ನವದೆಹಲಿ: ಟೀಂ ಇಂಡಿಯಾದ ಮಾಜಿ ಲೆಜೆಂಡರಿ ಬೌಲರ್ ಹರ್ಭಜನ್ ಸಿಂಗ್(Harbhajan Singh) ಅವರು ಇತ್ತೀಚೆಗೆ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಹರ್ಭಜನ್ ತಮ್ಮ ಕ್ರಿಕೆಟ್ ವೃತ್ತಿಜೀವನದ ಬಹುಪಾಲು ಸೌರವ್ ಗಂಗೂಲಿ ಮತ್ತು ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಆಡಿದವರು. ಏತನ್ಮಧ್ಯೆ Zee Newsನ ಮುಖ್ಯ ಸಂಪಾದಕ ಸುಧೀರ್ ಚೌಧರಿ(Sudhir Chaudhary) ಅವರೊಂದಿಗಿನ ವಿಶೇಷ ಸಂದರ್ಶನದಲ್ಲಿ ಹರ್ಭಜನ್ ಸಿಂಗ್, ಧೋನಿ ಮತ್ತು ಗಂಗೂಲಿ ನಡುವೆ ಯಾರು ಉತ್ತಮ ನಾಯಕ ಎಂಬುದರ ಬಗ್ಗೆ ಮಾತನಾಡಿದ್ದಾರೆ.
ಸುಧೀರ್ ಚೌಧರಿ: ಎಂ.ಎಸ್.ಧೋನಿ ಮತ್ತು ಸೌರವ್ ಗಂಗೂಲಿ ಇವರಲ್ಲಿ ಉತ್ತಮ ನಾಯಕ ಯಾರು ಎಂದು ನೀವು ಭಾವಿಸುತ್ತೀರಿ?
ಹರ್ಭಜನ್ ಸಿಂಗ್: ಸೌರವ್ ಗಂಗೂಲಿ(Sourav Ganguly) ಅವರು ನಾನು ತಂಡದಿಂದ ಹೊರಗಿರುವಾಗ ನನ್ನನ್ನು ಆಯ್ಕೆ ಮಾಡಿದರು. ನಾನು ಚೆನ್ನಾಗಿ ಆಡಿದ್ದೇನೆ ಮತ್ತು ಹ್ಯಾಟ್ರಿಕ್ ಟೇಕರ್ ಆಗಿದ್ದೇನೆ. ಎಂ.ಎಸ್.ಧೋನಿ(MS Dhoni) ಗಂಗೂಲಿ ನಂತರ ಟೀಂ ಇಂಡಿಯಾವನ್ನು ಬಹಳ ಚೆನ್ನಾಗಿ ಮುನ್ನಡೆಸಿದರು. ನಾನು ಗಂಗೂಲಿಯೊಂದಿಗೆ ಕ್ರಿಕೆಟ್ ಅನ್ನು ತುಂಬಾ ಎಂಜಾಯ್ ಮಾಡಿದೆ. ಅವರು ನನ್ನನ್ನು ಚೆನ್ನಾಗಿ ಆಡುವಂತೆ ಪ್ರೇರೇಪಿಸಿದರು. ಚೆನ್ನಾಗಿ ಆಡಲು ಸ್ವಾತಂತ್ರ್ಯ ಕೊಟ್ಟ ನಂತರವೇ ನಾನು ದೊಡ್ಡ ಬೌಲರ್ ಆಗಲು ಸಾಧ್ಯವಾಯಿತು. ಧೊನಿ ಮತ್ತು ಗಂಗೂಲಿ ಇಬ್ಬರೂ ಉತ್ತಮ ಕ್ಯಾಪ್ಟನ್ ಗಳು. ಆದರೆ ಧೋನಿಗಿಂತ ನನಗೆ ಗಂಗೂಲಿ ಉತ್ತಮ ನಾಯಕನೆಂದು ಅನಿಸುತ್ತದೆ.
