T20 World Cup 2021: ಭಾರತಕ್ಕೆ ಹೀನಾಯ ಸೋಲು, ಐಪಿಎಲ್ ಬ್ಯಾನ್ ಮಾಡುವಂತೆ ಆಗ್ರಹ..!

ಟ್ವಿಟರ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಇಂದು ಬೆಳಗ್ಗೆಯಿಂದಲೇ ಐಪಿಎಲ್ ಬ್ಯಾನ್ ಮಾಡಬೇಕೆಂಬ ಒತ್ತಾಯಗಳು ಕೇಳಿಬರುತ್ತಿವೆ.  

Written by - Puttaraj K Alur | Last Updated : Nov 1, 2021, 01:41 PM IST
  • ಪಾಕಿಸ್ತಾನ ಬಳಿಕ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾಗೆ ಹೀನಾಯ ಸೋಲು
  • ಐಪಿಎಲ್ ಬ್ಯಾನ್ ಮಾಡುವಂತೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಆಗ್ರಹ
  • ವಿರಾಟ್ ಕೊಹ್ಲಿ ಪಡೆಯ ಹೀನಾಯ ಪ್ರದರ್ಶನ ಆಕ್ರೋಶ ವ್ಯಕ್ತಪಡಿಸುತ್ತಿರುವ ಕ್ರಿಕೆಟ್ ಪ್ರೇಮಿಗಳು
T20 World Cup 2021: ಭಾರತಕ್ಕೆ ಹೀನಾಯ ಸೋಲು, ಐಪಿಎಲ್ ಬ್ಯಾನ್ ಮಾಡುವಂತೆ ಆಗ್ರಹ..! title=
ಐಪಿಎಲ್ ಬ್ಯಾನ್ ಮಾಡುವಂತೆ ಆಗ್ರಹ

ನವದೆಹಲಿ: ಭಾನುವಾರ ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಟಿ-20 ವಿಶ್ವಕಪ್ ಟೂರ್ನಿ(T20 World Cup 2021)ಯ ಮಹತ್ವದ ಪಂದ್ಯದಲ್ಲಿ ಭಾರತವು ನ್ಯೂಜಿಲೆಂಡ್ ಎದುರು 8 ವಿಕೆಟ್ ಗಳ ಹೀನಾಯ ಸೋಲು ಕಂಡಿದೆ. ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 10 ವಿಕೆಟ್ ಗಳ ಹೀನಾಯ ಸೋಲು(India vs New Zealand) ಕಂಡಿದ್ದ ವಿರಾಟ್ ಕೊಹ್ಲಿ ಪಡೆ 2ನೇ ಪಂದ್ಯದಲ್ಲಿಯೂ ಸೋಲು ಕಂಡಿದೆ. ಅತ್ಯುತ್ತಮ ಆಟಗಾರರನ್ನು ಹೊಂದಿದ್ದರೂ ಭಾರತ ತಂಡ ಸೋಲು ಕಾಣುತ್ತಿರುವುಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಅತ್ಯುತ್ತಮ ಪ್ರದರ್ಶನ ತೋರುವಲ್ಲಿ ಕೊಹ್ಲಿ ಪಡೆ ಸಂಪೂರ್ಣ ವಿಫಲವಾಗಿದೆ. ಅನುಭವಿ ಆಟಗಾರರು ಬ್ಯಾಟಿಂಗ್ ನಲ್ಲಿ ವೈಫಲ್ಯ ಅನುಭವಿಸಿ ರನ್ ಹೊಡೆಯಲು ತಿಣುಕಾಡುತ್ತಿದ್ದರೆ, ಐಪಿಎಲ್(IPL Match) ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಬೌಲರ್ ಗಳು ಮಂಕಾಗಿದ್ದಾರೆ. ಕೂಲ್ ಕ್ಯಾಪ್ಟನ್ ಎಂ.ಎಸ್.ಧೋನಿ ಅವರ ಮಾರ್ಗದರ್ಶನವೂ ಟೀಂ ಇಂಡಿಯಾ(Team India)ಗೆ ಕೈಹಿಡಿಯುತ್ತಿಲ್ಲ. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿರುವ ಭಾರತ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಅಫ್ಘಾನಿಸ್ತಾನ ತಂಡಕ್ಕಿಂತಲೂ ಹಿಂದಿದೆ.

ಇದನ್ನೂ ಓದಿ: ICC T20 World Cup 2021: ಭಾರತದ ವಿರುದ್ಧ ಕಿವೀಸ್ ಗೆ ಎಂಟು ವಿಕೆಟ್ ಗಳ ಗೆಲುವು

