ಬೆಂಗಳೂರು: ರಾಮನಗರದಲ್ಲಿ ಸೋಮವಾರ ನಡೆದ ಸರ್ಕಾರಿ ಕಾರ್ಯಕ್ರಮ(Ramanagara incident)ದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಮ್ಮುಖದಲ್ಲಿಯೇ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಮತ್ತು ಸಂಸದ ಡಿ.ಕೆ.ಸುರೇಶ್ ವಾಕ್ಸಮರದ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಜನಪ್ರತಿನಿಧಿಗಳು ಹೀಗೆ ಬಹಿರಂಗವಾಗಿ ಕಿತ್ತಾಡಿಕೊಂಡಿರುವ ಪ್ರಸಂಗಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತಪವಾಗಿದೆ. ಈ ಮಧ್ಯೆ ಡಿಕೆ ಬ್ರದರ್ಸ್ ವಿರುದ್ಧ ಬಿಜೆಪಿ ಕಿಡಿಕಾರಿದೆ.
#ಕಾಂಗ್ರೆಸ್‌ಗೂಂಡಾಗಿರಿ ಹ್ಯಾಶ್ ಟ್ಯಾಗ್ ಬಳಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar)ಹಾಗೂ ಸಂಸದ ಡಿ.ಕೆ.ಸುರೇಶ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ‘ರಾಮನಗರದ ಬ್ಲಡ್ ಬೇರೆ ಎಂದು ಹೇಳುವ ಮೂಲಕ ಡಿ.ಕೆ.ಶಿವಕುಮಾರ್ ಅವರು ಏನು ಸಾಧಿಸಲು ಹೊರಟಿದ್ದಾರೆ? ಕೊತ್ವಾಲನ ಶಿಷ್ಯರಿಗೊಂದು ಕಿವಿಮಾತು, ನಿಮ್ಮ ರಕ್ತಸಿಕ್ತ ರಾಜಕೀಯ ಚರಿತ್ರೆಯನ್ನು ಜನತೆಯ ತಲೆಗೆ ಕಟ್ಟಬೇಡಿ. ಕನಕಪುರ ರಿಪಬ್ಲಿಕ್ ರಾಮನಗರವನ್ನು ವ್ಯಾಪಿಸಲು ಸಾಧ್ಯವಿಲ್ಲ’ವೆಂದು ಬಿಜೆಪಿ ಎಚ್ಚರಿಸಿದೆ.
ರಾಮನಗರದ ಬ್ಲಡ್ ಬೇರೆ ಎಂದು ಹೇಳುವ ಮೂಲಕ @DKShivakumar ಅವರು ಏನು ಸಾಧಿಸಲು ಹೊರಟಿದ್ದಾರೆ?
ಕೊತ್ವಾಲನ ಶಿಷ್ಯರಿಗೊಂದು ಕಿವಿಮಾತು, ನಿಮ್ಮ ರಕ್ತಸಿಕ್ತ ರಾಜಕೀಯ ಚರಿತ್ರೆಯನ್ನು ಜನತೆಯ ತಲೆಗೆ ಕಟ್ಟಬೇಡಿ.
ಕನಕಪುರ ರಿಪಬ್ಲಿಕ್ ರಾಮನಗರವನ್ನು ವ್ಯಾಪಿಸಲು ಸಾಧ್ಯವಿಲ್ಲ.#ಕಾಂಗ್ರೆಸ್‌ಗೂಂಡಾಗಿರಿ
— BJP Karnataka (@BJP4Karnataka) January 4, 2022
ಇದನ್ನೂ ಓದಿ: ನನ್ನ ರಾಜಕೀಯ ಆರಂಭ, ಅಂತ್ಯ ಬಿಜೆಪಿಯಲ್ಲೇ: ಶಾಸಕ ಎಂ.ಪಿ.ಕುಮಾರಸ್ವಾಮಿ
ರಾಮನಗರ ಜಿಲ್ಲೆ ತಮ್ಮ ಪ್ರತ್ಯೇಕ #ರಿಪಬ್ಲಿಕ್ ಎಂದು ಡಿಕೆ ಗೂಂಡಾ ಸೋದರರು ಭಾವಿಸಿಕೊಂಡಿದ್ದಾರೆ.
