ದಿಢೀರ್ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ ಭಾರತದ ಈ ಸ್ಟಾರ್ ಕ್ರಿಕೆಟಿಗ!

ಹೈದರಾಬಾದ್ ತಂಡದ ಭಾಗವಾಗಿದ್ದರು. 38ರ ಹರೆಯದ ಈ ಆಲ್ ರೌಂಡರ್ ಪಂಜಾಬ್ ಕಿಂಗ್ಸ್ ಪರ ಕೂಡ ಆಡಿದ್ದಾರೆ. ಈ ಭಾರತೀಯ ಕ್ರಿಕೆಟಿಗ ಭಾರತೀಯ ಕ್ರಿಕೆಟ್‌ನೊಂದಿಗೆ ಸಂಬಂಧವನ್ನು ಕಡಿದುಕೊಂಡಿದ್ದಾರೆ.

Written by - Puttaraj K Alur | Last Updated : Dec 27, 2021, 08:22 PM IST
  • ಭಾರತೀಯ ಕ್ರಿಕೆಟ್‌ನೊಂದಿಗಿನ ಸಂಬಂಧ ಕಡಿದುಕೊಂಡ ಸ್ಟಾರ್ ಆಟಗಾರ
  • ಟೀಂ ಇಂಡಿಯಾ ಪರ ಆಡಲು ಅವಕಾಶ ಸಿಗದ ಕಾರಣ ದಿಢೀರ್ ನಿವೃತ್ತಿ ಘೋಷಣೆ
  • ಅಮೆರಿಕದ ಮೈನರ್ ಲೀಗ್‌ನಲ್ಲಿ ಬಿಪುಲ್ ಶರ್ಮಾ ಆಡುವ ಸಾಧ್ಯತೆ
ದಿಢೀರ್ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ ಭಾರತದ ಈ ಸ್ಟಾರ್ ಕ್ರಿಕೆಟಿಗ!  title=
ದಿಢೀರ್ ನಿವೃತ್ತಿ ಘೋಷಿಸಿ ಬಿಪುಲ್ ಶರ್ಮಾ

ನವದೆಹಲಿ: ಐಪಿಎಲ್‌ನ ಸ್ಟಾರ್ ಕ್ರಿಕೆಟಿಗರೊಬ್ಬರು ಟೀಂ ಇಂಡಿಯಾ(Team India) ಪರ ಆಡಲು ಅವಕಾಶ ಸಿಗದ ಕಾರಣ ಭಾರತೀಯ ಕ್ರಿಕೆಟ್‌ನೊಂದಿಗಿನ ಸಂಬಂಧವನ್ನು ಕಡಿದುಕೊಂಡಿದ್ದಾರೆ. ಈ ಸ್ಟಾರ್ ಕ್ರಿಕೆಟಿಗ 2016ರಲ್ಲಿ ಐಪಿಎಲ್ ಚಾಂಪಿಯನ್ ಸನ್ ರೈಸರ್ಸ್ ಹೈದರಾಬಾದ್(Sunrisers Hyderabad) ತಂಡದ ಭಾಗವಾಗಿದ್ದರು. 38ರ ಹರೆಯದ ಈ ಆಲ್ ರೌಂಡರ್ ಪಂಜಾಬ್ ಕಿಂಗ್ಸ್ ಪರ ಕೂಡ ಆಡಿದ್ದಾರೆ. ಈ ಭಾರತೀಯ ಕ್ರಿಕೆಟಿಗ ಭಾನುವಾರ ಭಾರತೀಯ ಕ್ರಿಕೆಟ್‌ ಗೆ ಗುಡ್ ಬೈ ಹೇಳಿದ್ದಾರೆ.   