ಅಭಿಮಾನಿಗಳ ಪ್ರಕಾರ ಭಾರತ ತಂಡದ ಸೆಮಿಫೈನಲ್ ಹಾದಿ ಮುಚ್ಚಿದೆ. ಏಕೆಂದರೆ ‘ಬಿ’ ಗುಂಪಿನಲ್ಲಿ ಪಾಕಿಸ್ತಾನವು ತಾನಾಡಿದ 3 ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಟಿಕೆಟ್ ಖಾತ್ರಿಪಡಿಸಿಕೊಂಡಿದೆ. ನ್ಯೂಜಿಲೆಂಡ್ ಮತ್ತು ಭಾರತ ಇನ್ನುಳಿದ 3 ಪಂದ್ಯದಗಳಲ್ಲಿ ಕ್ರಮವಾಗಿ ಅಫ್ಘಾನಿಸ್ತಾನ್, ನಮಿಬಿಯಾ, ಸ್ಕಾಟ್ಲೆಂಡ್ ವಿರುದ್ಧ ಆಡಬೇಕಿದೆ. ಈ ಪಂದ್ಯಗಳಲ್ಲಿ ನ್ಯೂಜಿಲೆಂಡ್ ಸೋತರೆ ಮಾತ್ರ ಭಾರತಕ್ಕೆ ಸೆಮಿಫೈನಲ್ ಪ್ರವೇಶಕ್ಕೆ ಅಕವಾಶ ಸಿಗುವ ಸಾಧ್ಯತೆ ಇದೆ. ಇಲ್ಲದಿದ್ದರೆ ಲೀಗ್ ಹಂತದಲ್ಲಿಯೇ ಪ್ರತಿಷ್ಠಿತ ಐಸಿಸಿ ಟೂರ್ನಿಯಿಂದ ಹೊರಬೀಳುವ ಅಪಾಯವಿದೆ.

ಐಪಿಎಲ್ ನಲ್ಲಿ ಸ್ಫೋಟಕ ಬ್ಯಾಟಿಂಗ್, ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ್ದ ಆಟಗಾರರು ವಿಶ್ವಕಪ್ ನಲ್ಲಿ ಏಕೆ ಚೆನ್ನಾಗಿ ಆಡುತ್ತಿಲ್ಲವೆಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕೊಹ್ಲಿ(Virat Kohli) ಪಡೆ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುತ್ತಿಲ್ಲ. ಹೀಗಾಗಿಯೇ ಆಡಿದ 2 ಪಂದ್ಯಗಳಲ್ಲಿ ಸೋಲು ಕಂಡಿದೆ. ಹೀಗಾಗಿ ಭಾರತ ತಂಡ ಸೆಮಿಫೈನಲ್ ಪ್ರವೇಶಿಸುವುದು ಕಷ್ಟಸಾಧ್ಯವೆಂದು ಕ್ರಿಕೆಟ್ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: T20 World Cup 2021 ಕುರಿತು ಇದುವರೆಗಿನ ಅತಿ ದೊಡ್ಡ ಭವಿಷ್ಯವಾಣಿ! ಈ ನಾಲ್ಕು ತಂಡಗಳು ಸೆಮಿಫೈನಲ್ ಹಂತಕ್ಕೆ ತಲುಪಲಿವೆಯಂತೆ!

ಐಪಿಎಲ್ ನಲ್ಲಿ ಚೆನ್ನಾಗಿ ಆಡುವ ಆಟಗಾರರು ವಿಶ್ವಕಪ್ ನಲ್ಲಿ ಏಕೆ ಆಡುತ್ತಿಲ್ಲ? ಅಲ್ಲಿ ದುಡ್ಡಿಗಾಗಿ ಆಡುವ ಆಟಗಾರರು ಇಲ್ಲಿ ದೇಶಕ್ಕಾಗಿ ಏಕೆ ಆಡುತ್ತಿಲ್ಲ? ವೆಂದು ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಐಪಿಎಲ್ ಟೂರ್ನಿಯನ್ನು ಬ್ಯಾನ್ ಮಾಡಿದರೆ ಎಲ್ಲವೂ ಸರಿಹೋಗುತ್ತದೆ. ಆಗ ಟೀಂ ಇಂಡಿಯಾ ಆಟಗಾರರು ಸರಿಯಾದ ಟ್ರ್ಯಾಕ್ ಗೆ ಬರುತ್ತಾರೆ ಅಂತಾ ಅಭಿಮಾನಿಗಳು ಹೇಳುತ್ತಿದ್ದಾರೆ. ದೇಶಕ್ಕಾಗಿ ಆಡದ ಆಟಗಾರರು ದುಡ್ಡಿಗಾಗಿ ಐಪಿಎಲ್ ನಲ್ಲಿ ಆಡುವುದು ಎಷ್ಟು ಸರಿ? ಹೀಗಾಗಿ ಬಿಸಿಸಿಐ ಐಪಿಎಲ್ ಟೂರ್ನಿ ಬ್ಯಾನ್ ಮಾಡಬೇಕು. ಮುಂದಿನ ದಿನಗಳಲ್ಲಿ ಐಪಿಎಲ್ ಆಯೋಜಿಸಬಾರದು ಎಂದು ಹೇಳುತ್ತಿದ್ದಾರೆ. ಟ್ವಿಟರ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಇಂದು ಬೆಳಗ್ಗೆಯಿಂದಲೇ ಐಪಿಎಲ್ ಬ್ಯಾನ್(Ban IPL Trends) ಮಾಡಬೇಕೆಂಬ ಒತ್ತಾಯಗಳು ಕೇಳಿಬರುತ್ತಿವೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News