ಇದನ್ನೂ ಓದಿ: ಚೇತೆಶ್ವರ್ ಪೂಜಾರ್ ಗೆ ವಾರ್ನಿಂಗ್ ನೀಡಿದ ಮಾಜಿ ಆಯ್ಕೆ ಸಮಿತಿ ಸದಸ್ಯ..!
ಸುಧೀರ್ ಚೌಧರಿ: ನೀವು ತಂಡದ ಪ್ರಮುಖ ಸದಸ್ಯರಾಗಿದ್ದಿರಿ ಮತ್ತು ನಿಮ್ಮ ದಾಖಲೆ ತುಂಬಾ ಚೆನ್ನಾಗಿದ್ದರೂ ನಿಮ್ಮನ್ನು BCCI ನಾಯಕನಾಗಿ ಪರಿಗಣಿಸಲಿಲ್ಲವೇ? ನಿಮ್ಮ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಕೂಡ ಗೆದ್ದಿದೆ.
ಹರ್ಭಜನ್ ಸಿಂಗ್: ಪಂಜಾಬ್ನಿಂದ ನನಗೆ ಬೆಂಬಲ ನೀಡುವ ಯಾರೂ ಬಿಸಿಸಿಐ(BCCI)ನಲ್ಲಿ ಇರಲಿಲ್ಲ. ನನಗೆ ನಾಯಕತ್ವ ಸಿಕ್ಕಿದ್ದರೆ ನಾನು ಖಂಡಿತವಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೆ. ನಾನು ಯಾವಾಗಲೂ ತಂಡದ ನಾಯಕರಿಗೆ ಸಹಾಯ ಮಾಡಿದ್ದೇನೆ, ನನಗೆ ಬೆಂಬಲ ನೀಡುವ ಅಧಿಕಾರಿಗಳು ಇರಲಿಲ್ಲ.
ಸುಧೀರ್ ಚೌಧರಿ: ಟೀಂ ಇಂಡಿಯಾದಲ್ಲಿ ರಾಜಕೀಯ ಇದೆಯಾ ? ನೀವು ಅದರ ಬಲಿಪಶುವಾಗಿದ್ದೀರಾ?
ಹರ್ಭಜನ್ ಸಿಂಗ್: ನನಗೆ ಕೆಟ್ಟದ್ದೇ ಆಯಿತು, ಈಗ ಅದು ರಾಜಕೀಯವೋ ಇಲ್ಲವೋ ಗೊತ್ತಿಲ್ಲ. ನನಗೆ ಏನಾಯಿತು ಎಂಬುದರ ಬಗ್ಗೆ ನನ್ನ ಪುಸ್ತಕದಲ್ಲಿ ನಿರ್ಭಯವಾಗಿ ಬರೆದಿದ್ದೇನೆ. ಒಬ್ಬ ಕ್ರಿಕೆಟಿಗ(Best Captain)ನಾಗುವುದು ಎಷ್ಟು ಕಷ್ಟ, ಅದರಲ್ಲೂ ಯಾವುದೇ ಬೆಂಬಲವಿಲ್ಲದ ಕ್ರಿಕೆಟಿಗ ಹೀಗೆ ನನ್ನ ಪುಸ್ತಕ ಎಲ್ಲವನ್ನೂ ಹೇಳುತ್ತದೆ.
ಸುಧೀರ್ ಚೌಧರಿ: ನಿಮ್ಮನ್ನು ಯಾವಾಗಲೂ ಟಿವಿಯಲ್ಲಿ ನೋಡಿದ್ದೇವೆ. ಮೈದಾನದಲ್ಲಿ ನೀವು ನಿಮ್ಮ ಎಲ್ಲಾ ಭಾವನೆಗಳನ್ನು ಕ್ಯಾಮೆರಾದಲ್ಲಿ ಹೊರಹಾಕುತ್ತೀರಿ. ಆದರೆ ನೀವು ಈಗ ಶಾಂತವಾಗಿದ್ದೀರಿ, ಕಳೆದ 5 ವರ್ಷಗಳಲ್ಲಿ ನಿಮ್ಮ ವ್ಯಕ್ತಿತ್ವದಲ್ಲಿ ಈ ಬದಲಾವಣೆ ಬಂದಿದೆಯೇ?
