ಟೆಸ್ಟ್ ತಂಡದಿಂದ ಹೊರಗೆ ಹೊಗಲಿದ್ದಾರೆ ಈ ಇಬ್ಬರು ಆಟಗಾರರು...!

ದಕ್ಷಿಣ ಆಫ್ರಿಕಾದ ವಿರುದ್ಧ ಭಾರತ ತಂಡವು 2-1 ಅಂತರದಿಂದ ಸೋಲನ್ನು ಅನುಭವಿಸಿರುವ ಕಾರಣ ಈಗ ತಂಡದಲ್ಲಿ ಮೇಜರ್ ಸರ್ಜರಿ ಆಗುವ ಸಾಧ್ಯತೆಗಳು ಅಧಿಕವಾಗಿವೆ.

Last Updated : Jan 15, 2022, 10:53 PM IST
  • ದಕ್ಷಿಣ ಆಫ್ರಿಕಾದ ವಿರುದ್ಧ ಭಾರತ ತಂಡವು 2-1 ಅಂತರದಿಂದ ಸೋಲನ್ನು ಅನುಭವಿಸಿರುವ ಕಾರಣ ಈಗ ತಂಡದಲ್ಲಿ ಮೇಜರ್ ಸರ್ಜರಿ ಆಗುವ ಸಾಧ್ಯತೆಗಳು ಅಧಿಕವಾಗಿವೆ.
  • ಮಧ್ಯಮ ಕ್ರಮಾಂಕದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲರಾಗಿರುವ ಅಜಿಂಕ್ಯಾ ರಹಾನೆ, ಮತ್ತು ಚೇತೆಶ್ವರ್ ಪೂಜಾರ ಅವರು ಟೆಸ್ಟ್ ತಂಡದಿಂದ ಹೊರಕ್ಕೆ ಹೋಗುವ ಸಾಧ್ಯತೆಗಳು ಅಧಿಕವಾಗಿವೆ
  ಟೆಸ್ಟ್ ತಂಡದಿಂದ ಹೊರಗೆ ಹೊಗಲಿದ್ದಾರೆ ಈ ಇಬ್ಬರು ಆಟಗಾರರು...! title=
file photo

ನವದೆಹಲಿ: ದಕ್ಷಿಣ ಆಫ್ರಿಕಾದ ವಿರುದ್ಧ ಭಾರತ ತಂಡವು 2-1 ಅಂತರದಿಂದ ಸೋಲನ್ನು ಅನುಭವಿಸಿರುವ ಕಾರಣ ಈಗ ತಂಡದಲ್ಲಿ ಮೇಜರ್ ಸರ್ಜರಿ ಆಗುವ ಸಾಧ್ಯತೆಗಳು ಅಧಿಕವಾಗಿವೆ.

ಮಧ್ಯಮ ಕ್ರಮಾಂಕದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲರಾಗಿರುವ ಅಜಿಂಕ್ಯಾ ರಹಾನೆ, ಮತ್ತು ಚೇತೆಶ್ವರ್ ಪೂಜಾರ ಅವರು ಟೆಸ್ಟ್ ತಂಡದಿಂದ ಹೊರಕ್ಕೆ ಹೋಗುವ ಸಾಧ್ಯತೆಗಳು ಅಧಿಕವಾಗಿವೆ.ಅವರ ಸ್ಥಾನದಲ್ಲಿ ಶುಬ್ಮನ್ ಗಿಲ್ ಅವರು ಸ್ಥಾನವನ್ನು ಗಿಟ್ಟಿಸಲಿದ್ದಾರೆ.

ಇದನ್ನೂ ಓದಿ: Big News: ಬೆಂಗಳೂರಲ್ಲಿ ಮತ್ತೊಂದು ಅಗ್ನಿ ಅವಘಡ, ಧಗಧಗಿಸಿ ಹೊತ್ತಿ ಉರಿದ ಶಾಂಪಿಂಗ್ ಮಾಲ್!

ಭಾರತ ತಂಡವು ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಸರಣಿಯನ್ನು ಆಡಲಿದ್ದು, ಫೆಬ್ರವರಿ 25 ರಂದು ಬೆಂಗಳೂರಿನಲ್ಲಿ ಪ್ರಾರಂಭವಾಗುತ್ತದೆ ಮತ್ತು ಕನಿಷ್ಠ ಎರಡು ಮಧ್ಯಮ ಕ್ರಮಾಂಕದ ಆಟಗಾರಿಗೆ ಸ್ಥಾನ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.ರೋಹಿತ್ ಶರ್ಮಾ ಆ ಟೆಸ್ಟ್ ಸರಣಿಗೆ ಫಿಟ್ ಆಗುವ ನಿರೀಕ್ಷೆಯಿದೆ ಮತ್ತು ಕೆಎಲ್ ರಾಹುಲ್ ಜೊತೆಗೆ ಅವರ ಆರಂಭಿಕ ಆಟಗಾರನಾಗಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.ಈಗ ಶುಭ್ಮನ್ ಗಿಲ್ ಗೆ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ನೀಡುವ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ,

ಇತ್ತೀಚಿಗೆ ಈ ಇಬ್ಬರೂ ಆಟಗಾರರ ಫಾರ್ಮ್ ವಿಚಾರವಾಗಿ ಮಾತನಾಡಿದ ಸುನಿಲ್ ಗವಾಸ್ಕರ್ "ಶ್ರೀಲಂಕಾ ಸರಣಿಗೆ ಪೂಜಾರ ಮತ್ತು ರಹಾನೆ ಇಬ್ಬರನ್ನೂ ತಂಡದಿಂದ ಕೈಬಿಡಲಾಗುವುದು ಎಂದು ನಾನು ಭಾವಿಸುತ್ತೇನೆ. ಶ್ರೇಯಸ್ ಅಯ್ಯರ್ ಮತ್ತು ಹನುಮ ವಿಹಾರಿ ಇಬ್ಬರೂ ಆಡುತ್ತಾರೆ" ಎಂದು ಹೇಳಿದರು.

ಇದನ್ನೂ ಓದಿ: Ind vs SA : 'ಕ್ರಿಕೆಟ್‌ನಿಂದ ಅಮಾನತು ಮಾಡಿ ದಂಡ ವಿಧಿಸಿ' : ಕೊಹ್ಲಿ ವಿರುದ್ಧ ವಾಗ್ದಾಳಿ!

"ಮೂರನೇ ಕ್ರಮಾಂಕದಲ್ಲಿ ಯಾರು ಆಡುತ್ತಾರೆ ಎಂಬುದನ್ನು ನಾವು ನೋಡಬೇಕಾಗಿದೆ. ಪೂಜಾರ ಬದಲಿಗೆ ಹನುಮ ವಿಹಾರಿ ಮತ್ತು ರಹಾನೆ ಬದಲಿಗೆ ಶ್ರೇಯಸ್ ಅಯ್ಯರ್ ಐದನೇ ಸ್ಥಾನದಲ್ಲಿರಬಹುದು, ಆದರೆ ನಾವು ನೋಡಬೇಕಾಗಿದೆ.ಅದೇನೇ ಇದ್ದರೂ, ಶ್ರೀಲಂಕಾ ವಿರುದ್ಧ ಖಂಡಿತವಾಗಿಯೂ ಎರಡು ಸ್ಥಾನಗಳು ಇರುತ್ತವೆ ಎಂದು ನಾನು ಭಾವಿಸುತ್ತೇನೆ, ”ಎಂದು ಗವಾಸ್ಕರ್ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News