ಫಾಫ್ ಈ ಋತುವಿನಲ್ಲಿ ಒಟ್ಟು 633 ರನ್ ಗಳಿಸಿದ್ದಾರೆ. ಅವರು ಕೇವಲ ಎರಡು ರನ್ಗಳಿಂದ ಈ ಋತುವಿನ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಳ್ಳುವುದರಿಂದ ತಪ್ಪಿಸಿಕೊಂಡಿದ್ದಾರೆ. ಅವರ ಆರಂಭಿಕ ಜೊತೆಗಾರ ರಿತುರಾಜ್ ಗಾಯಕ್ವಾಡ್ (Rituraj Gaikwad) 635 ರನ್ಗಳೊಂದಿಗೆ ಆರೆಂಜ್ ಕ್ಯಾಪ್ ತನ್ನದಾಗಿಸಿಕೊಂಡಿದ್ದಾರೆ. ಈ ಇಬ್ಬರೂ ಆಟಗಾರರು ಸಿಎಸ್ಕೆಯನ್ನು ಅದರ ನಾಲ್ಕನೇ ಪ್ರಶಸ್ತಿ ಗೆಲುವಿನತ್ತ ಸುಲಭವಾಗಿ ಕೊಂಡೊಯ್ದಿದ್ದಾರೆ.
ಇದನ್ನೂ ಓದಿ-ವಿರಾಟ್ ಕೊಹ್ಲಿ ಹೇಳಿಕೆಗೆ ಕಪಿಲ್ ದೇವ್ ತೀವ್ರ ಅಸಮಾಧಾನ
ಧೋನಿ ನಾಯಕತ್ವದಲ್ಲಿ ಯಶಸ್ಸು ಸಾಧಿಸಲಾಗಿದೆ
ಧೋನಿ ನಾಯಕತ್ವದಲ್ಲಿ ಸಿಎಸ್ಕೆ ಸಾಕಷ್ಟು ಯಶಸ್ಸು ಸಾಧಿಸಿದೆ. ಮಾಹಿ ನಾಯಕತ್ವದಲ್ಲಿ ಸಿಎಸ್ಕೆ ಒಟ್ಟು 4 ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಇದರ ಜೊತೆಗೆ ತಂಡವು ಧೋನಿ ನಾಯಕತ್ವದಲ್ಲಿ ಒಟ್ಟು 9 ಐಪಿಎಲ್ ಫೈನಲ್ಗಳನ್ನು ಆಡಿದೆ. ಕೇವಲ 2020 ಅನ್ನು ಹೊರತುಪಡಿಸಿದರೆ, ಧೋನಿ ಅವರ ಈ ತಂಡವು ಐಪಿಎಲ್ನ ಪ್ರತಿ ಸೀಸನ್ನಲ್ಲಿ ಪ್ಲೇಆಫ್ಗೆ ಅರ್ಹತೆಯನ್ನು ಪಡೆದುಕೊಂಡಿದೆ. ಸಿಎಸ್ಕೆ 2010, 2011, 2018 ಮತ್ತು 2021ರಲ್ಲಿ ಐಪಿಎಲ್ ಟ್ರೋಫಿಗಳನ್ನು ಗೆದ್ದುಕೊಂಡಿದೆ.
ಇದನ್ನೂ ಓದಿ-T20 World Cup 2021: ಭಾರತಕ್ಕೆ ಹೀನಾಯ ಸೋಲು, ಐಪಿಎಲ್ ಬ್ಯಾನ್ ಮಾಡುವಂತೆ ಆಗ್ರಹ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.