ಹರ್ಭಜನ್ ಸಿಂಗ್: ವಯಸ್ಸಿನೊಂದಿಗೆ ಬದಲಾವಣೆ ಬರುತ್ತದೆ. ನಾನು ಶಾಂತವಾಗಿರುತ್ತೇನೆ, ಸುಂದರವಾದ ಕೋಟುಗಳನ್ನು ಧರಿಸುತ್ತೇನೆ. ನನಗೆ ಇಷ್ಟವಿಲ್ಲದ ವಸ್ತುಗಳಿಂದ ದೂರವಿರುತ್ತೇನೆ. ನಾನು ವಿಷಾದಿಸಬಹುದಾದ ವಿಚಾರಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ.
ಇದನ್ನೂ ಓದಿ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಡೆಲ್ಟಾ ರೂಪಾಂತರ ಧೃಡ
ಸುಧೀರ್ ಚೌಧರಿ: ಹಿಂದಿನ ಒತ್ತಡದ ಬಗ್ಗೆ ಮಾತನಾಡಲಿಲ್ಲ, ನಿಮ್ಮ ಕಥೆಯನ್ನು ಹಂಚಿಕೊಳ್ಳಲು ಬಯಸುವಿರಾ? ಒಮ್ಮೊಮ್ಮೆ ಅಳುವ ನಿಮ್ಮ ಭಾವನೆ, ಒಮ್ಮೊಮ್ಮೆ ಸಿಟ್ಟಿನಲ್ಲಿ ಗಾಜು ಒಡೆದದ್ದು! ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಲು ಬಯಸುವಿರಾ?
ಹರ್ಭಜನ್ ಸಿಂಗ್: ಜೀವನವು ತನ್ನದೇ ಆದ ಮಾರ್ಗವನ್ನು ಹೊಂದಿದೆ. ಅನೇಕ ಜನರು ಒತ್ತಡವನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ, ಆದರೆ ಅದರ ಬಗ್ಗೆ ಹೇಳಬೇಕು. ನಾನು ಕೂಡ ಮನುಷ್ಯ, ನನಗೂ ಭಾವನೆಗಳಿವೆ. ಜನರು ನನ್ನನ್ನು ಹಿಂಬಾಲಿಸುತ್ತಲೇ ಇರುತ್ತಾರೆ, ನನ್ನನ್ನು ಕೆಳಗೆ ಎಳೆಯುತ್ತಲೇ ಇರುತ್ತಾರೆ. ನನಗೂ ಅಳುವುದು, ನನಗೆ ನಿದ್ರೆ ಬರುವುದಿಲ್ಲ, ಭಾವನೆಗಳು ಅಲ್ಲಿ ಇಲ್ಲಿ ಹೋಗುತ್ತವೆ. ನಿದ್ರೆ, ಪಂದ್ಯದ ಒತ್ತಡ ಅಥವಾ ಆಯ್ಕೆ ಇಲ್ಲದಿರುವಾಗ ಅಂತಹ ಅನೇಕ ರಾತ್ರಿಗಳು ನಡೆದಿವೆ. 400 ವಿಕೆಟ್ ಪಡೆದ ಕ್ರಿಕೆಟಿಗನನ್ನೇ ತಂಡದಿಂದ ಕೈಬಿಡಲಾಯಿತು. ಕಾರಣ ಏನು, ಯಾರಾದರೂ ಹೇಳಬಹುದೇ? ಆಗ ಸಮಯದೊಂದಿಗೆ ವ್ಯವಹರಿಸುವುದು ನಮಗೆ ತಿಳಿಯುತ್ತದೆ. ಗುರು ನಾನಕ್ ಸಾಹೇಬರು ‘ಜಗತ್ತಿನಲ್ಲಿ ಎಲ್ಲರೂ ಅತೃಪ್ತರು, ನೀವು ಸಂತೋಷವಾಗಿರಬೇಕಾದರೆ ನಿಮ್ಮೊಳಗೆ ನೀವು ಸಂತೋಷವನ್ನು ಕಂಡುಕೊಳ್ಳಬೇಕು, ನಿಮಗೆ ಸಂತೋಷವನ್ನು ನೀಡುವ ವಿಷಯಗಳೊಂದಿಗೆ ಸಂಪರ್ಕ ಸಾಧಿಸಬೇಕು’ ಎಂದು ಹೇಳಿದ್ದರು. ನೆಗೆಟಿವ್ ಜನರು ಮತ್ತು ನೆಗೆಟಿವ್ ಆಲೋಚನೆಗಳಿಂದ ದೂರವಿರುವುದು ಉತ್ತಮ.
