ನವದೆಹಲಿ. World's Costliest Watches - ಭಾರತ ಕ್ರಿಕೆಟ್ ತಂಡದ (Indian Cricket Team) ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕಳಪೆ ಫಾರ್ಮ್ ನಲ್ಲಿದ್ದಾರೆ. ಟಿ20 ವಿಶ್ವಕಪ್ನಲ್ಲಿಯೂ ಅವರ ಪ್ರದರ್ಶನ ನೀರಸವಾಗಿತ್ತು. ಇದರಿಂದಾಗಿ ಅವರು ಟೀಕಾಕಾರರ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ಹಾರ್ದಿಕ್ ಪಾಂಡ್ಯ ಇದೀಗ ಮತ್ತೆ ಚರ್ಚೆಯಲ್ಲಿದ್ದಾರೆ, ಆದರೆ ಈ ಬಾರಿ ಕಳಪೆ ಫಾರ್ಮ್ ಕಾರಣ ಅಲ್ಲ. ಅವರ ದುಬಾರಿ ವಾಚ್ (Hardik Pandya Watch) ಕಾರಣ. ಟಿ20 ವಿಶ್ವಕಪ್ ಆಡಿ ದುಬೈನಿಂದ ಮುಂಬೈಗೆ ವಾಪಸಾದ ಹಾರ್ದಿಕ್ ಪಾಂಡ್ಯ, ಅವರಿಂದ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು 2 ಐಷಾರಾಮಿ ವಾಚ್ ಗಳನ್ನು ಜಪ್ತಿ ಮಾಡಿದ್ದರೆ ಎನ್ನಲಾಗಿದೆ. ವಾಚ್ನ ಬೆಲೆ 5 ಕೋಟಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿದೆ. ಆದರೆ ಕ್ರಿಕೆಟಿಗ ಟ್ವಿಟರ್ ನಲ್ಲಿ ವಾಚ್ ಬೆಲೆ 1.5 ಕೋಟಿ (Hardik Pandya Watch Price) ಎಂದು ಪೋಸ್ಟ್ ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ ಮಾತ್ರವಲ್ಲ, ದುಬಾರಿ ವಾಚ್ಗಳನ್ನು ಇಷ್ಟಪಡುವ ಅನೇಕ ಸೆಲೆಬ್ರಿಟಿಗಳಿದ್ದಾರೆ. ವಿಶ್ವದ 5 ಅತ್ಯಂತ ದುಬಾರಿ ವಾಚ್ಗಳ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.
1. Graff Diamonds Hallucination
ಗ್ರಾಫ್ ಡೈಮಂಡ್ಸ್ ಹ್ಯಾಲೂಸಿನೆಶನ್ ಬೆಲೆ $ 55 ಮಿಲಿಯನ್ (ರೂ. 400 ಕೋಟಿಗೂ ಹೆಚ್ಚು). ಇದು ವಿಶ್ವದ ಅತ್ಯಂತ ದುಬಾರಿ ವಾಚ್ ಎಂದು ಪರಿಗಣಿಸಲಾಗಿದೆ. ಇಡೀ ಗಡಿಯಾರವನ್ನು ಅಪರೂಪದ 110 ಕ್ಯಾರೆಟ್ ವಜ್ರಗಳಿಂದ ಅಲಂಕರಿಸಲಾಗಿದೆ.
2.Graff Diamonds The Fascination
ಗ್ರಾಫ್ ಡೈಮಂಡ್ನ ದಿ ಫೆಸಿನೆಶನ್ ವಾಚ್ ವಿಶ್ವದ ಎರಡನೇ ಅತ್ಯಂತ ದುಬಾರಿ ವಾಚ್ ಆಗಿದೆ. ಅಮೂಲ್ಯವಾದ ಹರಳುಗಳನ್ನು ಹೊದಿಸಿದ ಮೇರುಕೃತಿ ಗಡಿಯಾರ ಇದು. ಇದರ ಡಯಲ್ ಅನ್ನು ಅಪರೂಪದ 38.13 ಕ್ಯಾರೆಟ್ D ಫ್ಲೋಲೆಸ್ ಪೇರಳೆ-ಆಕಾರದ ವಜ್ರದಿಂದ ತಯಾರಿಸಲಾಗಿದೆ. ಇದನ್ನು ಗ್ರಾಫ್ ಹಾಗೂ ಪಾಲೀಷ್ ಮೂಲಕ ಕಟರಿಸಲಾಗಿದೆ. ಗ್ರಾಫ್ ಡೈಮಂಡ್ಸ್ ದಿ ಫ್ಯಾಸಿನೇಶನ್ನ ಬೆಲೆ $ 40 ಮಿಲಿಯನ್ (ಸುಮಾರು 297 ಕೋಟಿ ರೂ.)
3. Chopard 201-Carat Watch
Chopard 201-Carat Watch ಕೂಡ ಅತ್ಯಂತ ದುಬಾರಿ ವಾಚ್ ಗಳಲ್ಲಿ ಒಂದು. ಈ ಕಲರ್ಫುಲ್ ವಾಚ್ ವಿಭಿನ್ನ 874 ಹೈ ರೇಂಜ್ ರತ್ನಗಳಿಂದ ಕವರ್ ಮಾಡಲಾಗಿದೆ. ಇದರ ಮಧ್ಯದಲ್ಲಿ ಒಟ್ಟು ಮೂರು ರತ್ನಗಳಿದ್ದು, ಮೂರು ರತ್ನಗಳು ಹಾರ್ಟ್ ಆಕಾರ ಹೊಂದಿವೆ. Chopard 201-Carat Watch ಬೆಲೆ 25 ಮಿಲಿಯನ್ ಡಾಲರ್, ಅಂದರೆ ಭಾರತೀಯ ರೂ.ಗಳಲ್ಲಿ ಸುಮಾರು 186 ಕೋಟಿ ರೂ.ಗಳಾಗಿದೆ.
4. Jacob & Co. Billionaire Watch
Jacob & Co. Billionaire Watch ಅಮೆರಿಕಾದ ಖ್ಯಾತ ಬಾಕ್ಸರ್ Floyd Mayweather ರಂತಹ ಕೊಟ್ಯಾಧೀಷರು ಧರಿಸುತ್ತಾರೆ. ಗಡಿಯಾರವನ್ನು 260-ಕ್ಯಾರೆಟ್ ಪಚ್ಚೆಯ ಆಕಾರದ ವಜ್ರದೊಂದಿಗೆ ಹೊಂದಿಸಲಾಗಿದೆ. ಅದರ ಕೇಸ್ ಅನ್ನು 18K ಬಿಳಿ ಚಿನ್ನದಿಂದ ತಯಾರಿಸಲಾಗುತ್ತದೆ.Jacob & Co. Billionaire Watchನ ಬೆಲೆ $ 18 ಮಿಲಿಯನ್ (ರೂ. 139 ಕೋಟಿ).
5. Patek Philippe Henry Graves Supercomplication
Patek Philippe Henry Graves Supercomplication ಇದು ವಿಶ್ವದ ಅತ್ಯಂತ ಕ್ಲಿಷ್ಟ ಗಡಿಯಾರಗಳಲ್ಲಿ ಒಂದು. ಈ ಪಾಕೆಟ್ ವಾಚ್ ತಯಾರಿಸಲು ಒಟ್ಟು 8 ವರ್ಷಗಳು ಸಂದಿವೆ. ಇದಾರೆ ಬೆಲೆ 24 ಮಿಲಿಯನ್ ಡಾಲರ್ (178 ಕೋಟಿ ರೂ.ಗಳು)