ವಾಷಿಂಗ್ಟನ್: Chance To Become Crorepati - ನೀವೂ ಕೂಡ ಕ್ಷಣಾರ್ಧದಲ್ಲಿ ಮಿಲಿಯನೇರ್ ಆಗುವ ಕನಸನ್ನು ನನಸಾಗಿಸಲು ಬಯಸುತ್ತಿದ್ದರೆ, ಈ ಸುದ್ದಿ ಕೇವಲ ನಿಮಗಾಗಿ. ಯುಎಸ್ (USA) ಮೂಲದ ಕಂಪನಿಯೊಂದು ತಮ್ಮ ಮುಖವನ್ನು ತಮ್ಮ ಮುಖವನ್ನು ಬಳಸಿಕೊಳ್ಳಲು ಅವಕಾಶ ನೀವುವವರಿಗೆ 1.5 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ. ನಿಮ್ಮ ಒಪ್ಪಂದ ಮುಗಿದ ತಕ್ಷಣ, ಈ ಮೊತ್ತ ನಿಮ್ಮ ಖಾತೆಗೆ ಬಂದು ತಲುಪಲಿದೆ.
ರೋಬೋಟ್ ಗೆ ನಿಮ್ಮ ಮುಖ ಬಳಸಲಾಗುವುದು
ಡೈಲಿ ಸ್ಟಾರ್ ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ನ್ಯೂಯಾರ್ಕ್‌ನಲ್ಲಿ (New York) ರೋಬೋಟ್ ತಯಾರಕ ಪ್ರೊಮೊಬೋಟ್ (Promobot) ಹೊಸ ಯೋಜನೆಯೊಂದರ ಮೇಲೆ ಕೆಲಸ ಮಾಡುತ್ತಿದೆ. ಅದು ತನ್ನ ರೋಬೋಟ್‌ಗೆ ಮಾನವ ಮುಖವನ್ನು ಹಾಕಲು ಬಯಸುತ್ತಿದೆ. 2023 ರಿಂದ ಮನುಷ್ಯನಂತೆ ಕಾಣುವ ಹೊಸ ರೋಬೋಟ್ ಕೆಲಸ ಮಾಡಲು ಆರಂಭಿಸಲಿವೆ ಎಂದು ಪ್ರೊಮೊಬೋಟ್ ಕಂಪನಿ ಹೇಳಿದೆ. ಇದಕ್ಕಾಗಿ ರೋಬೋಗೆ ಮಾನವ ಮುಖವನ್ನು ಹಾಕುವ ಯೋಜನೆಯನ್ನು ಕಂಪನಿ ಹೊಂದಿದೆ. ಈ ರೋಬೋಟ್ ಅನ್ನು ನಂತರ ಹೋಟೆಲ್‌ಗಳು, ಶಾಪಿಂಗ್ ಮಾಲ್‌ಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ಪರ್ಯಾಯವಾಗಿ ನಿಯೋಜಿಸಲಾಗುವುದು.
ವರದಿಯ ಪ್ರಕಾರ, ಕಳೆದ 2 ವರ್ಷಗಳಿಂದ ಮಾರುಕಟ್ಟೆಯಲ್ಲಿ ಮಾನವ ಮಾದರಿಯ ರೋಬೋಟ್‌ಗಳನ್ನು (Robot) ತಯಾರಿಸಿ ಮಾರಾಟ ಮಾಡುವ ಕೆಲಸ ಮಾಡುತ್ತಿರುವುದಾಗಿ ಕಂಪನಿ ಹೇಳಿಕೊಂಡಿದೆ. ಆದರೆ ಈಗ ಹೊಸ ಯೋಜನೆ ಆರಂಭಿಸಬೇಕು ಎಂಬುದು ಹೊಸ ಗ್ರಾಹಕರ ಬೇಡಿಕೆಯಾಗಿದೆ. ಈ ಬಾರಿ ರೋಬೋಟ್‌ಗೆ ನಿಜವಾದ ಮನುಷ್ಯನ ಮುಖವನ್ನು ಅಳವಡಿಸಬೇಕು ಮತ್ತು ಹಾಗೆ ಮಾಡಲು ಆ ವ್ಯಕ್ತಿಯಿಂದ ಅಧಿಕೃತ ಅನುಮತಿಯನ್ನು ಪಡೆಯಬೇಕು ಎಂದು ಕ್ಲೈಂಟ್ ಹೇಳುತ್ತಾರೆ.
ಒಂದೂವರೆ ಕೋಟಿ ರೂಪಾಯಿ ಬಹುಮಾನ ಸಿಗಲಿದೆ
ಗ್ರಾಹಕರ ಈ ಬೇಡಿಕೆಯನ್ನು ಈಡೇರಿಸಲು ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ತಮ್ಮ ಮುಖವನ್ನು ಬಳಸಲು ಯಾರು ಅವಕಾಶ ನೀಡುತ್ತಾರೋ ಅವರಿಗೆ 1.5 ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಕಂಪನಿ ತಿಳಿಸಿದೆ. ಈ ಯೋಜನೆಯು ಪುರುಷರು ಮತ್ತು ಮಹಿಳೆಯರಿಗೆ ಮುಕ್ತವಾಗಿದೆ. ಯಾವುದೇ ವಯಸ್ಸಿನವರು ಇದಕ್ಕೆ ಅರ್ಜಿ ಸಲ್ಲಿಸಬಹುದು. ಜನರ ಅರ್ಜಿಗಳನ್ನು ಸ್ವೀಕರಿಸಿದ ನಂತರ, ಅವುಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಆಯ್ಕೆ ಯಾಗುವ ವ್ಯಕ್ತಿಯ ಜೊತೆಗೆ ಗುತ್ತಿಗೆಗೆ ಸಂಬಂಧಿಸಿದ ಔಪಚಾರಿಕತೆಯನ್ನು ಪೂರ್ಣಗೊಳಿಸಲಾಗುವುದು ಎಂದು ಕಂಪನಿ ಹೇಳಿದೆ.
