ಕಳುವಾಗಿದ್ದ ಮರಡೋನಾ ಅವರ 20 ಲಕ್ಷ ರೂ.ಮೌಲ್ಯದ ವಾಚ್ ಅಸ್ಸಾಂನಲ್ಲಿ ವಶಕ್ಕೆ..!

ಫುಟ್ಬಾಲ್ ದಂತಕಥೆ ದಿವಂಗತ ಡಿಯಾಗೋ ಮರಡೋನಾ ಅವರು ಬಳಸಿದ್ದಾರೆ ಎಂದು ನಂಬಲಾದ ಹೆರಿಟೇಜ್ ಐಷಾರಾಮಿ ಸೀಮಿತ ಆವೃತ್ತಿಯ ಗಡಿಯಾರವನ್ನು ದುಬೈನಿಂದ ನಾಪತ್ತೆಯಾದ ನಂತರ ಇಂದು ಬೆಳಿಗ್ಗೆ ಅಸ್ಸಾಂನಿಂದ ವಶಪಡಿಸಿಕೊಳ್ಳಲಾಗಿದೆ.

Written by - Zee Kannada News Desk | Last Updated : Dec 11, 2021, 04:58 PM IST
  • ಫುಟ್ಬಾಲ್ ದಂತಕಥೆ ದಿವಂಗತ ಡಿಯಾಗೋ ಮರಡೋನಾ ಅವರು ಬಳಸಿದ್ದಾರೆ ಎಂದು ನಂಬಲಾದ ಹೆರಿಟೇಜ್ ಐಷಾರಾಮಿ ಸೀಮಿತ ಆವೃತ್ತಿಯ ಗಡಿಯಾರವನ್ನು ದುಬೈನಿಂದ ನಾಪತ್ತೆಯಾದ ನಂತರ ಇಂದು ಬೆಳಿಗ್ಗೆ ಅಸ್ಸಾಂನಿಂದ ವಶಪಡಿಸಿಕೊಳ್ಳಲಾಗಿದೆ.
ಕಳುವಾಗಿದ್ದ ಮರಡೋನಾ ಅವರ 20 ಲಕ್ಷ ರೂ.ಮೌಲ್ಯದ ವಾಚ್ ಅಸ್ಸಾಂನಲ್ಲಿ ವಶಕ್ಕೆ..! title=
Photo Courtesy: Twitter

ನವದೆಹಲಿ: ಫುಟ್ಬಾಲ್ ದಂತಕಥೆ ದಿವಂಗತ ಡಿಯಾಗೋ ಮರಡೋನಾ ಅವರು ಬಳಸಿದ್ದಾರೆ ಎಂದು ನಂಬಲಾದ ಹೆರಿಟೇಜ್ ಐಷಾರಾಮಿ ಸೀಮಿತ ಆವೃತ್ತಿಯ ಗಡಿಯಾರವನ್ನು ದುಬೈನಿಂದ ನಾಪತ್ತೆಯಾದ ನಂತರ ಇಂದು ಬೆಳಿಗ್ಗೆ ಅಸ್ಸಾಂನಿಂದ ವಶಪಡಿಸಿಕೊಳ್ಳಲಾಗಿದೆ.

ಸುಮಾರು ₹ 20 ಲಕ್ಷ ಮೌಲ್ಯದ ಗಡಿಯಾರವನ್ನು ದುಬೈನಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ನಿವಾಸಿಯೊಬ್ಬರಿಂದ ವಶಪಡಿಸಿಕೊಳ್ಳಲಾಗಿದೆ ಮತ್ತು ಇತ್ತೀಚೆಗೆ ಭಾರತಕ್ಕೆ ಮರಳಿದೆ ಎಂದು ಅಸ್ಸಾಂ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ-ಗ್ರಾಮೀಣ ಮಹಿಳೆಯರ ಚಿಪ್ಕೋ ಆಂದೋಲನ ಸ್ಮರಿಸಿದ ಎಮ್ಮಾ ವಾಟ್ಸನ್