ದಿಢೀರ್ ನಿವೃತ್ತಿ ಘೋಷಿಸಿದ ಸ್ಟಾರ್ ಕ್ರಿಕೆಟಿಗ

ಈ ಆಟಗಾರ ಬೇರೆ ಯಾರೂ ಅಲ್ಲ, ಭಾರತೀಯ ದೇಶೀಯ ಕ್ರಿಕೆಟ್‌ನಲ್ಲಿ ದೊಡ್ಡ ಹೆಸರು ಮಾಡಿರುವ ಬಿಪುಲ್ ಶರ್ಮಾ(Bipul Sharma). ಬಿಪುಲ್ ಶರ್ಮಾ ಅವರು ನಿವೃತ್ತಿಯ ನಂತರ ಅಮೆರಿಕದಲ್ಲಿ ನೆಲೆಸಲಿದ್ದಾರೆ. ಅಲ್ಲಿ ಅವರ ಗುರಿ ಅಮೆರಿಕನ್ ತಂಡದಲ್ಲಿ ವೃತ್ತಿಜೀವನವನ್ನು ಮುಂದುವರೆಸುವುದಾಗಿದೆ. ಪಂಜಾಬ್‌ನ ಅಮೃತಸರದಲ್ಲಿ ಜನಿಸಿದ ಈ ಆಲ್‌ರೌಂಡರ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್‌(International Cricket)ನಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಅವರು 59 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 8 ಶತಕಗಳು, 17 ಅರ್ಧ ಶತಕ ಸೇರಿದಂತೆ ಒಟ್ಟು 3,012 ರನ್ ಗಳಿಸಿದ್ದಾರೆ. 126 ವಿಕೆಟ್ ಗಳನ್ನು ಸಹ ಪಡೆದುಕೊಂಡಿದ್ದಾರೆ. ಬಿಪುಲ್ 2005ರಲ್ಲಿ ಪಂಜಾಬ್ ಪರ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದ್ದರು.

ಇದನ್ನೂ ಓದಿ: ರೋಹಿತ್ ಕ್ಯಾಪ್ಟನ್ ಆಗುತ್ತಿದ್ದಂತೆ ಮಾತಿನ ದಾಟಿ ಬದಲಿಸಿದ ರವಿ ಶಾಸ್ತ್ರಿ, ಕೊಹ್ಲಿ ಬಗ್ಗೆ ಆಡಿದ ಮಾತುಗಳಿವು

ಮೈನರ್ ಲೀಗ್‌ನೊಂದಿಗೆ ಒಪ್ಪಂದಕ್ಕೆ ಸಹಿ..?

ಬಿಪುಲ್ ಶರ್ಮಾ ತಮ್ಮ ತವರು ರಾಜ್ಯವಲ್ಲದೆ ಹಿಮಾಚಲ ಪ್ರದೇಶ(Himachal Pradesh) ಮತ್ತು ಸಿಕ್ಕಿಂ ಪರ ಆಡಿದ್ದಾರೆ. ಅವರು ಈಗ ಯುಎಸ್‌ಎಯಿಂದ ಆಡಲಿರುವುದರಿಂದ ಭಾರತೀಯ ಕ್ರಿಕೆಟ್‌ಗೆ ಮರಳಲು ಸಾಧ್ಯವಾಗುವುದಿಲ್ಲ. ಬಿಸಿಸಿಐ ನಿಯಮಗಳ ಪ್ರಕಾರ ವಿದೇಶಿ ಲೀಗ್‌ಗಳಲ್ಲಿ ಭಾಗವಹಿಸಲು ಆಟಗಾರನು ಐಪಿಎಲ್ ಮತ್ತು ದೇಶೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಬೇಕು. ಬಿಪುಲ್ ಯುಎಸ್ಎಯಲ್ಲಿ ಯಾವ ಲೀಗ್ ಆಡುತ್ತಾರೆ ಎಂಬುದು ಇನ್ನೂ ತಿಳಿದಿಲ್ಲ, ಆದರೆ ಅಲ್ಲಿ ನೆಲೆಸಿರುವ ಹೆಚ್ಚಿನ ಭಾರತೀಯ ಕ್ರಿಕೆಟಿಗರು ಮೈನರ್ ಲೀಗ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಐಪಿಎಲ್ ಟ್ರೋಫಿ ಗೆದ್ದಿರುವ ಬಿಪುಲ್ ಶರ್ಮಾ

