ಸೂರ್ಯ, ಬುಧ ಕೇತು ಸ್ಥಾನ ಪಲ್ಲಟದಿಂದ ಜ್ವಾಲಾಮುಖಿ ಯೋಗ ಸೃಷ್ಟಿ, ಈ ರಾಶಿಗಳಿಗೆ ಸಂಕಷ್ಟ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯನು ಧನು ರಾಶಿಗೆ ಪ್ರವೇಶಿಸಿದಾಗ ಮಂಗಳ ಮತ್ತು ಕೇತುಗಳ ಜ್ವಾಲಾಮುಖಿ ಯೋಗವು ರೂಪುಗೊಳ್ಳುತ್ತದೆ. ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲೂ ಆಗಲಿದೆ. 

Written by - Ranjitha R K | Last Updated : Dec 8, 2021, 09:09 AM IST
  • ನಾಲ್ಕು ಗ್ರಹಗಳು ಒಟ್ಟಿಗೆ ಸೇರಿವೆ
  • ಮಂಗಳ ಮತ್ತು ಕೇತುಗಳಿಂದ ಮಾಡಿದ ಜ್ವಾಲಾಮುಖಿ ಯೋಗ
  • ಸೂರ್ಯನ ಧನು ರಾಶಿ ಪ್ರವೇಶ
ಸೂರ್ಯ, ಬುಧ ಕೇತು ಸ್ಥಾನ ಪಲ್ಲಟದಿಂದ ಜ್ವಾಲಾಮುಖಿ ಯೋಗ ಸೃಷ್ಟಿ, ಈ ರಾಶಿಗಳಿಗೆ ಸಂಕಷ್ಟ title=
ನಾಲ್ಕು ಗ್ರಹಗಳು ಒಟ್ಟಿಗೆ ಸೇರಿವೆ (file photo)

ನವದೆಹಲಿ : ಮಂಗಳ ಗ್ರಹವು ತನ್ನ ರಾಶಿಚಕ್ರವನ್ನು ಬದಲಾಯಿಸಿ ವೃಶ್ಚಿಕ ರಾಶಿಯನ್ನು ಪ್ರವೇಶಿಸಿದ್ದಾನೆ.  ಸೂರ್ಯ, ಕೇತು ಮತ್ತು ಬುಧ ಈಗಾಗಲೇ ವೃಶ್ಚಿಕ ರಾಶಿಯಲ್ಲಿದ್ದಾರೆ. ಮಂಗಳನ ಆಗಮನದೊಂದಿಗೆ, ನಾಲ್ಕು ಗ್ರಹಗಳು  ಒಟ್ಟಿಗೆ ಸೇರಿ ಯೋಗ ನಿರ್ಮಾಣವಾಗಲಿದೆ. ಆದರೆ, ಈ ಯೋಗ ಡಿಸೆಂಬರ್ 10ರಂದು ಬುಧ ಗ್ರಹ ನಿರ್ಗಮನದೊಂದಿಗೆ ಅಂತ್ಯವಾಗಲಿದೆ. ಇನ್ನು ಡಿಸೆಂಬರ್ 16 ರಂದು ಸೂರ್ಯನು (Sun) ಧನು ರಾಶಿಯನ್ನು (Sagitarius)ಪ್ರವೇಶಿಸಿದಾಗ ಮಂಗಳ ಮತ್ತು ಕೇತುಗಳ ಜ್ವಾಲಾಮುಖಿ ಯೋಗವು (Jwalamukhi Yoga) ರೂಪುಗೊಳ್ಳುತ್ತದೆ. ಈ ಯೋಗ 16 ಜನವರಿ 2022 ರವರೆಗೆ ಇರಲಿದೆ. ಮಂಗಳ ಮತ್ತು ಕೇತುಗಳಿಂದ ರೂಪುಗೊಂಡ ಈ ಜ್ವಾಲಾಮುಖಿ ಯೋಗವು ಎಲ್ಲಾ ರಾಶಿಚಕ್ರದ (Zodiac Sign) ಮೇಲೆ ಪರಿಣಾಮ ಬೀರುತ್ತದೆ. 
 
ಮೇಷ (Aries) : ಮಂಗಳ ಮತ್ತು ಕೇತುಗಳಿಂದ ರೂಪುಗೊಂಡ ಜ್ವಾಲಾಮುಖಿ ಯೋಗ  ರಾಶಿಯವರ ಮೇಲೆ ಪರಿಣಾಮ ಬೀರುತ್ತವೆ. ಜಮೀನಿನ ವಿಷಯದಲ್ಲಿ ನಷ್ಟ ಉಂಟಾಗಬಹುದು. ಇದರೊಂದಿಗೆ ಆಸ್ತಿ ನಷ್ಟವೂ ಆಗಲಿದೆ.  ಆರ್ಥಿಕ ಬಿಕ್ಕಟ್ಟು ಎದುರಾಗಬಹುದು. ಆರೋಗ್ಯ ಸಂಬಂಧಿ ಸಮಸ್ಯೆಗಳು ಕೂಡಾ ಕಾಡಬಹುದು.  

ವೃಷಭ (Taurus): ಪಾಲುದಾರಿಕೆ ಕ್ಷೇತ್ರದಲ್ಲಿ ವಿವಾದ ಉಂಟಾಗಲಿದೆ. ದಾಂಪತ್ಯ ಜೀವನದಲ್ಲಿ ಸಂತೋಷದ ಕೊರತೆ ಇರುತ್ತದೆ. ಮದುವೆ ವಿಳಂಬವಾಗುವ ಸಂಭವವಿದೆ. ಆರೋಗ್ಯ ಸಂಬಂಧಿ ಸಮಸ್ಯೆಗಳು ಎದುರಾಗುತ್ತವೆ. 

