ನವದೆಹಲಿ: WhatsApp ಪ್ರಪಂಚದ ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿದೆ. ಇಂದು ಪ್ರತಿಯೊಬ್ಬರೂ WhatsApp ಬಳಸುತ್ತಾರೆ. WhatsApp ಅನೇಕ ವಿಶಿಷ್ಟ ವೈಶಿಷ್ಟ್ಯಗಳನ್ನು ನೀಡುತ್ತಿದ್ದು, ಇವು ಬಳಕೆದಾರರಿಗೆ ತುಂಬಾ ಇಷ್ಟವಾಗುತ್ತದೆ. ಅಂತಹ ಒಂದು ವೈಶಿಷ್ಟ್ಯವೆಂದರೆ WhatsApp ನ ಸ್ಟೇಟಸ್. ಇದಕ್ಕೆ ಸಂಬಂಧಿಸಿದ ಅದ್ಭುತವಾದ ಟ್ರಿಕ್ ಬಗ್ಗೆ ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಇದರ ಸಹಾಯದಿಂದ ನೀವು ಬೇರೋಬ್ಬರ WhatsApp ಸ್ಟೇಟಸ್ ಅನ್ನು ಸುಲಭವಾಗಿ ಡೌನ್ಲೋಡ್ ಮಾಡಬಹುದು.
WhatsAppನ ಸ್ಟೇಟಸ್ ವೈಶಿಷ್ಟ್ಯ
ವಾಟ್ಸಾಪ್ನ ಸ್ಟೇಟಸ್(WhatsApp Status) ವೈಶಿಷ್ಟ್ಯದಲ್ಲಿ ಬಳಕೆದಾರರು ತಮ್ಮ ಆಯ್ಕೆಯ ಅಥವಾ ಇಷ್ಟವಾದ ಫೋಟೋಗಳು ಮತ್ತು ವಿಡಿಯೋಗಳನ್ನು ಹಾಕಬಹುದು. ಈ ಸ್ಟೇಟಸ್ ಅನ್ನು ನಿಮ್ಮ ಸಂಪರ್ಕದಲ್ಲಿರುವ(Contact list)ಎಲ್ಲಾ ಜನರು ನೋಡಬಹುದು. ಈ ಸ್ಟೇಟಸ್ 24 ಗಂಟೆಗಳವರೆಗೆ ಮಾತ್ರ ಲಭ್ಯವಿರುತ್ತದೆ. ಬಳಿಕ ಅದು ತನ್ನಿಂದ ತಾನೇ ಮರೆಯಾಗಿಬಿಡುತ್ತದೆ. ಈ ಸ್ಟೇಟಸ್ ಅನ್ನು ವೀಕ್ಷಿಸುವವರು ಪ್ರತ್ಯುತ್ತರ ಅಂದರೆ ಕಾಮೆಂಟ್ ಮಾಡಬಹುದು. ಆದರೆ ನೀವು ಅದನ್ನು ಸೇವ್ ಅಥವಾ ಡೌನ್ಲೋಡ್ ಮಾಡಲು ಸಾಧ್ಯವಿಲ್ಲ.
ಇದನ್ನೂ ಓದಿ: Knowledge Story: ಅತ್ಯಂತ ಹೆಚ್ಚು ಪ್ರಯೋಜನಕಾರಿಯಾಗಿದೆ Super App, ಇಲ್ಲಿದೆ ಅದರ ವಿಶೇಷತೆ.
ಬೇರೊಬ್ಬರ WhatsApp ಸ್ಟೇಟಸ್ ಹೇಗೆ ಶೇರ್ ಮಾಡುವುದು?
ನೀವು ಬೇರೊಬ್ಬರ WhatsApp ಸ್ಟೇಟಸ್ (status) ಅನ್ನು ಶೇರ್ ಮಾಡಲು ಬಯಸಿದರೆ, WhatsAppನಲ್ಲಿ ಅಂತಹ ತಂತ್ರಜ್ಞಾನವಿಲ್ಲ. ಫೋಟೋಗಳನ್ನು ಹಂಚಿಕೊಳ್ಳುವುದು ಸುಲಭ. ಏಕೆಂದರೆ ನೀವು ಅವುಗಳನ್ನು ಸುಲಭವಾಗಿ ಸ್ಕ್ರೀನ್ಶಾಟ್ ತೆಗೆದುಕೊಂಡು ಯಾರಿಗಾದರೂ ಕಳುಹಿಸಬಹುದು. ಆದರೆ ಯಾರಾದರೂ ವಾಟ್ಸಾಪ್ ಸ್ಟೇಟಸ್ನಲ್ಲಿ ವಿಡಿಯೋವನ್ನು ಹಾಕಿದ್ದರೆ ಅದನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. ವಾಟ್ಸಾಪ್ ಸ್ಟೇಟಸ್ನಲ್ಲಿರುವ ವಿಡಿಯೋವನ್ನು ಸೇವ್ ಮಾಡಲು ಸಾಧ್ಯವಾಗುವಂತಹ ಟ್ರಿಕ್ ಇದೆ.