ಇದಕ್ಕಾಗಿ ಸಾಕಷ್ಟು ದಯೆ ಹೊಂದಿರುವ ಹಾಗೂ ಸ್ನೇಹಪರವಾಗಿ ಕಾಣುವ ಮುಖದ ಅವಶ್ಯಕತೆ ಇದೆ ಎಂದು ಕಂಪನಿ ಹೇಳಿದೆ. ನಿಮ್ಮ ಮುಖವೂ ಇದೇ ಆಗಿದ್ದರೆ ನೀವು ಈ ಕೊಡುಗೆಯ ಲಾಭವನ್ನು ಪಡೆಯಬಹುದು. ಇದಕ್ಕಾಗಿ ನೀವು ಕಂಪನಿಯನ್ನು ಸಂಪರ್ಕಿಸುವ ಮೂಲಕ ನಿಮ್ಮ ಅರ್ಜಿಯನ್ನು ಕಳುಹಿಸಬಹುದು. ನಿಮ್ಮ ಅದೃಷ್ಟ ನಿಮಗೆ ಒಲವು ತೋರಿದರೆ, ನೀವು ಕ್ಷಣಾರ್ಧದಲ್ಲಿ ಮಿಲಿಯನೇರ್ ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.
ಇದನ್ನೂ ಓದಿ-ವ್ಯಕ್ತಿ ಮೃತಪಟ್ಟ ನಂತರ Google ಖಾತೆಯ ಡೇಟಾ ಏನಾಗುತ್ತದೆ? ಉತ್ತರ ಇಲ್ಲಿದೆ ನೋಡಿ...
43 ದೇಶಗಳಲ್ಲಿ ರೋಬೋಟ್‌ಗಳನ್ನು ಬಳಸಲಾಗುತ್ತಿದೆ
ಯಾವ ವ್ಯಕ್ತಿಯ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗುವುದು ಆ ವ್ಯಕ್ತಿಯ ಮುಖಚರ್ಯೆ ಹೊಂದಿರುವ ರೋಬೋಟ್ ಅನ್ನು ಉತ್ತರ ಅಮೆರಿಕ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ಬಳಸಲಾಗುವುದು ಎಂದು ಕಂಪನಿ ಹೇಳಿದೆ. ನ್ಯೂಯಾರ್ಕ್ ಮೂಲದ ಈ ಕಂಪನಿಯು ತಯಾರಿಸಿದ ರೋಬೋಟ್‌ಗಳನ್ನು 43 ದೇಶಗಳಲ್ಲಿ ಬಳಸಲಾಗುವುದು. ಈ ರೋಬೋಟ್‌ಗಳನ್ನು ಅಲ್ಲಿ ವಿವಿಧ ಉದ್ದೇಶಗಳಿಗಾಗಿ ಬಳಸಲಾಗುವುದು ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನೂ ಓದಿ-iPhone 14ರ ಹೊಸ ಸೋರಿಕೆಯಿಂದ ದಿಗ್ಭ್ರಮೆಗೊಂಡ ಅಭಿಮಾನಿಗಳು! ಒಂದೇ ಫೋನ್ ನಲ್ಲಿ ಎರಡು ಸ್ಕ್ರೀನ್ ?
ವರದಿಯ ಪ್ರಕಾರ, 2017 ರಲ್ಲಿ, ಹಾಂಗ್ ಕಾಂಗ್‌ನ ಹ್ಯಾನ್ಸನ್ ರೊಬೊಟಿಕ್ಸ್ ಸಂಸ್ಥೆಯು ರೋಬೋಟ್ ಅನ್ನು ತಯಾರಿಸಿತ್ತು, ಅದಕ್ಕೆ ಸೋಫಿಯಾ (Sofia) ಎಂದು ಹೆಸರಿಡಲಾಗಿತ್ತು. ಈ ರೋಬೋಟ್ ಕಣ್ಣು ಪಿಳುಕಿಸುವ, ಅಕ್ಕಪಕ್ಕ ನೋಡಿ ಮಾತನಾಡುವ ಸಾಮರ್ಥ್ಯ ಹೊಂದಿತ್ತು. ಸೌದಿ ಅರೇಬಿಯಾ ಈ ರೋಬೋಟ್‌ಗೆ ಪೌರತ್ವ ನೀಡಿದೆ. ಇದು ವಿಶ್ವದ ಯಾವುದೇ ದೇಶದ ಪೌರತ್ವವನ್ನು ಪಡೆದ ವಿಶ್ವದ ಮೊದಲ ರೋಬೋಟ್ ಆಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.