ಇದನ್ನೂ ಓದಿ : Venus Transit: ಶುಕ್ರ ರಾಶಿ ಪರಿವರ್ತನೆಯಿಂದ ತೆರೆಯಲಿದೆ ಈ 5 ರಾಶಿಯವರ ಅದೃಷ್ಟದ ಬಾಗಿಲು

ಮಿಥುನ (Gemini): ಶತ್ರುಗಳನ್ನು ಸೋಲಿಸುವಿರಿ. ಪ್ರಯಾಣ ಲಾಭದಾಯಕವಾಗಿ ಪರಿಣಮಿಸಲಿದೆ. ಉದ್ಯೋಗ-ವ್ಯವಹಾರದಲ್ಲಿ ಅದೃಷ್ಟವು ಸಂಪೂರ್ಣ ಬೆಂಬಲವನ್ನು ನೀಡುತ್ತದೆ. 

ಕರ್ಕ (Cancer): ಉದ್ಯೋಗದಲ್ಲಿ ಪ್ರಗತಿಗೆ ಅವಕಾಶವಿರುತ್ತದೆ. ಆದರೂ ಲಾಭದ ಪ್ರಮಾಣ ಕಡಿಮೆ ಇರುತ್ತದೆ. ಯೋಜನೆಯು ಅಪೂರ್ಣವಾಗಿ ಉಳಿಯುತ್ತದೆ. 

ಸಿಂಹ (Leo): ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ಆಸ್ತಿ ಅಥವಾ ಕೆಲಸಗಳಲ್ಲಿನಷ್ಟ ಎದುರಾಗಬಹುದು.   

ಕನ್ಯಾ (Virgo): ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಯಶಸ್ಸಿಗೆ ಬಹಳಷ್ಟು ಶ್ರಮ ಪಡುವ ಅಗತ್ಯವಿದೆ. ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. 

ಇದನ್ನೂ ಓದಿ : Jupiter Transit 2021: ಮುಂದಿನ 128 ದಿನ ಕುಂಭ ರಾಶಿಯಲ್ಲಿ ಗುರು ಬೃಹಸ್ಪತಿ, ಈ ಐದು ರಾಶಿಗಳ ಭಾಗ್ಯ ಬೆಳಗಲಿದ್ದಾನೆ

ತುಲಾ (Libra): ಮನೆಯಲ್ಲಿ ಅಥವಾ ಸ್ನೇಹಿತರೊಂದಿಗೆ ವಾದ ವಿವಾದಗಳು ಉಂಟಾಗುವ ಸಾಧ್ಯತೆ ಇದೆ. ಹಣ ಖರ್ಚಾಗಲಿದೆ. ಕೆಲವು ರಹಸ್ಯಗಳು ಬಹಿರಂಗಗೊಳ್ಳುತ್ತವೆ. ಇದರಿಂದ ಮನಸ್ಸು ಚಂಚಲವಾಗಿರುತ್ತದೆ. 

ವೃಶ್ಚಿಕ (Scorpio): ಕೋಪದಿಂದ ನಷ್ಟ ಉಂಟಾಗಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ದಾಂಪತ್ಯ ಜೀವನದಲ್ಲಿ ವಿವಾದಗಳು ಉಂಟಾಗುತ್ತವೆ. ಇದರೊಂದಿಗೆ ದೈನಂದಿನ ಕೆಲಸಗಳಲ್ಲಿ ಅಡೆತಡೆಗಳು ಉಂಟಾಗುತ್ತವೆ. 

ಧನು (Sagitarius): ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಕುಟುಂಬದಲ್ಲಿ ಸಹೋದರರೊಂದಿಗೆ ಕಲಹ ಉಂಟಾಗುವ ಸಾಧ್ಯತೆ ಇದೆ. ಯಾವುದೇ ಗಾಯವು ದೈಹಿಕ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ. 

ಮಕರ (Capricon): ನೀವು ಸ್ನೇಹಿತರು ಮತ್ತು ಸಹೋದರರಿಂದ ಬೆಂಬಲವನ್ನು ಪಡೆಯುತ್ತೀರಿ. ಯಾವುದೇ ದೊಡ್ಡ ಯೋಜನೆ ಯಶಸ್ವಿಯಾಗುತ್ತದೆ. ಇದರೊಂದಿಗೆ ಸಂಪತ್ತು ಮತ್ತು ಲಾಭದ ಯೋಗಗಳೂ ಇವೆ.

ಇದನ್ನೂ ಓದಿ : ಈ 7 ಅಭ್ಯಾಸಗಳನ್ನು ಹೊಂದಿರುವ ವ್ಯಕ್ತಿಯನ್ನು ಯಾವುದೇ ಕಾರಣಕ್ಕೂ ವರಿಸಬೇಡಿ.!

ಕುಂಭ (Aquarius): ಕುಟುಂಬ ಮತ್ತು ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ಹಣದ ವ್ಯವಹಾರದಲ್ಲಿ ಜಾಗರೂಕರಾಗಿರಿ. ಆದರೂ, ಹೂಡಿಕೆಯಿಂದ ಲಾಭವಾಗಲಿದೆ. ದೈನಂದಿನ ಆದಾಯ ಹೆಚ್ಚಾಗುತ್ತದೆ.

ಮೀನ ( Pisces): ಆರ್ಥಿಕ ನಷ್ಟ ಉಂಟಾಗಲಿದೆ. ಪರಿಗಣಿಸಲಾದ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ. ಆಸ್ತಿಯಿಂದ ಲಾಭ ಬರಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News