ಕಲಾವಿದರಿಗೆ ಸರ್ಕಾರದಿಂದ ಧನಸಹಾಯ: ಅರ್ಜಿ ಆಹ್ವಾನ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಸಾಮಾನ್ಯ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ ಕಲಾವಿದರಿಗೆ ಧನಸಹಾಯ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

Written by - Zee Kannada News Desk | Last Updated : Dec 29, 2021, 08:18 PM IST
  • ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಸಾಮಾನ್ಯ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ ಕಲಾವಿಧರಿಗೆ ಧನಸಹಾಯ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಕಲಾವಿದರಿಗೆ ಸರ್ಕಾರದಿಂದ ಧನಸಹಾಯ: ಅರ್ಜಿ ಆಹ್ವಾನ title=
ಸಾಂದರ್ಭಿಕ ಚಿತ್ರ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಸಾಮಾನ್ಯ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ ಕಲಾವಿದರಿಗೆ ಧನಸಹಾಯ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಇದನ್ನೂ ಓದಿ: New Wage Code : ಉದ್ಯೋಗಿಗಳಿಗೆ ಸಿಹಿ ಸುದ್ದಿ : ಈಗ ವಾರದಲ್ಲಿ 4 ದಿನ ಮಾತ್ರ ಆಫೀಸ್ ಕೆಲಸ, 3 ದಿನ ರಜೆ!

ಕಲೆ, ಸಾಹಿತ್ಯ, ಸಂಗೀತ, ಜನಪದ, ನೃತ್ಯ, ನಾಟಕ ಸೇರಿದಂತೆ ಇತರೆ ಕಲಾ ಪ್ರಕಾರಗಳನ್ನು ಉಳಿಸಿ ಬೆಳಸುವ ಸಲುವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2021-22ನೇ ಸಾಲಿನ ಸಾಮಾನ್ಯ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ ಕನ್ನಡ ಭಾಷೆ, ಸಾಹಿತ್ಯ, ಸಂಗೀತ, ನೃತ್ಯ, ಜಾನಪದ, ನಾಟಕ, ಯಕ್ಷಗಾನ, ಚಿತ್ರಕಲೆ, ಶಿಲ್ಪಕಲೆ, ಮುಂತಾದ ಸೃಜನಶೀಲ ಕಲಾ ಪ್ರಕಾರಗಳಲ್ಲಿ ನಿರಂತರ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿರುವ ಸಂಘ ಸಂಸ್ಥೆಗಳಿಗೆ ಪ್ರೋತ್ಸಾಹ ರೂಪದಲ್ಲಿ ಧನ ಸಹಾಯ ನೀಡಲಾಗುವುದು.  ಅಸಂಘಟಿತ ತಂಡಗಳು, ಏಕವ್ಯಕ್ತಿ ಕಲಾವಿಧರಿಗೆ ವಾದ್ಯಪರಿಕರ, ವೇಷಭೂಷಣ ಖರೀದಿಗೆ ಧನಸಹಾಯ ಹಾಗೂ ಚಿತ್ರಕಲೆ ಮತ್ತು ಶಿಲ್ಪಕಲೆಗಳ ಏಕವ್ಯಕ್ತಿ, ತಂಡದ ಕಲಾವಿಧರಿಗೆ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಲು ಧನಸಹಾಯ ನೀಡಲಾಗುತ್ತಿದೆ.

ಭಾರತದಲ್ಲಿನ ಕೊರೊನಾ ಪ್ರಕರಣಗಳ ಹೆಚ್ಚಳದ ಕುರಿತು ಕೇಂಬ್ರಿಡ್ಜ್ ವಿವಿ ಹೇಳಿದ್ದೇನು ಗೊತ್ತೇ?

ಈ ಮೂರು ಯೋಜನೆಗಳಡಿ ಧನ ಧನಸಹಾಯ ಪಡೆಯಲು ಅರ್ಹ ಕಲಾವಿದರು ಸೇವಾಸಿಂಧು ಪೋರ್ಟಲ್ Sevasindhu.karnataka.gov.in ನಲ್ಲಿ ಆನ್‌ಲೈನ್ ಮೂಲಕ 2022ರ ಜನವರಿ 08 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.ಸರ್ಕಾರದ ಆದೇಶದಂತೆ ಅರ್ಜಿ ಸಲ್ಲಿಸಲು ಮಾರ್ಗಸೂಚಿಯನ್ನು ಸೇವಾಸಿಂಧು ಪೋರ್ಟಲ್ ಹಾಗೂ ಇಲಾಖಾ ವೆಬ್‌ಸೈಟ್  www.kannadasiri.karnataka.gov.in ನಲ್ಲಿ ಅಳವಡಿಸಲಾಗಿದೆ.

ಇದನ್ನೂ ಓದಿ : Video : ಮದುವೆಯ ಅಲಂಕಾರ ಮುಗಿಸಿಕೊಂಡು ಬಂದ ವಧುವಿನಿಂದ ವಿವಾಹಕ್ಕೆ ನಿರಾಕರಣೆ ಕಾರಣ ಇಷ್ಟೇ .!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News