ವರದಿಯ ಪ್ರಕಾರ, ಈ ವರ್ಷದ ಆಗಸ್ಟ್ನಲ್ಲಿ ಅಫ್ಘಾನಿಸ್ತಾನದ ತಾಲಿಬಾನ್ ಆಕ್ರಮಣದ ನಂತರ, ಶರ್ಬತ್ ಗುಲಾ ದೇಶವನ್ನು ತೊರೆಯಲು ಸಹಾಯವನ್ನು ಕೋರಿದ್ದರು.
ನವದೆಹಲಿ : ತನ್ನ ಹಸಿರು ಕಣ್ಣುಗಳಿಂದಲೇ ವಿಶ್ವದೆಲ್ಲೆಡೆ ಗಮನ ಸೆಳೆದ ಅಫ್ಘಾನಿಸ್ತಾನದ ಹುಡುಗಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ತಾಲಿಬಾನ್ ಕ್ರೌರ್ಯದಿಂದ ಈ ಹುಡುಗಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಾಪಸಾದ ಬಳಿಕ ಪರಿಸ್ಥಿತಿ ಹದಗೆಟ್ಟಿದೆ. ಈ ನಡುವೆ ಶರ್ಬತ್ ಗುಲಾ ಎಂಬ ಮಹಿಳೆಗೆ ಇಟಲಿ ಸುರಕ್ಷಿತ ಆಶ್ರಯ ನೀಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ವರದಿಯ ಪ್ರಕಾರ, ಈ ವರ್ಷದ ಆಗಸ್ಟ್ನಲ್ಲಿ ಅಫ್ಘಾನಿಸ್ತಾನದ ತಾಲಿಬಾನ್ ಆಕ್ರಮಣದ ನಂತರ, ಶರ್ಬತ್ ಗುಲಾ ದೇಶವನ್ನು ತೊರೆಯಲು ಸಹಾಯವನ್ನು ಕೋರಿದ್ದರು. ತಾಲಿಬಾನಿಗಳಿಂದ ತಪ್ಪಿಸಿಕೊಂಡಿರುವ ಶರ್ಬತ್ ಈಗ ಇಟಲಿಯಲ್ಲಿ ಆಶ್ರಯ ಪಡೆದಿದ್ದಾನೆ.
ಶರ್ಬತ್ ಗುಲಾ ಅವರ ಫೋಟೋವನ್ನು 1985 ರಲ್ಲಿ ನ್ಯಾಷನಲ್ ಜಿಯಾಗ್ರಫಿಕ್ ಮುಖಪುಟದಲ್ಲಿ ಮುದ್ರಿಸಲಾಯಿತು. ಪಾಕಿಸ್ತಾನದ ನಿರಾಶ್ರಿತರ ಶಿಬಿರದಲ್ಲಿ ವಾಸಿಸುತ್ತಿದ್ದ ಶರ್ಬತ್ ಕೇವಲ 12 ವರ್ಷ ವಯಸ್ಸಿನವರಾಗಿದ್ದರು. ಹಸಿರು ಕಣ್ಣುಗಳ ಚಿತ್ರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು.
ಅಮೆರಿಕದ ಛಾಯಾಗ್ರಾಹಕ ಸ್ಟೀವ್ ಮೆಕ್ಕ್ಯುರಿ ಅವರು ಪಾಕಿಸ್ತಾನ-ಅಫ್ಘಾನ್ ಗಡಿಯಲ್ಲಿರುವ ನಿರಾಶ್ರಿತರ ಶಿಬಿರದಲ್ಲಿ ವಾಸಿಸುತ್ತಿರುವ ಶರ್ಬತ್ ಗುಲಾ ಅವರ ಚಿತ್ರವನ್ನು ತೆಗೆದಿದ್ದಾರೆ.
ನಕಲಿ ದಾಖಲೆಗಳ ಆಧಾರದ ಮೇಲೆ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದ ಶರ್ಬತ್ ಗುಲಾ ಅವರನ್ನು 2016 ರಲ್ಲಿ ಬಂಧಿಸಲಾಗಿತ್ತು. ಇದರ ನಂತರ ಅವರನ್ನು ಮತ್ತೆ ಅಫ್ಘಾನಿಸ್ತಾನಕ್ಕೆ ಕಳುಹಿಸಲಾಯಿತು.
ಶರ್ಬತ್ ಗುಲಾ ಅವರ ಪತಿ ನಿಧನರಾಗಿದ್ದು, ಅವರಿಗೆ 4 ಮಕ್ಕಳಿದ್ದಾರೆ. ತಾಲಿಬಾನ್ ವಶಪಡಿಸಿಕೊಂಡ ನಂತರ ಶರ್ಬತ್ ಅವರನ್ನು ಅಫ್ಘಾನಿಸ್ತಾನದಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಇಟಾಲಿಯನ್ ಸರ್ಕಾರ ಗುರುವಾರ ತಿಳಿಸಿದೆ.