ಬೆದರಿಸಿ, ಹಂಗಿಸಿ, ಕತ್ತಿ ತೋರಿಸಿ ಜಿಲ್ಲಾಡಳಿತ ನಿಯಂತ್ರಿಸುತ್ತಿದ್ದ ಕೊತ್ವಾಲನ ಶಿಷ್ಯರಿಗೆ ಬಿಜೆಪಿ ಸಚಿವರು ಬಿಸಿ ತುಪ್ಪವಾಗಿ ಪರಿಣಮಿಸಿದ್ದರು.
ಹೀಗಾಗಿ ಸಿಎಂ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ #ಕಾಂಗ್ರೆಸ್‌ಗೂಂಡಾಗಿರಿ ಸೃಷ್ಟಿಸಿದರು.
— BJP Karnataka (@BJP4Karnataka) January 4, 2022
‘ರಾಮನಗರ ಜಿಲ್ಲೆ ತಮ್ಮ ಪ್ರತ್ಯೇಕ #ರಿಪಬ್ಲಿಕ್ ಎಂದು ಡಿಕೆ(DK Suresh)ಗೂಂಡಾ ಸೋದರರು ಭಾವಿಸಿಕೊಂಡಿದ್ದಾರೆ. ಬೆದರಿಸಿ, ಹಂಗಿಸಿ, ಕತ್ತಿ ತೋರಿಸಿ ಜಿಲ್ಲಾಡಳಿತ ನಿಯಂತ್ರಿಸುತ್ತಿದ್ದ ಕೊತ್ವಾಲನ ಶಿಷ್ಯರಿಗೆ ಬಿಜೆಪಿ ಸಚಿವರು ಬಿಸಿ ತುಪ್ಪವಾಗಿ ಪರಿಣಮಿಸಿದ್ದರು. ಹೀಗಾಗಿ ಸಿಎಂ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ #ಕಾಂಗ್ರೆಸ್‌ಗೂಂಡಾಗಿರಿ ಸೃಷ್ಟಿಸಿದರು. ಸರ್ಕಾರಿ ಕಾರ್ಯಕ್ರಮದಲ್ಲಿ ಡಿಕೆ ಡಿಕೆ ಎಂದು ಘೋಷಣೆ ಮಾಡಿದ್ದು, ಕಪ್ಪು ಭಾವುಟ ಪ್ರದರ್ಶನ ಮಾಡಿದ್ದು ಎಲ್ಲವೂ ಪೂರ್ವ ನಿಯೋಜಿತ. ಗಲಾಟೆ ಮಾಡಬೇಕು ಎಂಬ ಷಡ್ಯಂತ್ರ ರೂಪಿಸಿಯೇ ನಿನ್ನೆ ವೇದಿಕೆ ಸೃಷ್ಟಿ ಮಾಡಿದ್ದರು. ಗೂಂಡಾ ಸಹೋದರರಿಗೆ ಇಂತಹ ಪ್ರಹಸನ ಸೃಷ್ಟಿ ಹೊಸತಲ್ಲ’ವೆಂದು ಬಿಜೆಪಿ ಟೀಕಿಸಿದೆ.
ಸರ್ಕಾರಿ ಕಾರ್ಯಕ್ರಮದಲ್ಲಿ ಡಿಕೆ ಡಿಕೆ ಎಂದು ಘೋಷಣೆ ಮಾಡಿದ್ದು, ಕಪ್ಪು ಭಾವುಟ ಪ್ರದರ್ಶನ ಮಾಡಿದ್ದು ಎಲ್ಲವೂ ಪೂರ್ವ ನಿಯೋಜಿತ.
