Punith Raj Kumar : ಅಪ್ಪು ಅಗಲಿ ಇಂದಿಗೆ 3 ತಿಂಗಳು : ಸಮಾಧಿಗೆ ಭೇಟಿ ನೀಡಿದ ಕುಟುಂಬಸ್ಥರು!

ಅಪ್ಪು ಕುಟುಂಬಸ್ಥರು ಇಂದು ಮೂರನೇ ತಿಂಗಳ ಪುಣ್ಯ ತಿಥಿ ಕಾರ್ಯ ಮಾಡಲು ಕಂಠೀರವ ಸ್ಟುಡಿಯೋಗೆ ಆಗಮಿಸಿದ್ದರು.

Written by - Channabasava A Kashinakunti | Last Updated : Jan 29, 2022, 01:33 PM IST
  • ಪುನೀತ್ ರಾಜ್‍ಕುಮಾರ್ ನಮ್ಮನ್ನು ಅಗಲಿ ಇಂದಿಗೆ ಸರಿಯಾಗಿ 3 ತಿಂಗಳು
  • ಅಕ್ಟೋಬರ್ -29, 2021 ರಂದು ಅಪ್ಪು ಕೊನೆಯುಸಿರೆಳೆದಿದ್ದಾರೆ.
  • ಇಂದು ಬೆಳಿಗ್ಗೆ ಪುನೀತ್ ಪತ್ನಿಅಶ್ವಿನಿ, ಮಗಳು, ರಾಘಣ್ಣ ಸೇರಿದಂತೆ‌ ಕುಟುಂಬಸ್ಥರು ಪುಣ್ಯತಿಥಿಯಲ್ಲಿ ಭಾಗಿ
Punith Raj Kumar : ಅಪ್ಪು ಅಗಲಿ ಇಂದಿಗೆ 3 ತಿಂಗಳು : ಸಮಾಧಿಗೆ ಭೇಟಿ ನೀಡಿದ ಕುಟುಂಬಸ್ಥರು! title=

ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ನಮ್ಮನ್ನು ಅಗಲಿ ಇಂದಿಗೆ ಸರಿಯಾಗಿ ಮೂರು ತಿಂಗಳು ಕಳೆಯಿತು. ಅಪ್ಪು 29 ಅಕ್ಟೋಬರ್ 2021 ರಂದು ಕೊನೆಯುಸಿರೆಳೆದಿದ್ದಾರೆ. 

ಅಪ್ಪು ಕುಟುಂಬಸ್ಥರು(Punith Raj Kumar Family Members) ಇಂದು ಮೂರನೇ ತಿಂಗಳ ಪುಣ್ಯ ತಿಥಿ ಕಾರ್ಯ ಮಾಡಲು ಕಂಠೀರವ ಸ್ಟುಡಿಯೋಗೆ ಆಗಮಿಸಿದ್ದರು. ಪುಣ್ಯ ತಿಥಿ ಕುಟುಂಬಸ್ಥರು, ಅಭಿಮಾನಿಗಳಿಗೆ ಅನ್ನದಾನ ಕಾರ್ಯಕ್ರಮ ಮತ್ತು 500 ಸಸಿಗಳನ್ನು ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅಲ್ಲದೆ, ಸ್ಕಿಲ್ ಡಿಪಾರ್ಟ್​ಮೆಂಟ್ ವತಿಯಿಂದ ಅಪ್ಪು ಸಮಾಧಿಗೆ ಸಂಜೆ 6 ಘಂಟೆಗೆ ದೀಪೋತ್ಸವ ಮಾಡಲಿದ್ದಾರೆ. 

ಇದನ್ನೂ ಓದಿ : Pushpa ಚಿತ್ರದ Saami Saami ಹಾಡಿನ ಈ ಪದಗಳ ಬಳಕೆಗೆ Sunidhi Chauhan ಆಕ್ಷೇಪವಿತ್ತಂತೆ

ಇಂದು ಬೆಳಿಗ್ಗೆ ಪುನೀತ್ ಪತ್ನಿಅಶ್ವಿನಿ(Ashwini Punith Raj Kumar), ಮಗಳು, ರಾಘಣ್ಣ ಸೇರಿದಂತೆ‌ ಕುಟುಂಬಸ್ಥರು ಪುಣ್ಯತಿಥಿಯಲ್ಲಿ ಭಾಗಿಯಾಗಿದ್ದರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಮೈಸೂರಲ್ಲಿ ಶೂಟಿಂಗ್ ನಲ್ಲಿದ್ದಾರೆ. ಹೀಗಾಗಿ ಸಮಾಧಿಗೆ ಬರೋ ಸಾಧ್ಯತೆ ಕಡಿಮೆ ಇದೆ. 

ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಪುನೀತ್ ಪತ್ನಿಅಶ್ವಿನಿ, ಪುನೀತ್ ರಾಜ್ ಕುಮಾರ್(Punith Raj Kumar) ಅವರಿಗೆ ಕಾಡಿನ ಬಗ್ಗೆ ಕಾಳಜಿ ಇತ್ತು. ಹೀಗಾಗಿ ಅಭಿಮಾನಿಗಳ ದಂಡು ಹರಿದು ಬರುತ್ತಿದೆ. ಅಭಿಮಾನಿಗಳ ಮೂಲಕ ಏನು ವಾಪಸ್ ಕೊಡಬಹುದು ಅಂತ ಯೋಚಿಸಿದ್ದೇವೆ. ಅವರೆಲ್ಲರಿಗೂ ಗಿಡ ನೀಡಿ ಕಾಡು ಬೆಳೆಸೋದಕ್ಕೆ ಸಹಕಾರ ನೀಡುವಂತರ ಮನವಿ ಮಾಡ್ತಿದ್ದೇವೆ. ಗಿಡಗಳಲ್ಲಿ ಆತ್ಮ ವಾಸಿಸುತ್ತೆ ಅನ್ನೋ ಮಾತಿದೆ. ಇಡೀ ಕುಟುಂಬ ಸೇರಿ ಅವನ ಆತ್ಮಕ್ಕೆ ಗೌರವ ಸಲ್ಲಿಸೋ‌ ಕೆಲಸ ಮಾಡ್ತಿದ್ದಿವಿ.ಅಪ್ಪು ಮೂರನೇ ತಿಂಗಳ ತಿಥಿ ದಿನ ಆರಂಭಿಸಿದ್ದೇವೆ. ಇದನ್ನ ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ : ಹುಟ್ಟುಹಬ್ಬದ ಪ್ರಯುಕ್ತ ಶ್ರುತಿ ಹಾಸನ್ ಪಾತ್ರ ಅನಾವರಣಗೊಳಿಸಿದ ಸಲಾರ್ ಚಿತ್ರ ತಂಡ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News