ಸುಧೀರ್ ಚೌಧರಿ: ಆರ್.ಅಶ್ವಿನ್ ನಿಮಗಿಂತ ಉತ್ತಮ ಬೌಲರ್ ಆಗಿದ್ದಾರಾ?
ಹರ್ಭಜನ್ ಸಿಂಗ್: ಆರ್.ಅಶ್ವಿನ್(Ravichandran Ashwin) ಉತ್ತಮ ಬೌಲರ್, ಅವರು ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಅವರು ಸಮರ್ಥರಾಗಿದ್ದಾರೆ, ಅವರು ಅನೇಕ ಪಂದ್ಯಗಳನ್ನು ಟೀಂ ಇಂಡಿಯಾಗೆ ಗೆದ್ದುಕೊಟ್ಟಿದ್ದಾರೆ. ಇವುಗಳಲ್ಲಿ ಹೆಚ್ಚಿನ ಪಂದ್ಯಗಳು ಭಾರತದಲ್ಲಿ ನಡೆದಿವೆ. ಅಶ್ವಿನ್ರನ್ನು ಆಯ್ಕೆ ಮಾಡಿದಾಗ ನಾನು 400 ವಿಕೆಟ್ಗಳನ್ನು ಪಡೆದಿದ್ದೆ, ಆಗ ನನ್ನ ಪ್ರದರ್ಶನ ಕೊಂಚ ಕುಂಠಿತವಾಗಿತ್ತು. ಅಶ್ವಿನ್ ಯಾವಾಗ ಉತ್ತಮ ಪ್ರದರ್ಶನ ನೀಡಲು ಪ್ರಾರಂಭಿಸಿದನೋ ನಾನು ಕಾಯಬೇಕಾಯಿತು. ನಂತರ ನನಗೆ ಅವಕಾಶ ಸಿಗಲಿಲ್ಲ. ರಣಜಿಯಲ್ಲಿ ಚೆನ್ನಾಗಿ ಆಡುತ್ತಿದ್ದರೂ ಅವಕಾಶ ಸಿಕ್ಕಿರಲಿಲ್ಲ. ನಾನು ODI ಮತ್ತು T20ಗಳಲ್ಲಿ ಚೆನ್ನಾಗಿ ಆಡುತ್ತಿದ್ದೆ. ನನ್ನ ದಾಖಲೆಯನ್ನು ನೋಡಿದರೆ ನನ್ನನ್ನು ಏಕೆ ಕೈಬಿಟ್ಟರು ಎಂದು ನೀವು ಸಹ ಆಶ್ಚರ್ಯಪಡುತ್ತೀರಿ. ನನಗೆ ಏಕದಿನ ಪಂದ್ಯಗಳನ್ನು ಆಡುವ ಅವಕಾಶ ಸಿಗಲಿಲ್ಲ, ಟಿ-20ಯಲ್ಲಿ ನನಗೆ ಅವಕಾಶ ಕೈಬಿಟ್ಟಿತು. ನನ್ನನ್ನು ಒಮ್ಮೆ ಮನೆಗೆ ಕಳುಹಿಸಿದ ಬಳಿಕ ಯಾರೂ ಮತ್ತೆ ನೆನಪಿಸಿಕೊಳ್ಳಲಿಲ್ಲ ಅಂತಾ ಹರ್ಬಜನ್ ಸಿಂಗ್ ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.