ನವದೆಹಲಿ : ಬೆಳಕಿನ ಹಬ್ಬ ದೀಪಾವಳಿ (Diwali) ಹಬ್ಬ ಆರಂಭವಾಗಿದೆ. ಇಂದು ನರಕ ಚತುರ್ದಶಿ. ಈ ದಿನ, ಮನೆ ತುಂಬಾ ದೀಪವನ್ನು ಬೆಳಗುತ್ತೇವೆ. ದೀಪ ಬೆಳಗುವ ವೇಳೆ, ಮನೆಯೊಳಗಿನ ಚರಂಡಿಗಳ ಮೇಲೆ ದೀಪವನ್ನು ಬೆಳಗಿಸುವುದನ್ನು ಮರೆಯಬೇಡಿ. ವಾಸ್ತು ಪ್ರಕಾರ (Vastu Shastra) ಹೀಗೆ ಮಾಡುವುದು ಮಂಗಳಕರ ಎಂದು ಪರಿಗಣಿಸಲಾಗುತ್ತದೆ.
ಸಂಪತ್ತಿಗೂ ವರುಣ ದೇವನಿಗೂ ಇದೆ ಸಂಬಂಧ :
ವಾಸ್ತು ಶಾಸ್ತ್ರದ (Vastu Tips) ಪ್ರಕಾರ, ನೀರು ವರುಣ ದೇವನಿಗೆ ಸಂಬಂಧಿಸಿದೆ. ಆದ್ದರಿಂದಲೇ ವರುಣನ ವಾಸ ಅಂದರೆ ಸಾಗರವನ್ನು ರತ್ನಾಕರ ಎಂದು ಕರೆಯುತ್ತಾರೆ. ಈ ಕಾರಣದಿಂದಲೇ ನೀರಿನ ಹರಿವಿಗಾಗಿ ನಿರ್ಮಿಸಿರುವ ಮನೆಯ ಚರಂಡಿಗಳು (Drain) ಸದಾ ಸ್ವಚ್ಛವಾಗಿರಬೇಕು ಮತ್ತು ಅದರಲ್ಲಿ ಎಂದಿಗೂ ಕಸ ನಿಲ್ಲಬಾರದು.
ಇದನ್ನೂ ಓದಿ : ದೀಪಾವಳಿಗೆ ಹೊಸ ಪೊರಕೆ ತಂದ ನಂತರ ಈ ತಪ್ಪು ಮಾಡಬೇಡಿ, ಅದೃಷ್ಟ ಲಕ್ಷ್ಮೀ ಮುನಿಸಿಕೊಳ್ಳಬಹುದು
ಮನೆಯಲ್ಲಿ ನೀರಿನ ಚರಂಡಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು :
ವಾಸ್ತು ಪ್ರಕಾರ (Vastu Shastra), ಮನೆಯಲ್ಲಿ ಬಳಸಿರುವ ನೀರನ್ನು ಹೊರ ಹಾಕಲು ಮಾಡಿರುವ ಡ್ರೈನ್ ಗಳಿಗೂ ಆರ್ಥಿಕ ಸ್ಥಿತಿಗೂ ನೇರವಾದ ಸಂಬಂಧವಿದೆ. ಚರಂಡಿಗಳು ಸ್ವಚ್ಚವಾಗಿರದಿದ್ದರೆ, ಆ ಆರ್ಥಿಕ ಸ್ಥಿತಿಯ ಮೇಲೆ ಪ್ರಭಾವ ಬೀರುತ್ತದೆ. ಮನೆಯ ಡ್ರೈನ್ ಸ್ವಚ್ಛವಾಗಿರದಿದ್ದರೆ, ಅದು ಕುಟುಂಬದ ಆದಾಯದ (Income) ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ.
ಚರಂಡಿಗಳ ಬಳಿ ದೀಪ ಹಚ್ಚಿ:
ಧಾರ್ಮಿಕ ಗ್ರಂಥಗಳ ಪ್ರಕಾರ ನರಕ ಚತುರ್ದಶಿಯ (Naraka Chaturdashi) ದಿನದಂದು ಮನೆಯ ಚರಂಡಿಯ ಬಳಿ ದೀಪವನ್ನು ಹಚ್ಚಬೇಕು. ಇದರೊಂದಿಗೆ ಮನೆಯ ಸುತ್ತ ಮುತ್ತಲಿನ ಚರಂಡಿಗಳನ್ನು ಸದಾ ಸ್ವಚ್ಛವಾಗಿಟ್ಟುಕೊಳ್ಳಬೇಕು. ಈ ಚರಂಡಿಗಳು ಮುಚ್ಚಿಹೋಗಿದ್ದರೆ ಅವುಗಳನ್ನು ಸ್ವಚ್ಛಗೊಳಿಸಬೇಕು. ಹೀಗೆ ಮಾಡಿದರೆ ಮಹಾಲಕ್ಷ್ಮೀ (Godess Lakshmi) ಸಂತೋಷಪಡುತ್ತಾಳೆ ಮತ್ತು ವರ್ಷವಿಡೀ ಕುಟುಂಬವನ್ನು ಹರಸುತ್ತಾಳೆ.
ಇದನ್ನೂ ಓದಿ : Tulsi Leaves: ಈ ಸಮಸ್ಯೆ ಇರುವವರು ತಪ್ಪಿಯೂ ತುಳಸಿ ಎಲೆಯನ್ನು ತಿನ್ನಲೇಬಾರದು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