ನವದೆಹಲಿ: ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ(apartheid) ವಿರುದ್ಧದ ಅಹಿಂಸಾತ್ಮಕ ಹೋರಾಟಕ್ಕೆ 1984 ರಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಪಡೆದ ಆರ್ಚ್ಬಿಶಪ್ ಡೆಸ್ಮಂಡ್ ಟುಟು ನಿಧನರಾಗಿದ್ದಾರೆ.
ದಕ್ಷಿಣ ಆಫ್ರಿಕಾದ ಅಲ್ಪಸಂಖ್ಯಾತ ಬಿಳಿಯ ಸರಕಾರ ಅಲ್ಲಿನ ಬಹುಸಂಖ್ಯಾತ ಕರಿಯರ ಮೇಲೆ 1948-1991 ರವರೆಗೆ apartheid ಹೇರಿತ್ತು.Anti-apartheid ಹೋರಾಟದ ಮತ್ತೊಬ್ಬ ಕ್ರಾಂತಿಕಾರಿ, ಟುಟು ಅವರ ಸಮಕಾಲೀನರಾದ ನೆಲ್ಸನ್ ಮಂಡೇಲ,ಮೊದಲ ಕರಿಯ ಅಧ್ಯಕ್ಷರಾಗಿ ಆಯ್ಕೆಯಾಗಿ 1994-99 ರವರೆಗೆ ಕಾರ್ಯನಿರ್ವಹಿಸಿದ್ದರು.ಇವರು 1993 ರಲ್ಲಿ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಭಾಜನರಾದರು.ಜಾಗತಿಕ ಸಾಮಾಜಿಕ ನ್ಯಾಯದ ಹೋರಾಟಕ್ಕೆ ಇವರಿಬ್ಬರು ನೀಡಿದ ಕೊಡುಗೆ ಸ್ಮರಣೀಯ.
ಇದನ್ನೂ ಓದಿ: ಸ್ನ್ಯಾಕ್ಸ್ ಫ್ಯಾಕ್ಟರಿಯಲ್ಲಿ ಭಾರಿ ಸ್ಫೋಟ: ಐವರು ಸಾವು, 6 ಮಂದಿಗೆ ಗಾಯ
ಟುಟು ಅವರಿಗೆ 1997 ರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಇರುವುದು ಪತ್ತೆಯಾಯಿತು, ನಂತರ ಅವರು ಚಿಕಿತ್ಸೆಗಾಗಿ ಹಲವಾರು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ರಾಯಿಟರ್ಸ್ ವರದಿ ಮಾಡಿದೆ.ಅವರು ಕೇಪ್ ಟೌನ್ನ ಓಯಸಿಸ್ ಫ್ರೈಲ್ ಕೇರ್ ಸೆಂಟರ್ನಲ್ಲಿ ನಿಧನರಾದರು ಎಂದು ಆರ್ಚ್ಬಿಷಪ್ ಡೆಸ್ಮಂಡ್ ಟುಟು ಐಪಿ ಟ್ರಸ್ಟ್ನ ಹಂಗಾಮಿ ಅಧ್ಯಕ್ಷ ರಾಂಫೆಲಾ ಮ್ಯಾಂಪೆಲೆ ಹೇಳಿದ್ದಾರೆ.
Archbishop Emeritus Desmond Tutu was a guiding light for countless people globally. His emphasis on human dignity and equality will be forever remembered. I am deeply saddened by his demise, and extend my heartfelt condolences to all his admirers. May his soul rest in peace.
— Narendra Modi (@narendramodi) December 26, 2021
ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೋಸಾ ಅವರು ಟ್ವಿಟರ್ನಲ್ಲಿ ವರ್ಣಭೇದ ನೀತಿಯ ವಿರೋಧಿ ಹೋರಾಟಗಾರ ಟುಟು ಅವರ ಸಾವು ದೇಶವನ್ನು ವಿಮೋಚನೆಗೊಳಿಸಿದ ದೇಶದ "ಮನೋನ್ನತ ದಕ್ಷಿಣ ಆಫ್ರಿಕನ್ನರ ಪೀಳಿಗೆಗೆ ವಿದಾಯ ಎಂದು ಹೇಳಿದ್ದಾರೆ.
'ಡೆಸ್ಮಂಡ್ ಟುಟು ಸಮಾನತೆ ಇಲ್ಲದ ದೇಶಭಕ್ತ; ಕಾರ್ಯಗಳಿಲ್ಲದ ನಂಬಿಕೆ ಸತ್ತಿದೆ ಎಂಬ ಬೈಬಲ್ನ ಒಳನೋಟಕ್ಕೆ ಅರ್ಥವನ್ನು ನೀಡಿದ ತತ್ವ ಮತ್ತು ವಾಸ್ತವಿಕತೆಯ ನಾಯಕ, ಎಂದು ಸಿರಿಲ್ ಅವರು ಹೇಳಿದ್ದಾರೆ.
ಇದನ್ನೂ ಓದಿ: Test Ride ಜಂಜಾಟವಿಲ್ಲ, RTOಗೆ ಭೇಟಿ ನೀಡುವ ಅಗತ್ಯವಿಲ್ಲ.. ಈ ಒಂದು ಪ್ರಮಾಣಪತ್ರ ಇದ್ದರೆ ಸಾಕು ಸಿಗುತ್ತೆ Driving License
ವರ್ಣಭೇದ ನೀತಿಯ ವಿರುದ್ಧ ಅಹಿಂಸಾತ್ಮಕ ಪ್ರತಿರೋಧಕ್ಕಾಗಿ ಟುಟು 1984 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದರು.ನಂತರ ಅವರು ವರ್ಣಭೇದ ನೀತಿಯ ಸಮಯದಲ್ಲಿ ನಡೆದ ದೌರ್ಜನ್ಯಗಳನ್ನು ದಾಖಲಿಸಲು ಮತ್ತು ಸಂತ್ರಸ್ತರಿಗೆ ಪುನರ್ವಸತಿ ನೀಡಲು 1996 ರಲ್ಲಿ ಸ್ಥಾಪಿಸಲಾದ ಸತ್ಯ ಮತ್ತು ಸಮನ್ವಯ ಆಯೋಗದ ಅಧ್ಯಕ್ಷರಾಗಿದ್ದರು.
ನೆಲ್ಸನ್ ಮಂಡೇಲಾ ಅವರು ದೇಶದ ಮೊದಲ ಕಪ್ಪು ಅಧ್ಯಕ್ಷರಾದ ನಂತರ ದಕ್ಷಿಣ ಆಫ್ರಿಕಾದ ವೈವಿಧ್ಯತೆಯನ್ನು ವಿವರಿಸಲು ಟುಟು "ರೇನ್ಬೋ ನೇಷನ್" ಎಂಬ ಪದವನ್ನು ಸೃಷ್ಟಿಸಿದರು.
ಕಳೆದ ಎರಡು ದಶಕಗಳಲ್ಲಿ ಇಸ್ರೇಲ್ನ ಪ್ಯಾಲೇಸ್ಟಿನಿಯನ್ ಪ್ರದೇಶಗಳ ಆಕ್ರಮಣ, LGBTQ ಹಕ್ಕುಗಳು, ಹವಾಮಾನ ಬದಲಾವಣೆಯಂತಹ ಹಲವಾರು ವಿಷಯಗಳ ಕುರಿತು ಮಾತನಾಡಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಇದನ್ನೂ ಓದಿ: WATCH:ದೈತ್ಯ ಹಾವಿನೊಂದಿಗೆ ಆಟ, ಭಯಾನಕ ವಿಡಿಯೋ ವೈರಲ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.