7th Pay Commission: ಸರ್ಕಾರಿ ನೌಕರರ ತುಟ್ಟಿಭತ್ಯೆಯಲ್ಲಿ ಶೇ.14 ರಷ್ಟು ಹೆಚ್ಚಳ!

7th Pay Commission: ಕೇಂದ್ರ ನೌಕರರಿಗೆ (Central Government Employees) ಭಾರಿ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಉದ್ಯೋಗಿಗಳ DAಯಲ್ಲಿ ಶೇ.14ರಷ್ಟು ಹೆಚ್ಚಳವಾಗಿದ್ದು, ಇದರಿಂದ ಅವರಲ್ಲಿ ಬಂಪರ್ ಉತ್ಸಾಹ ಮೂಡಿದೆ. ಉದ್ಯೋಗಿಗಳ DA (7th CPC) ಹೆಚ್ಚಳದ ನಂತರ ಇದೀಗ  ಅವರ ಸಂಬಳದಲ್ಲಿಯೂ ಕೂಡ ಬಂಪರ್ ಹೆಚ್ಚಳವಾಗಿದೆ.

Written by - Nitin Tabib | Last Updated : Feb 1, 2022, 07:52 PM IST
  • ಕೇಂದ್ರ ನೌಕರರಿಗೆ ಸಂತಸದ ಸುದ್ದಿ
  • ತುಟ್ಟಿಭತ್ಯೆ ಶೇ.14ರಷ್ಟು ಹೆಚ್ಚಳ
  • ಯಾರಿಗೆ ಇದರ ಲಾಭ ತಿಳಿಯಲು ಸುದ್ದಿ ಓದಿ
7th Pay Commission:  ಸರ್ಕಾರಿ ನೌಕರರ ತುಟ್ಟಿಭತ್ಯೆಯಲ್ಲಿ ಶೇ.14 ರಷ್ಟು ಹೆಚ್ಚಳ! title=
7th Pay Commission Latest News (File Photo)

7Th Pay Commission Latest News: ಕೇಂದ್ರ ಸರ್ಕಾರಿ (Modi Government) ನೌಕರರಿಗೆ ದೊಡ್ಡ ಗುಡ್ ನ್ಯೂಸ್ ಪ್ರಕಟವಾಗಿದೆ. ಸರ್ಕಾರವು ನೌಕರರಿಗೆ ಹೊಸ ತುಟ್ಟಿಭತ್ಯೆ (DA) ಘೋಷಿಸಿದೆ. ಹೊಸ ಘೋಷಣೆಯ ನಂತರ ನೌಕರರ DA (Dearness Allowance) ಹೆಚ್ಚಳದಲ್ಲಿ ಶೇ.14ರಷ್ಟು ಹೆಚ್ಚಳವಾಗಿದ್ದು, ನೌಕರರಲ್ಲಿ ಉತ್ಸಾಹ ಮೂಡಿಸಿದೆ.

ಉದ್ಯೋಗಿಗಳ DA ಹೆಚ್ಚಳದ ನಂತರ (DA Hike Update), ಇದೀಗ  ಅವರ ಸಂಬಳದಲ್ಲಿ ಬಂಪರ್ ಹೆಚ್ಚಳವಾಗಿದೆ. ಆದರೆ ಈ ಘೋಷಣೆಯನ್ನು ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳ (CPSE) ಉದ್ಯೋಗಿಗಳಿಗೆ ಮಾತ್ರ ಮಾಡಲಾಗಿದೆ ಎಂಬುದು ಇಲ್ಲಿ ಗಮನಾರ್ಹ. ಈ ನೌಕರರ DAಯನ್ನು ಜನವರಿ ಅಂತ್ಯದಲ್ಲಿ ತಿದ್ದುಪಡಿ ಮಾಡಲಾಗಿದೆ.

