ಬೆಂಗಳೂರು: ಐಪಿಎಲ್ 2022 (IPL 2022) ಮೆಗಾ ಹರಾಜಿನ ಎರಡನೇ ದಿನದಂದು ಎಡಗೈ ವೇಗಿ ಜಯದೇವ್ ಉನದ್ಕತ್ ಅವರನ್ನು ಐದು ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಚಾಂಪಿಯನ್ ಆದ ಮುಂಬೈ ಇಂಡಿಯನ್ಸ್ (MI) 1.30 ಕೋಟಿಗೆ ಖರೀದಿಸಿದೆ.
ಇದನ್ನೂ ಓದಿ: IPL 2022 Mega Auction:ಭರ್ಜರಿ ಮೊತ್ತಕ್ಕೆ ಪಂಜಾಬ್ ಕಿಂಗ್ಸ್ ಪಾಲಾದ ಇಂಗ್ಲೆಂಡ್ ಆಲ್ರೌಂಡರ್
ಜಯದೇವ್ ಉನದ್ಕತ್ (Jaydev Unadkat) ಮೂಲ ಬೆಲೆ 75 ಲಕ್ಷ. ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವೆ ಇವರನ್ನು ಕೊಳ್ಳಲು ಬಿಡ್ಡಿಂಗ್ ನಡೆಯಿತು.
ಐಪಿಎಲ್ನ ಮೊದಲ 14 ಆವೃತ್ತಿಗಳಲ್ಲಿ, ಕೇವಲ ಒಬ್ಬ ಭಾರತೀಯ ಬೌಲರ್ ಮಾತ್ರ ಐಪಿಎಲ್ ಹರಾಜಿನಲ್ಲಿ 10 ಕೋಟಿ ರೂ.ಗಿಂತ ಹೆಚ್ಚು ಬಿಡ್ ಅನ್ನುಪಡೆದಿದ್ದಾರೆ. 2018 ರಲ್ಲಿ ಜಯದೇವ್ ಉನದ್ಕತ್ ಅವರನ್ನು ರಾಜಸ್ಥಾನ ರಾಯಲ್ಸ್ ರೂ 11.5 ಕೋಟಿಗೆ ಪಡೆದುಕೊಂದಿತ್ತು.
ಉನದ್ಕತ್ ಅವರು ಐದು ಫ್ರಾಂಚೈಸಿಗಳಿಗಾಗಿ ಆಡಿದ್ದಾರೆ. ನೈಟ್ ರೈಡರ್ಸ್, ಡೆಲ್ಲಿ ಡೇರ್ಡೆವಿಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ರೈಸಿಂಗ್ ಪುಣೆ ಸೂಪರ್ಜೈಂಟ್ ಹಾಗೂ ರಾಜಸ್ಥಾನ ರಾಯಲ್ಸ್ ರಾಯಲ್ಸ್ನೊಂದಿಗೆ ಆಡಿದ್ದಾರೆ.
ಇದನ್ನೂ ಓದಿ: IPL 2022: ಭಾರತಕ್ಕೆ U-19 ವಿಶ್ವಕಪ್ ಗೆದ್ದು ಕೊಟ್ಟ ನಾಯಕ ಯಶ್ ಧುಲ್ ಗೆ ಖುಲಾಯಿಸಿದ ಅದೃಷ್ಟ!
ಉನದ್ಕತ್ ಅವರು 2010 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ಗಾಗಿ 8 ಲಕ್ಷ ರೂಪಾಯಿ ಗಳಿಸುವ ಮೂಲಕ ಅನ್ಕ್ಯಾಪ್ಡ್ ಆದರು. 19 ವರ್ಷ ವಯಸ್ಸಿನವರಾಗಿದ್ದ ಉನದ್ಕತ್ ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಪದಾರ್ಪಣೆ ಮಾಡಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.