ನವದೆಹಲಿ : ಯಾವುದೇ ಹೂಡಿಕೆ ಮಾಡುವ ಮುನ್ನ ನಮ್ಮ ಹಣ ಯೋಜನೆಯಲ್ಲಿ ಎಷ್ಟರ ಮಟ್ಟಿಗೆ ಸುರಕ್ಷಿತವಾಗಿರಲಿದೆ ಎನ್ನುವುದನ್ನು ಪರಿಶೀಲಿಸಿಕೊಳ್ಳಬೇಕು. ಭವಿಷ್ಯಕ್ಕಾಗಿ ಹೂಡಿವ ಹಣ ಸುರಕ್ಷಿತ ಸ್ಥಳದಲ್ಲಿದ್ದರೆ ನೆಮ್ಮದಿ. ಹೌದು ಹೂಡಿಕೆ ಮಾಡುವಾಗ (Investment), ಕಡಿಮೆ ಅಪಾಯವಿರಬೇಕು ಅಧಿಕ ಆದಾಯ ಬರಬೇಕು ಅಂಥಹ ಯೋಜನೆಗಳನ್ನು ನೋಡಿ, ಪರಿಶೀಲಿಸಿ ಹೂಡಿಕೆ ಮಾಡುವುದು ಒಳ್ಳೆಯದು. ಇನ್ನು ಈಕ್ವಿಟಿ ಮಾರುಕಟ್ಟೆಯಲ್ಲಿ ಅಪಾಯವು ಹೆಚ್ಚಿರುವುದರಿಂದ, ಆದಾಯವು ಇತರ ಹೂಡಿಕೆಗಳಿಗಿಂತ ಹೆಚ್ಚಾಗಿರುತ್ತದೆ. ಆದರೆ, ಅಪಾಯಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಎಲ್ಲರಿಗೂ ಇರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಉತ್ತಮ ಲಾಭವಿರುವಲ್ಲಿ ಹೂಡಿಕೆ ಮಾಡಲು ಬಯಸುವುದಾದರೆ, ಪೋಸ್ಟ್ ಆಫೀಸ್ (Post office scheme) ಉತ್ತಮ ಆಯ್ಕೆಯಾಗಿರುತ್ತದೆ.
ಸಿಗಲಿದೆ 35 ಲಕ್ಷ :
ಪೋಸ್ಟ್ ಆಫೀಸ್ ಸಣ್ಣ ಉಳಿತಾಯ (Post office investment scheme) ಯೋಜನೆಗಳು ಎಂದಿಗೂ ಉತ್ತಮ ಆಯ್ಕೆಯಾಗಿರುತ್ತದೆ. ಇದರಲ್ಲಿ ಅಪಾಯದ ಅಂಶವೂ ಕಡಿಮೆ ಮತ್ತು ಅದೇ ಸಮಯದಲ್ಲಿ ಆದಾಯವೂ ಉತ್ತಮವಾಗಿರುತ್ತದೆ. ಅಪಾಯವು ಅತ್ಯಲ್ಪವಾಗಿರುವ ಮತ್ತು ಉತ್ತಮವಾದ ಆದಾಯವನ್ನು ಹೊಂದಿರುವ ಹೂಡಿಕೆ ಎಂದರೆ 'ಗ್ರಾಮ ಸುರಕ್ಷಾ ಯೋಜನೆ (Grama suraksha scheme). ಈ ಯೋಜನೆಯಲ್ಲಿ, ಪ್ರತಿ ತಿಂಗಳು 1500 ರೂಪಾಯಿಗಳನ್ನು ಠೇವಣಿ ಮಾಡಬೇಕು. ಈ ಮೊತ್ತವನ್ನು ನಿಯಮಿತವಾಗಿ ಠೇವಣಿ ಮಾಡುತ್ತಾ ಬಂದರೆ ಮುಂದೆ, 31 ರಿಂದ 35 ಲಕ್ಷಗಳ ಲಾಭ ಸಿಗಲಿದೆ.