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಇದನ್ನು ಟ್ವಿಟರ್‌ನಲ್ಲಿ ಮೊದಲು ಹಂಚಿಕೊಂಡಿದ್ದಾರೆ.ಅಂತರರಾಷ್ಟ್ರೀಯ ಸಹಕಾರದ ಕ್ರಿಯೆಯಲ್ಲಿ ಅಸ್ಸಾಂ ಪೋಲಿಸ್  ಫುಟ್ಬಾಲ್ ಆಟಗಾರ ದಿವಗಂತ ಡಿಯಾಗೋ ಮರಡೋನಾಗೆ ಸೇರಿದ ಹೆರಿಟೇಜ್ ಹುಬ್ಲೋಟ್ ವಾಚ್ ಅನ್ನು ಮರುಪಡೆಯಲು ಭಾರತೀಯ ಫೆಡರಲ್ LEA ಮೂಲಕ ದುಬೈ ಪೋಲಿಸ್ ನೊಂದಿಗೆ ಸಂಘಟಿತವಾಗಿದೆ ಮತ್ತು ಈ ವಿಚಾರವಾಗಿ ವಾಜಿದ್ ಹುಸೇನ್ ಅವರನ್ನು ಬಂಧಿಸಲಾಗಿದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಡಿಯಾಗೋ ಅರ್ಮಾಂಡೋ ಮರಡೋನಾ ಅರ್ಜೆಂಟೀನಾದ ವೃತ್ತಿಪರ ಫುಟ್ಬಾಲ್ ಆಟಗಾರ ಮತ್ತು ಮ್ಯಾನೇಜರ್ ಆಗಿದ್ದರು ಮತ್ತು ಕ್ರೀಡೆಯ ಇತಿಹಾಸದಲ್ಲಿ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಅವರು ನವೆಂಬರ್ 2020 ರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು.ಅಸ್ಸಾಂನ ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ಜ್ಯೋತಿ ಮಹಂತ ಅವರು ಈ ವಾಚ್ ಅರ್ಜೆಂಟೀನಾದ ಫುಟ್‌ಬಾಲ್ ಆಟಗಾರನಿಗೆ ಸೇರಿದ್ದು,'ಇದನ್ನು ದುಬೈನಲ್ಲಿ ಇತರ ವಸ್ತುಗಳ ಜೊತೆಗೆ ಸುರಕ್ಷಿತವಾಗಿ ಸಂಗ್ರಹಿಸಲಾಗಿದೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ-ರಾಜಾಮೌಳಿ ಮತ್ತು ಅನುಷ್ಕಾ- ಪ್ರಭಾಸ್ ಮಧ್ಯೆ ಹೊಗೆಯಾಡುತ್ತಿದೆಯೇ ಮನಸ್ಥಾಪ? RRR ಟ್ರೈಲರ್ ರಿಲೀಸ್ ನಂತರ ಆಗಿದ್ದೇನು?

'ದುಬೈ ಪೋಲೀಸ್ ಕೇಂದ್ರ ಏಜೆನ್ಸಿ ಮೂಲಕ ಮಾಹಿತಿ ನೀಡಿದ ಪ್ರಕಾರ, ವಾಜಿದ್ ಹುಸೇನ್ ಮರಡೋನಾ ಸಹಿ ಮಾಡಿದ ಸೀಮಿತ ಆವೃತ್ತಿಯ ಹ್ಯೂಬ್ಲೋಟ್ ಗಡಿಯಾರವನ್ನು ಕದ್ದು ಅಸ್ಸಾಂಗೆ ಪರಾರಿಯಾಗಿದ್ದಾನೆ.ಇಂದು ಬೆಳಿಗ್ಗೆ 4:00 ಗಂಟೆಗೆ ನಾವು ವಾಜಿದ್ ಹುಸೇನ್ ಅವರನ್ನು ಸಿಬ್ಸಾಗರ್‌ನಲ್ಲಿರುವ ಅವರ ನಿವಾಸದಿಂದ ಬಂಧಿಸಿದ್ದೇವೆ' ಎಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ-Alia Bhatt: ರಣಬೀರ್ ಹೆಸರು ಕೇಳಿ ಇದ್ದಕ್ಕಿದ್ದಂತೆ ನಾಚಿಕೆಪಟ್ಟ ಆಲಿಯಾ ಭಟ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News