ವಿಡಿಯೋವನ್ನು ಹೇಗೆ ಸೇವ್ ಮಾಡುವುದು..?
WhatsApp ಸ್ಟೇಟಸ್ ನಲ್ಲಿರುವ ವಿಡಿಯೋವನ್ನು ಹಂಚಿಕೊಳ್ಳಲು ಮೊದಲು ನಿಮ್ಮ Android ಸ್ಮಾರ್ಟ್ಫೋನ್ನಲ್ಲಿ Google ಫೈಲ್ಸ್ ಹೆಸರಿನ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬೇಕು. ನಂತರ ಈ ಅಪ್ಲಿಕೇಶನ್ ಒಪನ್ ಮಾಡಿ. ಐಒಎಸ್ ಬಳಕೆದಾರರು ಯಾವುದೇ ಇತರ ಫೈಲ್ ಮ್ಯಾನೇಜರ್ ಅಪ್ಲಿಕೇಶನ್ ಅನ್ನು ಸಹ ಬಳಸಬಹುದು. Google ಫೈಲ್ಗಳ ಅಪ್ಲಿಕೇಶನ್ನಲ್ಲಿ ಮೇಲಿನ ಎಡಭಾಗದಲ್ಲಿ ಮೆನು ಕಾಣಿಸಿಕೊಳ್ಳುತ್ತದೆ. ಅದನ್ನು ತೆರೆಯಿರಿ, ಸೆಟ್ಟಿಂಗ್ಗಳಿಗೆ ಹೋಗಿ ಮತ್ತು ‘Show hidden files’ ಆಯ್ಕೆಯನ್ನು ಆನ್ ಮಾಡಿ.
ಇದನ್ನೂ ಓದಿ: BSNL ಭರ್ಜರಿ ಆಫರ್ , ರೀಚಾರ್ಜ್ ಮೇಲೆ ಸಿಗುತ್ತಿದೆ 90% ಡಿಸ್ಕೌಂಟ್
ಇದರ ನಂತರ ನಿಮ್ಮ ಸಾಧನದ ಫೈಲ್ ಮ್ಯಾನೇಜರ್ಗೆ ಹೋಗಿ. Internal Storageನ ಆಯ್ಕೆಯನ್ನು ಕ್ಲಿಕ್ ಮಾಡಿ, ಬಳಿಕ WhatsApp ಅನ್ನು ಆಯ್ಕೆ ಮಾಡಿ. ನಂತರ Media ಮತ್ತು ನಂತರ ಸ್ಟೇಟಸ್ ಆಯ್ಕೆಯನ್ನು ಆರಿಸಿ. ಈ ರೀತಿಯಾಗಿ ನೀವು ಯಾವುದೇ ಸ್ಟೇಟಸ್ ಅನ್ನು ನೋಡಿದರೂ, ಅದು ನಿಮ್ಮ ಫೋಲ್ಡರ್ನಲ್ಲಿ ಗೋಚರಿಸುತ್ತದೆ. ನಂತರ ನೀವು ಆ ವಿಡಿಯೋವನ್ನು ಫೋಲ್ಡರ್ನಿಂದ ಸೇವ್ ಮಾಡಬಹುದು ಅಥವಾ ಡೌನ್ಲೋಡ್ ಮಾಡಬಹುದು. ಬಳಿಕ ಅದನ್ನು ಯಾರೊಂದಿಗಾದರೂ ಹಂಚಿಕೊಳ್ಳಬಹುದು.
ಈ ರೀತಿ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡುವ ಮೂಲಕ ಬೇರೋಬ್ಬರು ತಮ್ಮ ಮೊಬೈಲ್ ನಲ್ಲಿ ಇಟ್ಟಿರುವ ಸ್ಟೇಟಸ್ ಅನ್ನು ನೀವು ಸೇವ್ ಮಾಡಬಹುದು. ನೀವು ಬಯಸಿದರೆ ಅದನ್ನು ನಿಮ್ಮ ಇತರ ಸ್ನೇಹಿತರು ಅಥವಾ ಸಂಬಂಧಿಕರಿಗೂ ಕಳುಹಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