ಇದನ್ನೂ ಓದಿ: 7th Pay Commission : ಈ ಕೇಂದ್ರ ನೌಕರರಿಗೆ ಗುಡ್ ನ್ಯೂಸ್! DA ಶೇ.12 ರಷ್ಟು ಹೆಚ್ಚಳ, ಹೀಗಾಗಿ ಹೆಚ್ಚಾಗಲಿದೆ ಸಂಬಳ!
ಹೂಡಿಕೆಯ ನಿಯಮಗಳು ಇಲ್ಲಿವೆ
- 19 ರಿಂದ 55 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
-ಈ ಯೋಜನೆಯಡಿಯಲ್ಲಿ ಕನಿಷ್ಠ ವಿಮಾ ಮೊತ್ತವು 10,000 ರಿಂದ 10 ಲಕ್ಷ ರೂವಾಗಿರುತ್ತದೆ.
-ಈ ಯೋಜನೆಯ ಪ್ರೀಮಿಯಂ ಪಾವತಿಯನ್ನು (premium payment) ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕವಾಗಿ ಮಾಡಬಹುದು.
-ಪ್ರೀಮಿಯಂ ಪಾವತಿಸಲು 30 ದಿನಗಳ ಗ್ರೇಸ್ ಅವಧಿಯನ್ನು ಪಡೆಯುತ್ತೀರಿ.
-ಈ ಯೋಜನೆಯಲ್ಲಿ ಸಾಲವನ್ನು ಸಹ ತೆಗೆದುಕೊಳ್ಳಬಹುದು.
-ಈ ಸ್ಕೀಮ್ (post office scheme) ತೆಗೆದುಕೊಂಡ 3 ವರ್ಷಗಳ ನಂತರವೂ ನೀವು ಅದನ್ನು ಸರೆಂಡರ್ ಮಾಡಬಹುದು. ಆದರೆ ಆಗ ಯಾವುದೇ ಪ್ರಯೋಜನಗಳು ಸಿಗುವುದಿಲ್ಲ .
ಇದನ್ನೂ ಓದಿ : Gold Price : ಮಾರುಕಟ್ಟೆಯಲ್ಲಿ ಭರ್ಜರಿ ಮಾರಾಟವಾಗುತ್ತಿದೆ ಚಿನ್ನ! ಒಂದೇ ದಿನದಲ್ಲಿ ಎಷ್ಟು ಟನ್ ಗೊತ್ತಾ?
ಯೋಜನೆಯ ಲಾಭ ಏನು ?
ಒಬ್ಬ ವ್ಯಕ್ತಿಯು 19 ನೇ ವಯಸ್ಸಿನಲ್ಲಿ ಈ ಯೋಜನೆಯಲ್ಲಿ ಹೂಡಿಕೆ (investment) ಮಾಡಿ 10 ಲಕ್ಷ ರೂಪಾಯಿಗಳ ಪಾಲಿಸಿಯನ್ನು ಖರೀದಿಸಿದರೆ, ಅವನ ಮಾಸಿಕ ಪ್ರೀಮಿಯಂ 55 ವರ್ಷಗಳಿಗೆ 1515 ರೂ. 58 ವರ್ಷಕ್ಕೆ ರೂ. 1463 ಮತ್ತು 60 ವರ್ಷಕ್ಕೆ ರೂ. 1411 ಆಗಿರುತ್ತದೆ. ಪಾಲಿಸಿ ಖರೀದಿದಾರರು 55 ವರ್ಷಗಳಿಗೆ 31.60 ಲಕ್ಷ ರೂ., 58 ವರ್ಷಗಳಿಗೆ ರೂ. 33.40 ಲಕ್ಷ ಮತ್ತು 60 ವರ್ಷಗಳಿಗೆ ರೂ. 34.60 ಲಕ್ಷದ ಮೆಚುರಿಟಿ ಲಾಭವನ್ನು ಪಡೆಯುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