ಬಿಪುಲ್ ಶರ್ಮಾ 33 ಐಪಿಎಲ್(IPL Match) ಪಂದ್ಯಗಳಲ್ಲಿ 17 ವಿಕೆಟ್ ಪಡೆದಿದ್ದಾರೆ. ಬಿಪುಲ್ 59 ಪ್ರಥಮ ದರ್ಜೆ ಪಂದ್ಯಗಳಲ್ಲಿ 3,012 ರನ್ ಮತ್ತು 126 ವಿಕೆಟ್‌ಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ. 96 ಲಿಸ್ಟ್ A ಪಂದ್ಯಗಳಲ್ಲಿ ಈ ಆಲ್ ರೌಂಡರ್ 1,620 ರನ್ ಗಳಿಸಿದ್ದು, 96 ಬ್ಯಾಟ್ಸ್ ಮನ್ ಗಳನ್ನು ಔಟ್ ಮಾಡಿದ್ದಾರೆ. ಬಿಪುಲ್ ಶರ್ಮಾ 105 ಟಿ-20 ಪಂದ್ಯಗಳಲ್ಲಿ 1,203 ರನ್ ಹಾಗೂ 84 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ: IPL 2022 Mega Auctionನಲ್ಲಿ ಈ ನಾಲ್ಕು ಆಟಗಾರರ ಮೇಲೆ ಹಣದ ಹೊಳೆಯೇ ಹರಿಯಲಿದೆ

ಉನ್ಮುಕ್ತ್ ಚಂದ್ ಅವರು 2021ರಲ್ಲಿ ತಮ್ಮ ಕ್ರಿಕೆಟ್ ವೃತ್ತಿಜೀವನಕ್ಕಾಗಿ USAನಲ್ಲಿ ನೆಲೆಸಿರುವ ಅತ್ಯಂತ ಉನ್ನತ ಮಟ್ಟದ ಆಟಗಾರರಾಗಿದ್ದಾರೆ. ಬಿಪುಲ್ ಅವರನ್ನು 2010ರ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ಆಯ್ಕೆ ಮಾಡಿತು, ಈ ಆಲ್ ರೌಂಡರ್ ಫ್ರಾಂಚೈಸಿಯಲ್ಲಿ ಬ್ಯಾಕಪ್ ಆಟಗಾರನಾಗಿ 4 ವರ್ಷಗಳನ್ನು ಕಳೆದಿದ್ದಾರೆ. ಅವರು ಈ ಫ್ರಾಂಚೈಸಿಗಾಗಿ ಕೇವಲ 15 ಪಂದ್ಯಗಳನ್ನು ಆಡಿದ್ದಾರೆ. ಗಾಯಾಳು ಲಕ್ಷ್ಮಿ ಶುಕ್ಲಾ ಬದಲಿಗೆ ಸನ್‌ರೈಸರ್ಸ್ ಹೈದರಾಬಾದ್ ಅನ್ನು ಪ್ರತಿನಿಧಿಸಲು ಅವರಿಗೆ ಅವಕಾಶ ಸಿಕ್ಕಿತ್ತು. ಐಪಿಎಲ್‌ ಟೂರ್ನಿಯ 2016ರ ಪ್ರಶಸ್ತಿ ವಿಜೇತ ಹೈದರಾಬಾದ್‌ ತಂಡದ ಎಲ್ಲಾ 3 ನಾಕೌಟ್ ಪಂದ್ಯಗಳಲ್ಲಿಯೂ ಬಿಪುಲ್ ಆಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News