ಚಂಡೀಗಢ: ಹರಿಯಾಣದ ಭಿವಾನಿ ಜಿಲ್ಲೆಯಲ್ಲಿ ಗಣಿಗಾರಿಕೆ ವಲಯದಲ್ಲಿ ಭೂಕುಸಿತ(Haryana Landslide)ಸಂಭವಿಸಿದ ನಂತರ ಸುಮಾರು 15 ರಿಂದ 20 ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ರಕ್ಷಣಾ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದು, ಇದುವರೆಗೆ ಮೂವರನ್ನು ರಕ್ಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಿವಾನಿ ಜಿಲ್ಲೆಯ ದಡಮ್ ಗಣಿಗಾರಿಕೆ(Mining Landslide) ಪ್ರದೇಶದಲ್ಲಿ ಈ ದುರಂತ ಸಂಭವಿಸಿದ್ದು, ಗಣಿಗಾರಿಕೆ ವೇಳೆ ಭೂ ಕುಸಿತವಾಗಿ 10-15 ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ ಎಂದು ANI ಸುದ್ದಿಸಂಸ್ಥೆ ವರದಿ ಮಾಡಿದೆ. ಘಟನೆಯಲ್ಲಿ ಗಣಿಗಾರಿಕೆಗೆ ಬಳಸುತ್ತಿದ್ದ ವಾಹನಗಳು ಕೂಡ ಕುಸಿತವಾಗಿರುವ ಭೂಮಿಯ ಅವಶೇಷಗಳಡಿ ಹೂತು ಹೋಗಿವೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Bank Locker : ಇಂದಿನಿಂದ ಬದಲಾಗಿದೆ ಬ್ಯಾಂಕ್ ಲಾಕರ್ ನಿಯಮಗಳು!
ಶನಿವಾರ(ಜ.1) ಬೆಳಗ್ಗೆ 8.15ರ ಸುಮಾರಿಗೆ ಗಣಿಗಾರಿಕೆ(Landslide Incident) ನಡೆಯುತ್ತಿದ್ದಾಗ ಭೂ ಕುಸಿತವಾಗಿದೆ ಎಂದು ತಿಳಿದುಬಂದಿದೆ. ಘಟನೆ ವೇಳೆ ಸ್ಥಳದಲ್ಲಿ ನಿಂತಿದ್ದ ಸುಮಾರು ಅರ್ಧ ಡಜನ್ ಪಾಪ್‌ಲ್ಯಾಂಡ್ ಯಂತ್ರಗಳು ಮತ್ತು ಡಂಪರ್‌ಗಳು ಹೂತುಹೋಗಿವೆ ಎಂದು ತಿಳಿದುಬಂದಿದೆ.
Haryana Agriculture Minister JP Dalal reaches the spot of landslide
Some people have died. I cannot provide the exact figures as of now. A team of doctors has arrived. We will try to save as many people as possible: JP Dalal pic.twitter.com/PGbxZiucH4
— ANI (@ANI) January 1, 2022
ತೋಷಮ್ ಬ್ಲಾಕ್‌ನ ದಡಮ್ ಗಣಿಗಾರಿಕೆ ಪ್ರದೇಶದಲ್ಲಿ ಪರ್ವತದ ಹೆಚ್ಚಿನ ಭಾಗವು ಬಿರುಕು ಬಿಟ್ಟಿದ್ದರಿಂದ ಭೂಕುಸಿತ(Haryana Landslide)ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೃಷಿ ಸಚಿವ ಜೆಪಿ ದಲಾಲ್ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಸ್ಥಳಕ್ಕೆ ತಲುಪಿದ್ದಾರೆ. ಸದ್ಯಕ್ಕೆ ಪರ್ವತ ಜಾರಿ ಬೀಳಲು ಕಾರಣ ತಿಳಿದುಬಂದಿಲ್ಲ. 10 ರಿಂದ 15ಕ್ಕೂ ಹೆಚ್ಚು ಮಂದಿ ಮಣ್ಣಿನಡಿ ಸಿಲುಕಿ ಜೀವಂತ ಸಮಾಧಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದ್ದು, ಮೃತರ ಬಗ್ಗೆ ಸ್ಥಳೀಯ ಅಧಿಕಾರಿಗಳು ಇನ್ನಷ್ಟೇ ಸ್ಪಷ್ಪನೆ ನೀಡಬೇಕಿದೆ.
ಇದನ್ನೂ ಓದಿ: Randeep Guleria : ಓಮಿಕ್ರಾನ್ ಡೆಲ್ಟಾಕ್ಕಿಂತ ಏಕೆ ದುರ್ಬಲವಾಗಿದೆ? ವಿವರಣೆ ನೀಡಿದ AIIMS ನಿರ್ದೇಶಕರು
Incident of a landslide in a mining quarry took place in Haryana's Bhiwani pic.twitter.com/d7d382RxrC
— ANI (@ANI) January 1, 2022
ದಡಮ್ ಗಣಿಗಾರಿಕೆ ಪ್ರದೇಶ ಮತ್ತು ಖಾನಕ್ ಪಹಾರಿ ಪ್ರದೇಶದಲ್ಲಿ ಗಣಿಗಾರಿಕೆಯ ಮೇಲಿನ ನಿಷೇಧವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಹಿಂತೆಗೆದುಕೊಂಡ ನಂತರ ಗಣಿಗಾರಿಕೆ ಚಟುವಟಿಕೆಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿವೆ. ಮಾಲಿನ್ಯದ ಹಿನ್ನೆಲೆಯಲ್ಲಿ ಹಸಿರು ನ್ಯಾಯಾಲಯ ವಿಧಿಸಿದ್ದ 2 ತಿಂಗಳ ನಿಷೇಧವನ್ನು ಗುರುವಾರ ಹಿಂತೆಗೆದುಕೊಳ್ಳಲಾಗಿದ್ದು, ಶುಕ್ರವಾರವಷ್ಟೇ ಗಣಿಗಾರಿಕೆ ಪುನರಾರಂಭವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.