ನವದೆಹಲಿ : 7th Pay Commission today: ಸರ್ಕಾರಿ ನೌಕರರಿಗೊಂದು ಭರ್ಜರಿ ಸುದ್ದಿ. ತುಟ್ಟಿಭತ್ಯೆಯ (Dearness Allowance) ಲೆಕ್ಕಾಚಾರಕ್ಕೆ ಸಂಬಂಧಿಸಿದಂತೆ ಬದಲಾವಣೆಗಳನ್ನು ಮಾಡಲಾಗಿದೆ. ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು (Ministry of Labour and Employment) ತುಟ್ಟಿಭತ್ಯೆಯ ಲೆಕ್ಕಾಚಾರದ ಸೂತ್ರವನ್ನು ಬದಲಾಯಿಸಿದೆ.
ತುಟ್ಟಿ ಭತ್ಯೆಯ ಮೂಲ ವರ್ಷವನ್ನು (Base Year) 2016 ರಲ್ಲಿ ಬದಲಾಯಿಸಲಾಗಿದೆ. ಸಚಿವಾಲಯವು ವೇತನ ದರ ಸೂಚ್ಯಂಕದ ಹೊಸ ಸರಣಿಯನ್ನು (WRI-Wage Rate Index) ಬಿಡುಗಡೆ ಮಾಡಿದೆ. 1963-65 ರ ಮೂಲ ವರ್ಷದ ಹಳೆಯ ಸರಣಿಯನ್ನು 2016=100 ರ ಮೂಲ ವರ್ಷದೊಂದಿಗೆ ಬದಲಾಯಿಸಲಾಗುವುದು ಎಂದು ಕಾರ್ಮಿಕ ಸಚಿವಾಲಯ ಹೇಳಿದೆ. ಅಂದರೆ, ಈಗ ತುಟ್ಟಿಭತ್ಯೆಯ (DA) ಲೆಕ್ಕಾಚಾರದ ವಿಧಾನದಲ್ಲಿ ಬದಲಾವಣೆಯಾಗಲಿದೆ.
ಇದನ್ನೂ ಓದಿ : 18-01-2022 Today Gold Price: ಬೆಳ್ಳಿ ದರ ಏರಿಕೆ, ಯಥಾಸ್ಥಿತಿ ಕಾಯ್ದುಕೊಂಡ ಬಂಗಾರದ ಬೆಲೆ
ಬೇಸ್ ಇಯರ್ ಬದಲಾಯಿಸಿದ ಸರ್ಕಾರ :
ಹಣದುಬ್ಬರದ ದತ್ತಾಂಶದ ಆಧಾರದ ಮೇಲೆ, ಸರ್ಕಾರವು ಕಾಲಕಾಲಕ್ಕೆ ಪ್ರಮುಖ ಆರ್ಥಿಕ ಸೂಚಕಗಳಿಗಾಗಿ ಮೂಲ ವರ್ಷ ಅಂದರೆ ಬೇಸ್ ಇಯರ್ (Inflation Base Year) ಅನ್ನು ಪರಿಷ್ಕರಿಸುತ್ತದೆ. ಆರ್ಥಿಕತೆಯಲ್ಲಿ ಬರುವ ಬದಲಾವಣೆಗಳ ಆಧಾರದ ಮೇಲೆ ಇದನ್ನು ಮಾಡಲಾಗುತ್ತದೆ. ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ (ILO), ರಾಷ್ಟ್ರೀಯ ಅಂಕಿಅಂಶಗಳ ಆಯೋಗದ (National Statistical Commission) ಶಿಫಾರಸುಗಳ ಪ್ರಕಾರ, ವ್ಯಾಪ್ತಿಯನ್ನು ವಿಸ್ತರಿಸಲು ಮತ್ತು ಸೂಚ್ಯಂಕವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ವೇತನ ದರ ಸೂಚ್ಯಂಕದ ಮೂಲ ವರ್ಷವನ್ನು 1963-65 ರಿಂದ 2016 ಕ್ಕೆ ಬದಲಾಯಿಸಲಾಗಿದೆ.
ತುಟ್ಟಿಭತ್ಯೆಯನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?
ಸಾಮಾನ್ಯವಾಗಿ ತುಟ್ಟಿಭತ್ಯೆಯನ್ನು (Dearness Allowance) ಪ್ರತಿ 6 ತಿಂಗಳಿಗೊಮ್ಮೆ ಜನವರಿ ಮತ್ತು ಜುಲೈನಲ್ಲಿ ಬದಲಾಯಿಸಲಾಗುತ್ತದೆ. ಪ್ರಸ್ತುತ ತುಟ್ಟಿಭತ್ಯೆಯ ದರವನ್ನು ಮೂಲ ವೇತನದೊಂದಿಗೆ (Basic Pay) ಗುಣಿಸಿ, ತುಟ್ಟಿಭತ್ಯೆಯ ಮೊತ್ತವನ್ನು ನಿರ್ಧರಿಸಲಾಗುತ್ತದೆ.
ಇದನ್ನೂ ಓದಿ : SBI ಗ್ರಾಹಕರಿಗೆ ಸಿಹಿ ಸುದ್ದಿ! FD ಬಡ್ಡಿ ದರ ಹೆಚ್ಚಿಸಿದೆ ಬ್ಯಾಂಕ್
ತುಟ್ಟಿಭತ್ಯೆ ಎಂದರೇನು?
ತುಟ್ಟಿಭತ್ಯೆ (DA) ಎಂದರೆ , ಸರ್ಕಾರಿ ನೌಕರರಿಗೆ ಅವರ ಜೀವನ ವೆಚ್ಚವನ್ನು (Cost of Living) ಸುಧಾರಿಸಲು ನೀಡುವ ಮೊತ್ತವಾಗಿರುತ್ತದೆ. ಹಣದುಬ್ಬರದ ಹೊರತಾಗಿಯೂ ಉದ್ಯೋಗಿಗಳ ಜೀವನ ಪರಿಸ್ಥಿತಿಗಳ ಮೇಲೆ ಯಾವುದೇ ಪರಿಣಾಮ ಬೀರದಂತೆ ಈ ಹಣವನ್ನು ಉದ್ಯೋಗಿಗಳಿಗೆ ನೀಡಲಾಗುತ್ತದೆ. ಈ ಹಣವನ್ನು ಸರ್ಕಾರಿ ನೌಕರರು, ಸಾರ್ವಜನಿಕ ವಲಯದ ನೌಕರರು ಮತ್ತು ಪಿಂಚಣಿದಾರರಿಗೆ ನೀಡಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.