ಗಲಾಟೆ ಮಾಡಬೇಕು ಎಂಬ ಷಡ್ಯಂತ್ರ ರೂಪಿಸಿಯೇ ನಿನ್ನೆ ವೇದಿಕೆ ಸೃಷ್ಟಿ ಮಾಡಿದ್ದರು. ಗೂಂಡಾ ಸಹೋದರರಿಗೆ ಇಂತಹ ಪ್ರಹಸನ ಸೃಷ್ಟಿ ಹೊಸತಲ್ಲ.#ಕಾಂಗ್ರೆಸ್‌ಗೂಂಡಾಗಿರಿ
— BJP Karnataka (@BJP4Karnataka) January 4, 2022
‘ಕಾಂಗ್ರೆಸ್ ಸಂಸದ #DKSuresh ಕೇವಲ ಶಿಷ್ಟಾಚಾರ ಉಲ್ಲಂಘಿಸಿದ್ದಲ್ಲ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ನಾಡಪ್ರಭು ಕೆಂಪೇಗೌಡರಿಗೆ ಅವಮಾನ ಮಾಡಿದ್ದಾರೆ. ಸರ್ಕಾರಿ ಕಾರ್ಯಕ್ರಮದಲ್ಲಿ ಗೂಂಡಾಗಿರಿ ಪ್ರದರ್ಶಿಸಿದ ಕಾಂಗ್ರೆಸ್(Congress) ಪಕ್ಷದ ನಾಯಕರನ್ನು ರಾಜ್ಯದ ಜನತೆ ಎಂದಿಗೂ ಕ್ಷಮಿಸುವುದಿಲ್ಲ. ಕೆಂಪೇಗೌಡರು ಆಳಿದ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ತೋರಿದ ಗೂಂಡಾ ವರ್ತನೆ ಖಂಡನೀಯ. ರಾಜ್ಯದ ಮರ್ಯಾದೆಯನ್ನು ಮಣ್ಣುಪಾಲು ಮಾಡುವ ನಾಯಕರನ್ನು ಕಾಂಗ್ರೆಸ್ ಬೆಳೆಸುತ್ತಿದೆ. ಇಂತಹ ಅನೈತಿಕ ರಾಜಕಾರಣದ ಮೂಲಕ ಕಾಂಗ್ರೆಸ್ ರಾಜ್ಯದ ಜನತೆಗೆ ಯಾವ ಸಂದೇಶ ನೀಡುತ್ತಿದ್ದಾರೆ?’ ಅಂತಾ ಬಿಜೆಪಿ ಪ್ರಶ್ನಿಸಿದೆ.
ಕಾಂಗ್ರೆಸ್ ಸಂಸದ #DKSuresh ಕೇವಲ ಶಿಷ್ಟಾಚಾರ ಉಲ್ಲಂಘಿಸಿದ್ದಲ್ಲ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಹಾಗೂ ನಾಡಪ್ರಭು ಕೆಂಪೇಗೌಡರಿಗೆ ಅವಮಾನ ಮಾಡಿದ್ದಾರೆ.
ಸರ್ಕಾರಿ ಕಾರ್ಯಕ್ರಮದಲ್ಲಿ ಗೂಂಡಾಗಿರಿ ಪ್ರದರ್ಶಿಸಿದ @INCKarnataka ಪಕ್ಷದ ನಾಯಕರನ್ನು ರಾಜ್ಯದ ಜನತೆ ಎಂದಿಗೂ ಕ್ಷಮಿಸುವುದಿಲ್ಲ.#ಕಾಂಗ್ರೆಸ್‌ಗೂಂಡಾಗಿರಿ
— BJP Karnataka (@BJP4Karnataka) January 4, 2022
ಇದನ್ನೂ ಓದಿ: #ಕಾಂಗ್ರೆಸ್‌ಗೂಂಡಾಗಿರಿ, "ಕಾಂಗ್ರೆಸ್ ಗೂಂಡಾಗಳನ್ನು ತಯಾರು ಮಾಡುವ ಫ್ಯಾಕ್ಟರಿ": ಬಿಜೆಪಿ ಟ್ವೀಟಾಸ್ತ್ರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.