ಇದನ್ನೂ ಓದಿ-Budget 2022: ಕಾವೇರಿ-ಪೆನ್ನಾರ್ ಸೇರಿ 5 ನದಿ ಜೋಡಣೆ ಯೋಜನೆಗಳ ಘೋಷಣೆ

ಎಷ್ಟು ತುಟ್ಟಿಭತ್ಯೆ (DA)
ಅಂಡರ್ ಸೆಕ್ರೆಟರಿ ಸ್ಯಾಮ್ಯುಯೆಲ್ ಹಕ್ ಪ್ರಕಾರ, “ಬೋರ್ಡ್ ಮಟ್ಟದಲ್ಲಿ ಮತ್ತು ಬೋರ್ಡ್ ಮಟ್ಟದ ಅಧಿಕಾರಿಗಳು ಮತ್ತು ಮೇಲ್ವಿಚಾರಕರ ಕೆಳಗಿನ ಸಿಪಿಎಸ್‌ಇಗಳಿಗೆ ಡಿಎ ದರಗಳನ್ನು ಪರಿಷ್ಕರಿಸಲಾಗಿದೆ. 2007 ರ ವೇತನ ಶ್ರೇಣಿಯ ಅಡಿಯಲ್ಲಿ CPSE ಗಳ ಅಧಿಕಾರಿಗಳು ಮತ್ತು ಫೆಡರಲ್ ಅಲ್ಲದ ಮೇಲ್ವಿಚಾರಕರಿಗೆ DA ದರವನ್ನು ಈಗ 184.1% ರಷ್ಟು ಮಾಡಲಾಗಿದೆ. ಇಲ್ಲಿಯವರೆಗೆ ಅವರು 170.5% ಡಿಎ ಪಡೆಯುತ್ತಿದ್ದರು. ಜುಲೈ 2021 ರಲ್ಲಿ, ಸರ್ಕಾರವು ತುಟ್ಟಿಭತ್ಯೆ ಹೆಚ್ಚಳವನ್ನು ಘೋಷಿಸಿತ್ತು. ಇದರ ನಂತರ, 7 ನೇ ವೇತನ ಆಯೋಗದ ಅಡಿಯಲ್ಲಿ ಕೇಂದ್ರ ನೌಕರರ ಡಿಎಯಲ್ಲಿ ಶೇ.11ರ ನೇರ ಜಿಗಿತ ಕಂಡುಬಂದಿದೆ. ಇದೇ ವೇಳೆ, CPSE ಗಳಲ್ಲಿ 2007 ರ ವೇತನ ಶ್ರೇಣಿಗಳ DA ಅನ್ನು ಸಹ ಹೆಚ್ಚಿಸಲಾಗಿದೆ.

ಇದನ್ನೂ ಓದಿ-ಕೇಂದ್ರದ ಬಜೆಟ್ ಮಂಡನೆ ಪೂಜೆಗೆ ಹಣವಿಲ್ಲದೆ ಶಾಸ್ತ್ರಕ್ಕೆ ತೆಂಗಿನಕಾಯಿ ಒಡೆದಂತಾಗಿದೆ!: ಕಾಂಗ್ರೆಸ್

ಈ ಹಿಂದೆಯೂ ಬಂಪರ್ ಹೆಚ್ಚಳವಾಗಿತ್ತು
ಕಳೆದ ವರ್ಷವೂ ಸಿಪಿಎಸ್‌ಇಗಳ ಉದ್ಯೋಗಿಗಳ ಡಿಎಯಲ್ಲಿ ಗಮನಾರ್ಹ ಹೆಚ್ಚಳವಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ನಾವು ಹಿಂದಿನ ತುಟ್ಟಿಭತ್ಯೆಯನ್ನು ನೋಡಿದರೆ, ಜುಲೈ 2021 ರಲ್ಲಿ, ಅವರ ತುಟ್ಟಿ ಭತ್ಯೆಯು ನೇರವಾಗಿ 159.9% ರಿಂದ 170.5% ಕ್ಕೆ ಏರಿಕೆಯಾಗಿದೆ. ಅಂದರೆ, ಡಿಎಯಲ್ಲಿ ಸುಮಾರು ಶೇ.11  ಹೆಚ್ಚಿಸಲಾಗಿದೆ. ಕೈಗಾರಿಕಾ ತುಟ್ಟಿ ಭತ್ಯೆ ಉದ್ಯೋಗಿಗಳಿಗೆ ಈ ಹೊಸ ದರದ DA ಅನ್ವಯವಾಗುತ್ತದೆ ಎಂಬುದನ್ನು ಗಮನಿಸಿ. ಸರ್ಕಾರಿ ನೌಕರರಿಗೆ ಸಂಬಳದ ಆಧಾರದ ಮೇಲೆ ಡಿಎ ನಿಗದಿ ಮಾಡಲಾಗುತ್ತದೆ. ಇಷ್ಟು ಮಾತ್ರವಲ್ಲದೆ, ನಗರ, ಅರೆನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವ ನೌಕರರಿಗೆ ತುಟ್ಟಿಭತ್ಯೆಯ ದರವು ವಿಭಿನ್ನವಾಗಿದೆ.

ಇದನ್ನೂ ಓದಿ-ಕೇಂದ್ರ ಬಜೆಟ್ ಅನ್ನು ತುಂಬಾ ಕಟುವಾಗಿ ಟೀಕಿಸಿದ ಮಾಜಿ ಸಿಎಂ ಕುಮಾರಸ್ವಾಮಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News